ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೇಸಿ ಕ್ರಿಕೆಟ್‌ನ 'ರನ್‌ ಮಷಿನ್' ವಾಸಿಮ್ ಜಾಫರ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ

Wasim Jaffer announces retirement from all forms of cricket

ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವಾಸಿಮ್ ಜಾಫರ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿದ್ದಾರೆ. ದೇಸಿ ಕ್ರಿಕೆಟ್‌ನ ರನ್ ಮಷಿನ್ ಎನಿಸಿರುವ ವಾಸಿಮ್ ಜಾಫರ್ ಟೀಮ್ ಇಂಡಿಯಾದಲ್ಲೂ ಮಿಂಚಿ ಮರೆಯಾದ ಆಟಗಾರ.

42 ವರ್ಷದ ವಾಸಿಮ್ ಜಾಫರ್ ರಣಜಿ ಇತಿಹಾಸದಲ್ಲಿ ಅತಿಹೆಚ್ಚು ರನ್‌ಗಳಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಇನ್ನು ಟೀಮ್ ಇಂಡಿಯಾವನ್ನು 2000-2008ರ ಮಧ್ಯೆ 31ಟೆಸ್ಟ್ ಪಂದ್ಯಗಳಲ್ಲಿ ಮತ್ತು ಎರಡು ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.

3 ಭಾರತೀಯರು, 4 ಆಸ್ಟ್ರೇಲಿಯನ್ನರು: ಭಜ್ಜಿ ಆಲ್‌ಟೈಮ್‌ ಟೆಸ್ಟ್ ತಂಡ ಹೀಗಿದೆ3 ಭಾರತೀಯರು, 4 ಆಸ್ಟ್ರೇಲಿಯನ್ನರು: ಭಜ್ಜಿ ಆಲ್‌ಟೈಮ್‌ ಟೆಸ್ಟ್ ತಂಡ ಹೀಗಿದೆ

ವಾಸಿಮ್ ಜಾಫರ್ 260 ಪ್ರಥಮ ದರ್ಜೆ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಇದರಲ್ಲಿ ಈವರೆಗೆ 19,410 ರನ್ ಗಳಿಸಿದ್ದಾರೆ. 50.67 ಸರಾಸರಿಯನ್ನು ಜಾಫರ್ ಹೊಂದಿದ್ದಾರೆ. 91 ಅರ್ಧ ಶತಕಗಳು ಮತ್ತು 57 ಶತಕಗಳು ಜಾಫರ್ ಹೆಸರಿನಲ್ಲಿ ದಾಖಲಾಗಿದೆ. 314 ರನ್ ಜಾಫರ್ ಗಳಿಸಿದ ಅತಿ ಹೆಚ್ಚು ಸ್ಲೋರ್ ಆಗಿದೆ.

ಟೀಮ್ ಇಂಡಿಯಾವನ್ನು 31 ಟೆಸ್ಟ್ ಪಂದ್ಯಗಳಲ್ಲಿ ಜಾಫರ್ ಪ್ರತಿನಿಧಿಸಿದ್ದಾರೆ. ಇದರಲ್ಲಿ ಐದು ಶತಕಗಳು ಮತ್ತು 11 ಅರ್ಧ ಶತಕ ಸೇರಿಕೊಂಡಿದೆ. ವಾಸಿಮ್ ಜಾಫರ್ ಎರಡು ದ್ವಿಶತಕಗಳನ್ನೂ ಬಾರಿಸಿ ಮಿಂಚುಹರಿಸಿದ್ದಾರೆ. ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯಗಳಲ್ಲಿ ಜಾಫರ್ 1,944 ರನ್‌ಗಳಿಸಿದ್ದಾರೆ.

ಮಹಿಳಾ ವಿಶ್ವಕಪ್ ಫೈನಲ್: ಭಾರತವನ್ನು ಎದುರಿಸಲು ಇಷ್ಟವಿಲ್ಲ ಎಂದ ಆಸ್ಟ್ರೇಲಿಯಾ ಬೌಲರ್ಮಹಿಳಾ ವಿಶ್ವಕಪ್ ಫೈನಲ್: ಭಾರತವನ್ನು ಎದುರಿಸಲು ಇಷ್ಟವಿಲ್ಲ ಎಂದ ಆಸ್ಟ್ರೇಲಿಯಾ ಬೌಲರ್

ಮುಂಬೈ ತಂಡವನ್ನು ಪ್ರತಿನಿಧಿಸುತ್ತಿದ್ದ ವಾಸಿಮ್ ಜಾಫರ್ ಎರಡು ಬಾರಿ ರಣಜಿ ಚಾಂಪಿಯನ್ ಆಗುವ ಸಂದರ್ಭದಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ್ದರು. 2015-16ನೇ ಸೀಸನ್‌ನಲ್ಲಿ ವಿದರ್ಭ ತಂಡವನ್ನು ಸೇರಿಕೊಂಡ ಜಾಫರ್ ಕಳೆದೆರಡು ವರ್ಷಗಳಲ್ಲಿ ವಿದರ್ಭ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

Story first published: Saturday, March 7, 2020, 13:26 [IST]
Other articles published on Mar 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X