ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ವಿರಾಟ್ ಕೊಹ್ಲಿ ವಿಕೆಟ್ ಪಡೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಕೈಲ್ ಜ್ಯಾಮಿಸನ್

WTC Final: Kyle Jamieson says pleasing to dismiss Virat Kohli
Virat Kohli ವಿಕೆಟ್ ಪಡೆದ Jamiesonಗೆ ಈಗ ಫುಲ್ ಖುಷಿ | WTC | IND vs NZ | Oneindia Kannada

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಮೂರನೇ ದಿನದಲ್ಲಿ ನ್ಯೂಜಿಲೆಂಡ್ ಮೇಲುಗೈ ಸಾಧಿಸಿದೆ. ಅದರಲ್ಲೂ ಬೌಲಿಂಗ್‌ನಲ್ಲಿ ಕೈಲ್ ಜ್ಯಾಮಿಸನ್ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾದರು. ಐದು ವಿಕೆಟ್ ಪಡೆದು ಭಾರತೀಯ ದಾಂಡಿಗರಿಗೆ ಆಘಾತವನ್ನು ನೀಡಿದರು. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಕೈಲ್ ಜ್ಯಾಮಿಸನ್‌ಗೆ ಬಲಿಯಾಗಬೇಕಾಯಿತು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಂತಾ ಮಹತ್ವದ ವೇದಿಕೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದಿರುವುದಕ್ಕೆ ಜ್ಯಾಮಿಸನ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ. "ಆತನೋರ್ವ ಶ್ರೇಷ್ಟವಾದ ಬ್ಯಾಟ್ಸ್‌ಮನ್. ಅವರಂತಾ ಆಟಗಾರರು ಹೆಚ್ಚಿನ ನ್ಯೂನ್ಯತೆಗಳನ್ನು ಹೊಂದಿರುವುದಿಲ್ಲ. ಹಾಗಾಗಿ ಅವರ ವಿಕೆಟ್ ಪಡೆದಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ. ಭಾರತದ ಬ್ಯಾಟಿಂಗ್ ಲೈನ್‌ಅಪ್‌ನ ಮಹತ್ವದ ಭಾಗ ಅವರು. ಅವರ ವಿಕೆಟ್ ಶೀಘ್ರವಾಗಿ ಪಡೆಯಲು ಸಾಧ್ಯವಾದ ಕಾರಣ ಪಂದ್ಯದ ಮೇಲೆ ನಾವು ಹಿಡಿತ ಸಾಧಿಸಲು ಸಾಧ್ಯವಾಯಿತು" ಎಂದು ಜ್ಯಾಮಿಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

WTC Final: ನ್ಯೂಜಿಲೆಂಡ್ ಪರ 8 ದಶಕಗಳ ಹಿಂದಿನ ದಾಖಲೆ ಮುರಿದ ಕೈಲ್ ಜ್ಯಾಮಿಸನ್WTC Final: ನ್ಯೂಜಿಲೆಂಡ್ ಪರ 8 ದಶಕಗಳ ಹಿಂದಿನ ದಾಖಲೆ ಮುರಿದ ಕೈಲ್ ಜ್ಯಾಮಿಸನ್

ಜ್ಯಾಮಿಸನ್ ಶನಿವಾರ ಉತ್ತಮ ಆರಂಭವನ್ನು ನೀಡುತ್ತಿದ್ದ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದರು. 34 ರನ್‌ಗಳಿಸಿದ್ದ ವೇಳೆ ರೋಹಿತ್ ಶರ್ಮಾ ಅವರನ್ನು ಜ್ಯಾಮಿಸನ್ ಔಟ್ ಮಾಡಿದರು. ಅದಾದ ನಂತರ ಉತ್ತಮ ರನ್‌ಗಳಿಸಿ ಮುನ್ನುಗ್ಗುತ್ತಿದ್ದ ವಿರಾಟ್ ಕೊಹ್ಲಿಯನ್ನು 44 ರನ್‌ಗಳಿಸಿದ್ದಾಗ ಔಟ್ ಮಾಡುವಲ್ಲಿ ಜ್ಯಾಮಿಸನ್ ಯಶಸ್ವಿಯಾಗಿದ್ದರು. ನಂತರ ರಿಷಬ್ ಪಂತ್ ಕೂಡ ಅವರ ಬಲೆಗೆ ಬಿದ್ದರು. ಈ ಮೂಲಕ ಮಹತ್ವದ ಮೂರು ವಿಕೆಟ್‌ಗಳು ಜ್ಯಾಮಿಸನ್ ಪಾಲಾದವು. ಅಂತಿಮ ಹಂತದಲ್ಲಿ ಇಶಾಂತ್ ಶರ್ಮಾ ಹಾಗೂ ಬೂಮ್ರಾ ಕೂಡ ಜ್ಯಾಮಿಸಮ್‌ಗೆ ಔಟಾಗುವ ಮೂಲ 5 ವಿಕೆಟ್ ಕಬಳಿಸಿದರು.

ಇನ್ನು ಈ ಹಂತದಲ್ಲಿ ನ್ಯೂಜಿಲೆಂಡ್ ಮುನ್ನಡೆಯಲ್ಲಿದೆ ಎಂಬುದನ್ನು ಕೈಲ್ ಜ್ಯಾಮಿಸನ್ ಒಪ್ಪಿಕೊಳ್ಳಲು ನಿರಾಕರಿಸಿದರು. "ಮುನ್ನಡೆಯ ವಿಚಾರವಾಗಿ ಪ್ರತಿಕ್ರಿಯಿಸಲು ಇನ್ನು ಸಮಯ ಬೇಕಿದೆ. ನಾವು ಹೆಚ್ಚಿನ ಮುನ್ನಡೆಯನ್ನು ಸಾಧಿಸುವತ್ತ ಗಮನಹರಿಸಬೇಕಿದೆ. ಸಾಧ್ಯವಾದಷ್ಟು ಹೆಚ್ಚಿನ ಅಂತರದಿಂದ ನಾವು ಮುನ್ನಡೆ ಹೊಂದಬೇಕು. ಆದರೆ ಇದು ಇಂಗ್ಲೆಂಡ್‌ನಲ್ಲಿ ಆಡುತ್ತಿದ್ದೇವೆ. ಇಲ್ಲಿ ಕೆಲ ಘಟನೆಗಳು ತಕ್ಷಣವೇ ಸಂಭವಿಸುತ್ತದೆ" ಎಂದು ಜ್ಯಾಮಿಸನ್ ಪ್ರತಿಕ್ರಿಯಿಸಿದ್ದಾರೆ.

"ನಾವು ಉತ್ತಮ ಆರಂಭವನ್ನು ಪಡೆದಿದ್ದೇವೆ. ಈ ಆರಂಭವನ್ನು ನಾವು ಮತ್ತಷ್ಟು ಬೆಳೆಸಬೇಕಿದೆ. ಬೌಲಿಂಗ್ ವಿಭಾಗದಲ್ಲಿ ನಾವು ಹೆಚ್ಚಿನ ಯಶಸ್ಸು ಸಾಧಿಸಲು ಸಾಧ್ಯವಿದೆ. ಆದರೆ ಅದು ಮೇಲ್ನೋಟಕ್ಕೆ ಕಾಣಿಸುವುದಕ್ಕಿಂತ ಕಠಿಣವಿದೆ" ಎಂದು ಜ್ಯಾಮಿಸನ್ ಹೇಳಿಕೆಯನ್ನು ನೀಡಿದ್ದಾರೆ.

Story first published: Monday, June 21, 2021, 11:12 [IST]
Other articles published on Jun 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X