ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ನಾಯಕ ಕೊಹ್ಲಿಗೆ ಪಾಲಿ ಉಮ್ರಿಗಾರ್ ಪ್ರಶಸ್ತಿ

By Mahesh
ನಾಯಕ ಕೊಹ್ಲಿಗೆ ಪಾಲಿ ಉಮ್ರಿಗಾರ್ ಪ್ರಶಸ್ತಿ | Oneindiakannada
Virat Kohli set to receive Polly Umrigar Award

ಬೆಂಗಳೂರು, ಜೂನ್ 07: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಸತತವಾಗಿ ಎರಡು ವರ್ಷಗಳ ಕಾಲ ಪಾಲಿ ಉಮ್ರಿಗಾರ್ ಪ್ರಶಸ್ತಿ ಗಳಿಸಿದ್ದು, ಜೂನ್ 12ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

2016-17 ಹಾಗೂ 2017-18ನೇ ಸಾಲಿನ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಇದಾಗಿದೆ. ವಿರಾಟ್ ಕೊಹ್ಲಿ ಅವರು ಪುರುಷರ ವಿಭಾಗದಲ್ಲಿ, ಹರ್ಮನ್ ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧಾನ ಅವರು ಮೊದಲ ಬಾರಿಗೆ ಪ್ರಶಸ್ತಿ ಗಳಿಸುತ್ತಿದ್ದಾರೆ.

ಐಸಿಸಿ ಚಾಂಪಿಯನ್‌ಶಿಪ್ ದಂಡ ಉಳಿಸಿಕೊಂಡ ಭಾರತಐಸಿಸಿ ಚಾಂಪಿಯನ್‌ಶಿಪ್ ದಂಡ ಉಳಿಸಿಕೊಂಡ ಭಾರತ

ಅತಿ ಹೆಚ್ಚು ರನ್ ಗಳಿಸಿದವರು, ಅಂಡರ್ 16ರ ವಿಜಯ್ ಮರ್ಚಂಟ್ ಟ್ರೋಫಿ, ಜ್ಯೂನಿಯರ್ ಹಾಗೂ ಸೀನಿಯರ್ ಕ್ರಿಕೆಟ್ ಟೂರ್ನಮೆಂಟ್ ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರು, ಅತಿ ಹೆಚ್ಚು ವಿಕೆಟ್ ಕಿತ್ತವರಿಗೆ ಜಗ್ಮೋಹನ್ ದಾಲ್ಮಿಯಾ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಪ್ರಶಸ್ತಿ ಮೊತ್ತವನ್ನು 1 ಲಕ್ಷ ರು ನಿಂದ 1.5 ಲಕ್ಷ ರುಗೇರಿಸಲಾಗಿದೆ.

2017-18 ಸಾಲಿನ ಪ್ರಶಸ್ತಿ ಪಟ್ಟಿ:
* ಬಿಸಿಸಿಐ ಮಹಿಳಾ (ಜೀವಮಾನ) ಸಾಧಕಿ : ಸುಧಾ ಶಾಹ್
* ಬಿಸಿಸಿಐ ವಿಶೇಷ ಪ್ರಶಸ್ತಿ : ದಿವಂಗತ ಬುಧಿ ಕುಂದಿರನ್
* ಪಾಲಿ ಉಮ್ರಿಗಾರ್ ಪ್ರಶಸ್ತಿ : ವಿರಾಟ್ ಕೊಹ್ಲಿ
* ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟರ್ : ಸ್ಮೃತಿ ಮಂಧಾನ
* ಲಾಲಾ ಅಮರನಾಥ್ ಪ್ರಶಸ್ತಿ (ಆಲ್ ರೌಂಡರ್ ರಣಜಿ) : ಜಲಜ್ ಸಕ್ಸೇನಾ(ಕೇರಳ)
* ಲಾಲಾ ಅಮರನಾಥ್ ಪ್ರಶಸ್ತಿ (ಆಲ್ ರೌಂಡರ್ ನಿಗದಿತ ಓವರ್ ಗಳ ಪಂದ್ಯ) : ದಿವೇಶ್ ಪಠಾಣಿ( ಎಸ್ಎಸ್ ಸಿಬಿ)


* ಮಾಧವ್ ರಾ ವ್ ಸಿಂಧಿಯಾ ಪ್ರಶಸ್ತಿ (ಅತಿ ಹೆಚ್ಚು ರನ್ ಗಳಿಕೆ, ರಣಜಿ) : ಜಲಜ್ ಸಕ್ಸೇನಾ(ಕೇರಳ)
* ಎಂಎ ಚಿದಂಬರಂ ಟ್ರೋಫಿ : U 23 ಅತಿ ಹೆಚ್ಚು ರನ್ ಗಳಿಕೆ: ಅರ್ಯಮಾನ್ ಬಿರ್ಲಾ(ಮಧ್ಯಪ್ರದೇಶ)
* ಅತಿ ಹೆಚ್ಚು ವಿಕೆಟ್ ಗಳಿಕೆ : ತೇಜಸ್ ಬರೋಕಾ, ದೆಹಲಿ
* ಅಂಡರ್ 19 ರನ್ ಗಳಿಕೆ: ವೈ ವಿ ರಾಥೋಡ್ (ವಿದರ್ಭ)
* ಅಂಡರ್ 19 ವಿಕೆಟ್ ಗಳಿಕೆ : ಆಯುಷ್ ಎಸ್ ಜಾಮ್ವಾಲ್ (ಹಿಮಾಚಲ ಪ್ರದೇಶ)
* ಅಂಡರ್ 16 ರನ್ ಗಳಿಕೆ : ಕೆ ನಿತೀಶ್ ಕುಮಾರ್ ರೆಡ್ಡಿ, ಆಂಧ್ರ
* ಅಂಡರ್ 16 ವಿಕೆಟ್ ಗಳಿಕೆ: ರೇಶು ರಾಜ್, ಬಿಹಾರ
* ಶ್ರೇಷ್ಠ ಮಹಿಳಾ ಕ್ರಿಕೆಟರ್ : ದೀಪ್ತಿ ಶರ್ಮ

* ಶ್ರೇಷ್ಠ ಮಹಿಳಾ ಕ್ರಿಕೆಟರ್ (ಜ್ಯೂನಿಯರ್) : ಜೆರಿಮಿಯಾ ರೋಡ್ರಿಗೇಜ್
* ಅಂಪೈರ್ : ಯಶ್ವಂತ್ ಬರ್ಡೆ
* ದೇಶಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ : ಡೆಲ್ಲಿ ಹಾಗೂ ಡಿಸಿಎ

Story first published: Thursday, June 7, 2018, 16:27 [IST]
Other articles published on Jun 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X