ಕೇಪ್ ಟೌನ್ ನಲ್ಲಿ ಹೆಜ್ಜೆ ಹಾಕಿದ ಕೊಹ್ಲಿ, ಧವನ್

Posted By:

ಕೇಪ್ ಟೌನ್, ಡಿಸೆಂಬರ್ 31: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದಾರೆ.

ಸದ್ಯ ಕೇಪ್ ಟೌನ್ ನಲ್ಲಿ ಟೀಂ ಇಂಡಿಯಾ ಬೀಡು ಬಿಟ್ಟಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ತೀವ್ರ ಅಭ್ಯಾಸ ನಡೆಸಿದೆ. ಈ ನಡುವೆ ಬಿಡುವು ಮಾಡಿಕೊಂಡ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಆಟಗಾರ ಶಿಖರ್ ಧವನ್ ಅವರು ಕೇಪ್ ಟೌನ್ ನ ರಸ್ತೆಯಲ್ಲಿ ಭರ್ಜರಿ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದಾರೆ.

Virat Kohli, Shikhar Dhawan Show Off Their Dance Skills in Cape Town

ರಸ್ತೆ ಬದಿ ಸಂಗೀತ ಬಾರಿಸುತ್ತಿದ್ದ ಗುಂಪನ್ನು ನೋಡಿದ ಕೊಹ್ಲಿ ಹಾಗೂ ಧವನ್ ಅವರು ಡ್ರಮ್ ಸೌಂಡಿಗೆ ಸ್ಟೆಪ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಾಲ್ಲಿ ವೈರಲ್ ಆಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಭಾರತ 3 ಟೆಸ್ಟ್,6 ಏಕದಿನ ಹಾಗೂ 3 ಟಿ -20 ಸರಣಿ ಆಡಲಿದೆ. ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಕಾಲಿಗೆ ಗಾಯ ಮಾಡಿಕೊಂಡಿದ್ದ ಧವನ್ ಇಲ್ಲಿ ಕುಣಿದಾಡಿದ್ದಾರೆ. ಮೊದಲ ಟೆಸ್ಟ್ ಪಂದ್ಯಕ್ಕೆ ಅವರ ಬದಲಿಗೆ ಕೆಎಲ್ ರಾಹುಲ್ ಆಡುವ ಸಾಧ್ಯತೆಯಿದೆ.

Story first published: Sunday, December 31, 2017, 18:18 [IST]
Other articles published on Dec 31, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ