ಭಾರತದ ಯುವ ಆಟಗಾರ ಶುಬ್ಮನ್ ಗಿಲ್ ಇತ್ತೀಚೆಗೆ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಅಮೋಘ ಫಾರ್ಮ್ ಪ್ರದರ್ಶಿಸಿರುವ ಶುಬ್ಮನ್ ಗಿಲ್ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇನ್ನು ಜಿಂಬಾಬ್ವೆ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕವನ್ನು ಗಳಿಸಿದ ಶುಬ್ಮನ್ ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಬಾರಿಗೆ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾದರು.
ಶತಕವನ್ನು ತಂದೆಗೆ ಅರ್ಪಿಸಿದ ಗಿಲ್: ಜಿಂಬಾಬ್ವೆ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕವನ್ನು ಗಳಿಸಿರುವ ಶುಬ್ಮನ್ ಗಿಲ್ ಈ ಸಾಧನೆಗೆ ಹರ್ಷಗೊಂಡಿದ್ದಾರೆ. ಪಂದ್ಯದ ಮುಕ್ತಾಯದ ಬಳಿಕ ತಮ್ಮ ಸಂತಸವನ್ನು ಹಂಚಿಕೊಂಡಿರುವ ಶುಬ್ಮನ್ ಗಿಲ್ ಈ ಶತಕವನ್ನು ತಮ್ಮ ತಂದೆಗೆ ಅರ್ಪಿಸಿದ್ದಾರೆ. "ನಾನು ನನ್ನ ಡಾಟ್ ಬಾಲ್‌ಗಳ ಪ್ರಮಾಣವನ್ನು ಕಡಿಮೆ ಮಾಡಲು ಬಯಸಿದ್ದೆ. ಉತ್ತಮ ಎಸೆತಗಳನ್ನು ನೊಡಿಕೊಂಡು ಆಡುವ ಯೋಜನೆ ಹಾಕಿಕೊಮಡಿದ್ದು ಯಾವಿದೇ ಬೌಲರ್‌ನ್ನನು ಗುರಿಯಾಗಿರಿಸಿ ದಾಳಿ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ರಾಜಾ ಹಾಗೂ ಎವೆನ್ ಅದ್ಭುತವಾಗಿ ಬೌಲಿಂಗ್ ನಡೆಸುತ್ತಿದ್ದರು. ಬೌಲರ್‌ಗಳನ್ನು ಗುರಿಯಾಗಿರುವುದು ಆಗ ಬಹಳ ಮುಖ್ಯವಾಗಿತ್ತು" ಎಂದಿದ್ದಾರೆ ಶುಬ್ಮನ್ ಗಿಲ್.
ಏಷ್ಯಾಕಪ್ 2022: ಕೊಹ್ಲಿ, ಅನುಷ್ಕಾ ಜತೆ ದುಬೈಗೆ ಹಾರಿದ ರೋಹಿತ್ ಶರ್ಮಾ; ಇಲ್ಲ ದ್ರಾವಿಡ್!
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ ಉತ್ತಮ ಪ್ರದರ್ಶನ ನೀಡಿತು. ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಕಣಕ್ಕಿಳಿದು ಧವನ್ 40 ರನ್ ಕಲೆಹಾಕಿದರೆ, ಕೆಎಲ್ ರಾಹುಲ್ 30 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಬ್‌ಮನ್ ಗಿಲ್ 97 ಎಸೆತಗಳಲ್ಲಿ 130 ರನ್ ಸಿಡಿಸಿ ತಮ್ಮ ಚೊಚ್ಚಲ ಶತಕ ಸಿಡಿಸಿದ್ದಾರೆ. ಈ ಮೂಲಕ ಗಿಲ್ ಹೊಸ ಮೈಲಿಗಲ್ಲನ್ನು ನೆಟ್ಟರು.
43ನೇ ಓವರ್‌ನಲ್ಲಿ ಇಶಾನ್ ಕಿಶನ್ ರನೌಟ್ ಆದ ನಂತರ ಶುಭ್‌ಮನ್ ಗಿಲ್‌ಗೆ ಇತರರಿಂದ ಹೆಚ್ಚಿನ ಬೆಂಬಲ ಸಿಗಲಿಲ್ಲ. ಆದರೆ ಅವರು ಮತ್ತೊಂದು ಬದಿ ರನ್ ಗಳಿಸುತ್ತಲೇ ಇದ್ದರು. ಸಣ್ಣ ತಪ್ಪುಗಳಿಗೂ ಜಿಂಬಾಬ್ವೆ ಬೌಲರ್‌ಗಳನ್ನು ದಂಡಿಸಿದರು. ಶುಭ್‌ಮನ್ ಗಿಲ್ ಅವರ ಸಮಯ ಮತ್ತು ಶಾಟ್‌ಗಳ ಆಯ್ಕೆಯು ಸುಂದರವಾಗಿತ್ತು. ಗಮನಾರ್ಹವಾದ ಅಂಶವೆಂದರೆ, ಶುಭ್‌ಮನ್ ಗಿಲ್ 2022ರಲ್ಲಿ ಆಡಿದ 6 ಏಕದಿನ ಪಂದ್ಯಗಳಲ್ಲಿ 450 ರನ್ ಗಳಿಸಿದ್ದು ಶತಕ ಮತ್ತು ಅರ್ಧಶತಕಗಳನ್ನು ಬಾರಿಸಿದ್ದಾರೆ. ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಮಳೆ-ಬಾಧಿತ ಏಕದಿನ ಪಂದ್ಯದಲ್ಲಿ 98 ರನ್ ಗಳಿಸಿ ಅಜೇಯರಾಗಿ ಉಳಿದಾಗ, ಶುಭ್‌ಮನ್ ಗಿಲ್ ತಮ್ಮ ಚೊಚ್ಚಲ ಶತಕವನ್ನು ಬಾರಿಸುವ ಅವಕಾಶ ಕಳೆದುಕೊಂಡಿದ್ದರು. ಆದರೆ ಜಿಂಬಾಬ್ವೆಯಲ್ಲಿ ಆ ಹೆಗ್ಗುರುತನ್ನು ಪಡೆಯುವ ಮೂಲಕ ಯುವ ಆಟಗಾರ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ
IND vs ZIM: ಮಂಕಡಿಂಗ್ ಮಾಡಿದರೂ ಔಟ್ಗೆ ಮನವಿ ಮಾಡದ ದೀಪಕ್ ಚಹಾರ್; ವಿಡಿಯೋ ವೈರಲ್
ಜಿಂಬಾಬ್ವೆ ಮತ್ತು ಭಾರತ ತಂಡದ ಆಡುವ 11ರ ಬಳಗ
ಭಾರತ: ಶಿಖರ್ ಧವನ್, ಶುಬ್‌ಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ದೀಪಕ್ ಚಹಾರ್, ಅವೇಶ್ ಖಾನ್
ಜಿಂಬಾಬ್ವೆ: ತಕುದ್ಜ್ವಾನಾಶೆ ಕೈಟಾನೊ, ಇನೊಸೆಂಟ್ ಕೈಯಾ, ಟೋನಿ ಮುನ್ಯೊಂಗಾ, ರೆಗಿಸ್ ಚಕಬ್ವಾ (ನಾಯಕ/ ವಿಕೆಟ್ ಕೀಪರ್), ಸಿಕಂದರ್ ರಜಾ, ಸೀನ್ ವಿಲಿಯಮ್ಸ್, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯಾಯುಚಿ, ರಿಚರ್ಡ್ ನ್ಗರವ