ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಭಿಮಾನಿಗಳ ಆಕ್ರೋಶಕ್ಕೆ ವಿರಾಟ್ ಕೊಹ್ಲಿ ತಣ್ಣನೆಯ ಪ್ರತಿಕ್ರಿಯೆ

virat kohli reacted to trolls on twitter over his leave india comment

ನವದೆಹಲಿ, ನವೆಂಬರ್ 8: ಭಾರತದ ಬ್ಯಾಟ್ಸ್‌ಮನ್‌ಗಳಿಗಿಂತ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳೇ ಇಷ್ಟ ಎಂದು ಹೇಳಿದ ಕ್ರಿಕೆಟ್ ಅಭಿಮಾನಿ ವಿರುದ್ಧ ದೇಶ ಬಿಟ್ಟುಹೋಗುವಂತೆ ಕಿಡಿಕಾರಿದ್ದ ವಿರಾಟ್ ಕೊಹ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಕೊಹ್ಲಿ ಆಟದಲ್ಲಿ ವಿಶೇಷತೆಯಿಲ್ಲ. ಅವರೊಬ್ಬ ವೈಭವೀಕರಣಕ್ಕೆ ಒಳಗಾದ ಆಟಗಾರ. ಭಾರತದ ಬ್ಯಾಟ್ಸ್‌ಮನ್‌ಗಳಿಗಿಂತ ನಾನು ಆಸ್ಟ್ರೇಲಿಯಾ, ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಆಟವನ್ನು ನೋಡಲು ಇಷ್ಟಪಡುತ್ತೇನೆ ಎಂದು ಅಭಿಮಾನಿಯೊಬ್ಬರು ಹೇಳಿದ್ದರು.

ಭಾರತದಲ್ಲಿ ಏಕಿದ್ದೀರಾ? ಬೇರೆ ದೇಶಕ್ಕೆ ಹೋಗಿ: ಕೊಹ್ಲಿ ಮಾತಿಗೆ ಟ್ವಿಟ್ಟಿಗರ ಆಕ್ರೋಶ ಭಾರತದಲ್ಲಿ ಏಕಿದ್ದೀರಾ? ಬೇರೆ ದೇಶಕ್ಕೆ ಹೋಗಿ: ಕೊಹ್ಲಿ ಮಾತಿಗೆ ಟ್ವಿಟ್ಟಿಗರ ಆಕ್ರೋಶ

ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ವಿರಾಟ್ ಕೊಹ್ಲಿ, ನೀವು ಭಾರತದಲ್ಲಿ ನೆಲಸಿರಬಾರದು ಎನಿಸುತ್ತಿದೆ. ಭಾರತ ಬಿಟ್ಟು ತೊಲಗಿ ಬೇರೆ ಎಲ್ಲಾದರೂ ಹೋಗಿ ಬದುಕಿ ಎಂದು ಕಿಡಿಕಾರಿದ್ದರು.

ಒಂದೇ ಓವರ್‌ನಲ್ಲಿ 43 ರನ್!: ಲಿಸ್ಟ್ ಎ ಕ್ರಿಕಟ್‌ನಲ್ಲಿ ವಿಶ್ವದಾಖಲೆಒಂದೇ ಓವರ್‌ನಲ್ಲಿ 43 ರನ್!: ಲಿಸ್ಟ್ ಎ ಕ್ರಿಕಟ್‌ನಲ್ಲಿ ವಿಶ್ವದಾಖಲೆ

ಕೊಹ್ಲಿಯ ಈ ಪ್ರತಿಕ್ರಿಯೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಪ್ರತಿಯೊಬ್ಬರಿಗೂ ಅವರ ಆಯ್ಕೆಯ ಸ್ವಾತಂತ್ರ್ಯ ಇರುತ್ತದೆ. ನೀವು ವಿದೇಶಿ ಬ್ರ್ಯಾಂಡ್ ಉತ್ಪನ್ನಗಳನ್ನು ಪ್ರಚಾರ ಮಾಡುತ್ತೀರಲ್ಲ ಎಂದು ಅನೇಕರು ತಿರುಗೇಟು ನೀಡಿದ್ದರು.

ಐದು ವರ್ಷದ ಬಳಿಕ ಮೊದಲ ಟೆಸ್ಟ್ ಪಂದ್ಯ ಗೆದ್ದ ಜಿಂಬಾಬ್ವೆಐದು ವರ್ಷದ ಬಳಿಕ ಮೊದಲ ಟೆಸ್ಟ್ ಪಂದ್ಯ ಗೆದ್ದ ಜಿಂಬಾಬ್ವೆ

ಇದಕ್ಕೆ ಕೊಹ್ಲಿ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಟ್ರಾಲಿಂಗ್ ಅನ್ನುವುದು ನನಗಲ್ಲ ಗೆಳೆಯರೇ. ಟ್ರಾಲ್ ಆಗುವುದಕ್ಕೆ ನಾನು ಸಿದ್ಧನಿದ್ದೇನೆ. ಆತನ ಹೇಳಿಕೆಯಲ್ಲಿ 'ಈ ಭಾರತೀಯರು' ಎಂಬ ಪದ ಹೇಗೆ ಬಳಸಲಾಗಿತ್ತು ಎಂಬುದರ ಬಗ್ಗೆ ನಾನು ಮಾತನಾಡಿದ್ದೆ. ಅಷ್ಟೇ. ಆಯ್ಕೆಯ ಸ್ವಾತಂತ್ರ್ಯವನ್ನು ನಾನೂ ಗೌರವಿಸುತ್ತೇನೆ. ಅದನ್ನು ಹಗುರವಾಗಿ ತೆಗೆದುಕೊಳ್ಳಿ ಮತ್ತು ಹಬ್ಬದ ಅವಧಿಯನ್ನು ಸಂಭ್ರಮಿಸಿ ಎಂದು ಕೊಹ್ಲಿ ಟ್ವೀಟ್ ಮಾಡಿ, ಅಭಿಮಾನಿಗಳ ಆಕ್ರೋಶವನ್ನು ತಣಿಸುವ ಪ್ರಯತ್ನ ಮಾಡಿದ್ದಾರೆ.

Story first published: Thursday, November 8, 2018, 22:32 [IST]
Other articles published on Nov 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X