ತ್ವರಿತಗತಿಯಲ್ಲಿ 9 ಸಾವಿರ ರನ್ : ಟಾಪ್ 5 ಆಟಗಾರರಲ್ಲಿ ಕೊಹ್ಲಿ ನಂ.1

Posted By:

ಕಾನ್ಪುರ್, ಅಕ್ಟೋಬರ್ 30: ಇಲ್ಲಿನ ಗ್ರೀನ್ ಪಾರ್ಕ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು ದಾಖಲೆ ಬರೆದಿರುವುದು ಕ್ರಿಕೆಟ್ ಪ್ರೇಮಿಗಳಿಗೆ ತಿಳಿದಿರುತ್ತದೆ. ತ್ವರಿತಗತಿಯಲ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 9,000ರನ್ ಗಳಿಸಿದ ಟಾಪ್ 5 ಆಟಗಾರರ ಪಟ್ಟಿ ಇಲ್ಲಿದೆ.

ವಿರಾಟ್ ಕೊಹ್ಲಿ ಅವರು 106 ಎಸೆತಗಳಲ್ಲಿ 113ರನ್ ಗಳಿಸಿದ್ದಲ್ಲದೆ ಮತ್ತೊಬ್ಬ ಶತಕವೀರ ರೋಹಿತ್ ಶರ್ಮ ಜತೆಗೂಡಿ 230ರನ್ ಗಳ ಜೊತೆಯಾಟ ಸಾಧಿಸಿದರು. ಹೀಗಾಗಿ, ಟೀಂ ಇಂಡಿಯಾ ಮೊತ್ತ 337/6ಕ್ಕೇರಲು ಸಾಧ್ಯವಾಯಿತು.

ಈ ಗುರಿಯನ್ನು ಉತ್ತಮವಾಗಿ ಚೇಸ್ ಮಾಡಿದ ಕಿವೀಸ್ ತಂಡ 6 ರನ್ ಗಳ ಅಂತರದಿಂದ ಪಂದ್ಯವನ್ನು ಕಳೆದುಕೊಂಡಿತು. ಮೂರನೇ ಪಂದ್ಯ ಹಾಗೂ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡಿತು.

ಈ ಪಂದ್ಯದಲ್ಲಿ ಕೊಹ್ಲಿ ಅವರು 83ರನ್ ಗಳಿಸಿದ್ದಾಗ 194 ಇನ್ನಿಂಗ್ಸ್ ನಲ್ಲಿ 9 ಸಾವಿರ ರನ್ ಪೂರೈಸಿದರು. ಈ ಮೂಲಕ ಎಬಿ ಡಿ ವಿಲಿಯರ್ಸ್ ಅವರ ಸಾಧನೆಯನ್ನು ಹಿಂದಿಕ್ಕಿದರು.

ತ್ವರಿತಗತಿಯಲ್ಲಿ 9000ರನ್ ಗಳಿಕೆ

ತ್ವರಿತಗತಿಯಲ್ಲಿ 9000ರನ್ ಗಳಿಕೆ

ಟಾಪ್ 5 ಆಟಗಾರರು:

1.ವಿರಾಟ್ ಕೊಹ್ಲಿ : 202 ಪಂದ್ಯ 194 ಇನ್ನಿಂಗ್ಸ್
2. ಎಬಿ ಡಿವಿಲಿಯರ್ಸ್ : 214 ಪಂದ್ಯ, 205 ಇನ್ನಿಂಗ್ಸ್
3. ಸೌರವ್ ಗಂಗೂಲಿ : 236 ಪಂದ್ಯ, 228 ಇನ್ನಿಂಗ್ಸ್
4. ಸಚಿನ್ ತೆಂಡೂಲ್ಕರ್ : 242 ಪಂದ್ಯ, 235 ಇನ್ನಿಂಗ್ಸ್
5. ಬ್ರಿಯಾನ್ ಲಾರಾ: 246 ಪಂದ್ಯ, 239 ಇನ್ನಿಂಗ್ಸ್

2017ರಲ್ಲಿ 2000ರನ್

2017ರಲ್ಲಿ 2000ರನ್

28 ವರ್ಷ ವಯಸ್ಸಿನ ಕೊಹ್ಲಿ ಅವರು 2017ರಲ್ಲಿ 2000ರನ್ ಗಳಿಸಿದ್ದು, ಕ್ರಿಕೆಟ್ ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ. 2012, 2014 ಹಾಗೂ 2016ರಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದರು.

ಸಿಕ್ಸರ್ ಸಿಡಿಸಿರುವ ಕೊಹ್ಲಿ

ಸಿಕ್ಸರ್ ಸಿಡಿಸಿರುವ ಕೊಹ್ಲಿ

ಏಕದಿನ ಕ್ರಿಕೆಟ್ ನಲ್ಲಿ 97 ಸಿಕ್ಸರ್ ಸಿಡಿಸಿರುವ ಕೊಹ್ಲಿ ಅವರು ಈ ಪಂದ್ಯದಲ್ಲಿ ಮೂರು ಸಿಕ್ಸರ್ ಸಿಡಿಸಿದರೆ 100 ಸಿಕ್ಸರ್ ಗಡಿ ದಾಟುವ ಅವಕಾಶವಿತ್ತು. 113ರನ್ ಚೆಚ್ಚಿದ ಕೊಹ್ಲಿ 1 ಸಿಕ್ಸರ್, 9 ಬೌಂಡರಿ ಬಾರಿಸಿದರು. 100 ಸಿಕ್ಸರ್ ಬಾರಿಸಿದರೆ ಈ ಸಾಧನೆ ಮಾಡಿದ ಭಾರತದ 8ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ರೋಹಿತ್ ಶರ್ಮ ಹಾಲಿ ಕ್ರಿಕೆಟರ್ ಗಳ ಪೈಕಿ 150 ಸಿಕ್ಸ್ ಸಿಡಿಸಿ ಮುಂದಿದ್ದಾರೆ.

ತ್ವರಿತವಾಗಿ 9,000 ರನ್

ತ್ವರಿತವಾಗಿ 9,000 ರನ್

ಭಾರತೀಯರ ಪೈಕಿ ತ್ವರಿತವಾಗಿ 4,000, 5,000,6,000,7,000,8,000 ಹಾಗೂ 9,000 ರನ್ ಗಡಿ ದಾಟಿದ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. ಶಿಖರ್ ಧವನ್ ಅವರು ಜಂಟಿಯಾಗಿ 1,000ರನ್ ಗಡಿದಾಟಿದ ಸಾಧನೆ ಮಾಡಿದ್ದಾರೆ. 2 ಹಾಗೂ 3 ಸಾವಿರ ರನ್ ಮೈಲಿಗಲ್ಲಿ ಕೂಡಾ ಧವನ್ ಪಾಲಾಗಿದೆ.

ದಕ್ಷಿಣ ಆಫ್ರಿಕಾದ ಹಶೀಂ ಅಮ್ಲ ಅವರು ಏಕದಿನ ಕ್ರಿಕೆಟ್‌ನಲ್ಲಿ 2,000, 3,000, 4,000, 5,000. 6,000, 7,000 ರನ್‌ಗಳನ್ನು ಕೂಡಾ ತ್ವರಿತಗತಿಯ ಪೂರ್ಣಗೊಳಿಸಿದ ಸಾಧನೆಯನ್ನು ಸರಿಗಟ್ಟಿದ್ದಾರೆ.

Story first published: Monday, October 30, 2017, 8:38 [IST]
Other articles published on Oct 30, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ