ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾ ಸೋತಿದ್ದೆಲ್ಲಿ?!: ಆ್ಯರನ್ ಫಿಂಚ್ ಹೀಗಂತಾರೆ

World Cup: Australia captain Finch reveals what went wrong against England

ಬರ್ಮಿಂಗ್‌ಹ್ಯಾಮ್‌, ಜುಲೈ 12: ಐಸಿಸಿ ಕ್ರಿಕೆಟ್ ವಿಶ್ವಕಪ್‌ 2019ರ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಸೋಲುವ ಮೂಲಕ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಟ್ರೋಫಿ ಉಳಿಸಿಕೊಳ್ಳುವ ಅವಕಾಶವನ್ನೇ ಕಳೆದುಕೊಂಡಿದೆ. ಆತಿಥೇಯ ಇಂಗ್ಲೆಂಡ್ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಮೇಲುಗೈ ಸಾಧಿಸಲು ನೆರವಾದ ಅಂಶಗಳೇನು?

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಗುರುವಾರ (ಜುಲೈ 11) ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ಲಿನ ಸೋಲಿಗೆ ಆಸೀಸ್ ನಾಯಕ ಆ್ಯರನ್ ಫಿಂಚ್ ಕಾರಣಗಳನ್ನು ಹೇಳಿಕೊಂಡಿದ್ದಾರೆ. ನಾವು ಶಕ್ತಿಮೀರಿ ಆಡಿದೆವು. ಆದರೆ ಎದುರಾಳಿ ತಂಡ ಅಸಾಧಾರಣ ಆಟ ಪ್ರದರ್ಶಶಿಸಿತು ಎಂದು ಫಿಂಚ್ ತಿಳಿಸಿದ್ದಾರೆ.

ವಿಶ್ವಕಪ್: ಮೆಗ್ರಾತ್ ವಿಶ್ವದಾಖಲೆ ಮುರಿದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ವಿಶ್ವಕಪ್: ಮೆಗ್ರಾತ್ ವಿಶ್ವದಾಖಲೆ ಮುರಿದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್

12ನೇ ಆವೃತ್ತಿಯ ಈ ವಿಶ್ವಕಪ್‌ನಲ್ಲಿ ಈವರೆಗೂ ಏಕದಿನ ವಿಶ್ವಕಪ್ ಟ್ರೋಫಿಯೇ ಗೆದ್ದಿರದ ಇಂಗ್ಲೆಂಡ್-ನ್ಯೂಜಿಲೆಂಡ್ ತಂಡಗಳು ಫೈನಲ್ ಪ್ರವೇಶಿಸಿವೆ. ಸೆಮಿಫೈನಲ್ ನಲ್ಲಿ ಆಸೀಸ್ ಸೋಲಿಗೆ ಕಾರಣ ಮತ್ತು ಇಂಗ್ಲೆಂಡ್ ಗೆಲುವಿಗೆ ಕಾರಣವಾದ ಒಂದಿಷ್ಟು ಸಕಾರಾತ್ಮಕ ಅಂಶಗಳು ಇಲ್ಲಿವೆ.

ನಿಜಕ್ಕೂ ಶಕ್ತಿ ಮೀರಿ ಆಡಿದ್ದೇವೆ

ನಿಜಕ್ಕೂ ಶಕ್ತಿ ಮೀರಿ ಆಡಿದ್ದೇವೆ

'ಇವತ್ತು (ಜುಲೈ 11) ನಾವು ಗೆಲುವಿನ ನೆಲೆಯಲ್ಲಿ ನಿಜಕ್ಕೂ ಶಕ್ತಿ ಮೀರಿ ಆಡಿದ್ದೇವೆ. ವೇಗದ ಎಸೆತಗಳನ್ನು ಎದುರಿಸಬಲ್ಲೆವು ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಈ ನಿರೀಕ್ಷೆಯಲ್ಲೇ ಹೆಚ್ಚಿನ ವಿಕೆಟ್‌ಗಳನ್ನು ಕಳೆದುಕೊಂಡೆವು' ಎಂದು ಪಂದ್ಯದ ಬಳಿಕ ಮಾತನಾಡುತ್ತ ಫಿಂಚ್ ಹೇಳಿದರು. ಪಂದ್ಯ ಆರಂಭಗೊಂಡ 2ನೇ ಓವರ್‌ನಲ್ಲಿ ಆಸೀಸ್ ಆರಂಭಿಕರಾದ ಆ್ಯರನ್ ಫಿಂಚ್ ವಿಕೆಟ್ ವೇಗಿ ಜೋಫ್ರಾ ಆರ್ಚರ್‌ಗೆ ಲಭಿಸಿತ್ತು. 3ನೇ ಓವರ್‌ನಲ್ಲಿ ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ವಿಕೆಟನ್ನು ಕ್ರಿಸ್ ವೋಕ್ಸ್ ಮುರಿದು ಆಸೀಸ್‌ಗೆ ಬೆದರಿಕೆಯೊಡ್ಡಿದ್ದರು.

ಇಂಗ್ಲೆಂಡ್ ಮಾರಕ ಬೌಲಿಂಗ್

ಇಂಗ್ಲೆಂಡ್ ಮಾರಕ ಬೌಲಿಂಗ್

ಟಾಸ್ ಗೆದ್ದು ಆಸೀಸ್ ಬ್ಯಾಟಿಂಗ್ ಆಯ್ದುಕೊಂಡಾಗ, ವಿಶ್ವಕಪ್ ಚಾಂಪಿಯನ್ ಪಟ್ಟ ಮತ್ತೆ ಆಸೀಸ್ ಪಾಲಾಗೋ ಲಕ್ಷಣ ಕಾಣಿಸಿತ್ತು. ಆದರೆ ಮಾರಕ ಬೌಲಿಂಗ್ ದಾಳಿ ನಡೆಸಿದ ಇಂಗ್ಲೆಂಡ್, ಕಾಂಗರೂ ಪಡೆಯನ್ನು 223 ರನ್ನಿಗೆ ಕಟ್ಟಿ ಹಾಕಿತು. ಸ್ಟೀವ್ ಸ್ಮಿತ್ 85, ಅಲೆಕ್ಸ್ ಕ್ಯಾರಿ 46, ಗ್ಲೆನ್ ಮ್ಯಾಕ್ಸ್‌ವೆಲ್ 22, ಮಿಚೆಲ್ ಸ್ಟಾರ್ಕ್‌ 29 ರನ್ ಬಿಟ್ಟರೆ ಉಳಿದ ಯಾರೂ 10ಕ್ಕೂ ಹೆಚ್ಚಿನ ರನ್ ಗಳಿಸದಿದ್ದುದು ಆಸೀಸ್‌ಗೆ ದುಬಾರಿಯಾಗಿ ಪರಿಣಮಿಸಿತು.

ಚೆಂಡಿಗೆ ಬ್ಯಾಟಿನ ಉತ್ತರ

ಚೆಂಡಿಗೆ ಬ್ಯಾಟಿನ ಉತ್ತರ

ಮಾತು ಮುಂದುವರೆಸಿದ ಫಿಂಚ್, 'ಇಂಗ್ಲೆಂಡ್ ಇನ್ನಿಂಗ್ಸ್ ವೇಳೆ ನಾವು ವಿಕೆಟ್ ಉರುಳಿಸಲು ಯತ್ನಿಸಿದೆವು. ಆದರೆ ಕೆಲವೊಮ್ಮೆ ನೀವು ಚೆಂಡಿನ ಮೂಲಕ ಆಕ್ರಮಣಕ್ಕಿಳಿದರೆ ಎದುರಾಳಿ ಬ್ಯಾಟಿನ ಮೂಲಕ ಆಕ್ರಮಣಕ್ಕೆ ಮುಂದಾಗುತ್ತಾರೆ. ಪಂದ್ಯದ ವೇಳೆ ಇದೇ ವೇಗವಾಗಿ ನಡೆದುಹೋಯ್ತು' ಎಂದರು. ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್ಮನ್‌ಗಳಾದ ಜೇಸನ್ ರಾಯ್ 85, ಜಾನಿ ಬೇಸ್ಟೋವ್ 34, ಜೋ ರೂಟ್ ಅಜೇಯ 49, ನಾಯಕ ಇಯಾನ್ ಮಾರ್ಗನ್ ಅಜೇಯ 45 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಇಂಗ್ಲೆಂಡ್ ತಂಡ ಚೆನ್ನಾಗಿದೆ

ಇಂಗ್ಲೆಂಡ್ ತಂಡ ಚೆನ್ನಾಗಿದೆ

'ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ನಿಜಕ್ಕೂ ಅಸಾಧಾರಣ ಆಟವಾಡಿತು. ಅಗ್ರ ನಾಲ್ಕು ಸ್ಥಾನಗಳಲ್ಲಿ ಕಾಣಿಸಿಕೊಂಡ ಬಳಿಕ ಇಂಗ್ಲೆಂಡ್ ಹೇಗೆ ಪಾರಮ್ಯ ಮೆರೆಯಬಲ್ಲದು ಎಂಬುದು ನಮಗೆ ಗೊತ್ತಿತ್ತು. ಇಂಗ್ಲೆಂಡ್ ತಂಡ ತುಂಬಾ ಚೆನ್ನಾಗಿದೆ' ಎಂದು ಫಿಂಚ್ ಅಭಿಪ್ರಾಯಿಸಿದರು. ಆಸೀಸ್ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್ 3, ಆದಿಲ್ ರಶೀದ್ 3, ಜೋಫ್ರಾ ಆರ್ಚರ್ 2 ವಿಕೆಟ್ ಮುರಿದು ತಂಡಕ್ಕೆ ನೆರವಾದರೆ, ಬ್ಯಾಟಿಂಗ್ ಬೆಂಬಲವೂ ಇನ್ನಿಂಗ್ಸ್‌ ವೇಳೆ ಇಂಗ್ಲೆಂಡ್‌ಗೆ ಲಭಿಸಿತ್ತು. ಪರಿಣಾಮ ಆಸೀಸ್ ನೀಡಿದ್ದ 224 ರನ್ ಗುರಿಯನ್ನು ಆಂಗ್ಲರು 32.1 ಓವರ್‌ನಲ್ಲೇ ತಲುಪಿದ್ದರು.

Story first published: Friday, July 12, 2019, 12:28 [IST]
Other articles published on Jul 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X