ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಕ್ರಿಕೆಟ್: ದ್ವಿಶತಕದ ದಾಖಲೆ ನಿರ್ಮಿಸಿದ ಅಮೆಲಿಯಾ ಕೆರ್

women cricket new zealand cricketer amelia kerr double ton record

ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ನ್ಯೂಜಿಲೆಂಡ್‌ನ ವನಿತೆಯರ ತಂಡ ಮತ್ತೊಂದು ಸಾಧನೆ ಮಾಡಿದೆ.

ಐರ್ಲೆಂಡ್‌ ವಿರುದ್ಧ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ನ್ಯೂಜಿಲೆಂಡ್ ತಂಡ ಆರಂಭಿಕ ಆಟಗಾರ್ತಿ ಅಮೆಲಿಯಾ ಕೆರ್, ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಕಿವೀಸ್ ಮಹಿಳೆಯರಿಂದ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆಕಿವೀಸ್ ಮಹಿಳೆಯರಿಂದ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ

ಜತೆಗೆ ಸತತ ಮೂರು ಏಕದಿನ ಪಂದ್ಯಗಳಲ್ಲಿ 400 ರನ್‌ಗೂ ಅಧಿಕ ರನ್ ಬಾರಿಸಿದ ಏಕೈಕ ತಂಡವೆಂಬ ಹೆಗ್ಗಳಿಕೆಗೆ ನ್ಯೂಜಿಲೆಂಡ್ ವನಿತೆಯ ತಂಡ ಭಾಜನವಾಗಿದೆ.

ಮಹಿಳಾ ಏಕದಿನ ಪಂದ್ಯದಲ್ಲಿ ಅತ್ಯಧಿಕ ವೈಯಕ್ತಿಕ ರನ್ ಗಳಿಸಿದ ಹೊಸ ದಾಖಲೆಯನ್ನು ಅಮೆಲಿಯಾ ಕೆರ್ ಬರೆದಿದ್ದಾರೆ.

women cricket new zealand cricketer amelia kerr double ton record

ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ ಅವರ 21 ವರ್ಷಗಳ ದಾಖಲೆಯನ್ನು ಕೆರ್ ಮುರಿದಿದ್ದಾರೆ. ಬೆಲಿಂಡಾ ಕ್ಲಾರ್ಕ್ ಅವರು 229 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದನ್ನು 232 ರನ್ ಬಾರಿಸಿದ ಕೆರ್, ಹೊಸ ದಾಖಲೆ ನಿರ್ಮಿಸಿದ್ದಾರೆ.

ಬುಧವಾರ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ದ್ವಿಶತಕ ಬಾರಿಸುವ ಮೂಲಕ ಮಹಿಳಾ ಕ್ರಿಕೆಟ್‌ನಲ್ಲಿ ಎರಡನೆಯ ಮತ್ತು ಒಟ್ಟಾರೆ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಏಳನೆಯ ಆಟಗಾರ್ತಿ ಎನಿಸಿಕೊಂಡರು.

ಅಫ್ಘಾನಿಸ್ತಾನಕ್ಕೆ ಮೊದಲ ಟೆಸ್ಟ್: ಮೋದಿ ಶುಭಾಶಯ, ದುರಾನಿ ಆಕರ್ಷಣೆಅಫ್ಘಾನಿಸ್ತಾನಕ್ಕೆ ಮೊದಲ ಟೆಸ್ಟ್: ಮೋದಿ ಶುಭಾಶಯ, ದುರಾನಿ ಆಕರ್ಷಣೆ

ಕೇವಲ 17 ವರ್ಷದ ಕೆರ್, ಏಕದಿನ ಕ್ರಿಕೆಟ್‌ನಲ್ಲಿ ದ್ವಶತಕ ಗಳಿಸಿದ ಅತಿ ಕಿರಿಯ ಆಟಗಾರ್ತಿ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.

ವೃತ್ತಿ ಜೀವನದಲ್ಲಿ ಹತ್ತನೇ ಅಂತರರಾಷ್ಟ್ರೀಯ ಪಂದ್ಯ ಆಡಿದ ಕೆರ್ ಅವರು ಕೇವಲ 145 ಎಸೆತಗಳಲ್ಲಿ 31 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಅಜೇಯ 232 ರನ್ ಚಚ್ಚಿದರು.

ಕೆರ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಅಮಿ ಸ್ಯಾಟರ್‌ವೈಟ್ ಬಿರುಸಿನ 61 ರನ್ ಗಳಿಸಿದರೆ, ಬಳಿಕ ಬಂದ ಲೀಗ್ ಕಾಸ್ಪೆರೆಕ್ 105 ಎಸೆತಗಳಲ್ಲಿ 113 ರನ್ ಬಾರಿಸಿದರು.

ನಿಗದಿತ 50 ಓವರ್‌ಗಳಲ್ಲಿ ನ್ಯೂಜಿಲೆಂಡ್ 440 ರನ್ ಗಳಿಸಿತು. ಬೃಹತ್ ಗುರಿ ಬೆನ್ನತ್ತಿದ ಐರ್ಲೆಂಡ್ ವನಿತೆಯರು ಕೇವಲ 135 ರನ್‌ಗೆ ಸರ್ವಪತನಗೊಂಡು 305 ರನ್‌ಗಳ ಭಾರಿ ಅಂತರದಿಂದ ಸೋಲು ಅನುಭವಿಸಿದರು.

ಸತತ ಮೂರು ಪಂದ್ಯಗಳಲ್ಲಿ ನಾಲ್ಕು ನೂರರ ಗಡಿ ದಾಟಿದ ದಾಖಲೆಯನ್ನೂ ನ್ಯೂಜಿಲೆಂಡ್ ವನಿತೆಯರು ನಿರ್ಮಿಸಿದ್ದಾರೆ.

ಐರ್ಲೆಂಡ್ ವಿರುದ್ಧದ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ನ್ಯೂಜಿಲೆಂಡ್ 400ಕ್ಕೂ ಅಧಿಕ ರನ್ ಗಳಿಸಿತ್ತು. ಮೊದಲ ಪಂದ್ಯದಲ್ಲಿ 490 ರನ್ ಗಳಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಮೊತ್ತ ದಾಖಲಿಸಿದ ದಾಖಲೆ ಸೃಷ್ಟಿಸಿತ್ತು.

ಎರಡನೆಯ ಪಂದ್ಯದಲ್ಲಿಯೂ ಅಬ್ಬರದ ಆಟವಾಡಿದ್ದ ವನಿತೆಯರು, 418 ರನ್ ಕಲೆಹಾಕಿದ್ದರು. ಮೂರನೆಯ ಪಂದ್ಯದಲ್ಲಿ 440 ರನ್ ಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದರು.

Story first published: Thursday, June 14, 2018, 13:45 [IST]
Other articles published on Jun 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X