ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ತಾನು 'GAY' ಎಂದು ಹೇಳಿಕೊಂಡ ಆಸ್ಟ್ರೇಲಿಯಾದ ಫುಟ್ಬಾಲ್‌ ಆಟಗಾರ!

Andy Brennan discloses his sexuality on Instagram

ಮೆಲ್ಬೋರ್ನ್‌, ಮೇ 15: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಗೇ, ಲೆಸ್ಬಿಯನ್‌, ಬೈಸೆಕ್ಸುವಲ್‌ ಮತ್ತು ಟ್ರಾನ್ಸ್‌ಜೆಂಡರ್‌(ಎಲ್‌ಜಿಬಿಟಿ) ವಿವಾಹಕ್ಕೆ ಕಾನೂನು ಮೂಲಕ ಹಸಿರು ನಿಶಾನೆ ನೀಡಿದ ಬೆನ್ನಲ್ಲೇ ಹಲವು ಸೆಲೆಬ್ರಿಟಿ ಮತ್ತು ಕ್ರೀಡಾ ತಾರೆಯರು ಸಮಾಜಿಕ ಜಾಲತಾಣಗಳ ಮೂಲಕ ತಮ್ಮ ಲೈಂಗಿಕ ಆಸಕ್ತಿಯನ್ನು ಬಹುರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ.

 ವಿಶ್ವಕಪ್‌: ವಾರ್ನರ್‌, ಸ್ಮಿತ್‌ಗೆ ಮಾಜಿ ಕೋಚ್ ಲೆಹ್ಮನ್‌ ಹೇಳಿದ್ದೇನು? ವಿಶ್ವಕಪ್‌: ವಾರ್ನರ್‌, ಸ್ಮಿತ್‌ಗೆ ಮಾಜಿ ಕೋಚ್ ಲೆಹ್ಮನ್‌ ಹೇಳಿದ್ದೇನು?

ಇದಕ್ಕೆ ಹೊಸ ಸೇರ್ಪಡೆ ಎಂಬಂತೆ 26 ವರ್ಷದ ಫುಟ್ಬಾಲರ್‌ 'ಎ' ಲೀಗ್‌ನ ಮಾಜಿ ಆಟಗಾರ ಆಂಡಿ ಬ್ರೆನನ್‌ ತಾವು 'ಗೇ' (ಸಲಿಂಗಿ) ಎಂಬುದನ್ನು ಇನ್‌ಸ್ಟಾಗ್ರಾಮ್‌ ಮೂಲಕ ಬಹಿರಂಗ ಪಡಿಸಿದ್ದಾರೆ. ಈ ಮೂಲಕ ತಾನು 'ಗೇ' ಎಂದು ಒಪ್ಪಿಕೊಂಡ ಆಸ್ಟ್ರೇಲಿಯಾದ ಮೊದಲ ಪುರುಷ ಫುಟ್ಬಾಲರ್‌ ಆಗಿದ್ದಾರೆ.

 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಈ ಆಟಗಾರನ ಕೊರತೆ ಕಾಡಲಿದೆ: ದಾದಾ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಈ ಆಟಗಾರನ ಕೊರತೆ ಕಾಡಲಿದೆ: ದಾದಾ

"ನಾನು 'ಗೇ', ಎಂಬುದನ್ನು ಮುಕ್ತವಾಗಿ ಯಾವುದೇ ಅಂಜಿಕೆ ಇಲ್ಲದೆ ಹೇಳಿಕೊಳ್ಳಲು ಹಲವು ವರ್ಷಗಳೇ ಬೇಕಾಯಿತು. ನನ್ನ ಸ್ನೇಹಿತರು, ನನ್ನ ಸಹ ಆಟಗಾರರು ಮತ್ತು ನನ್ನ ಕುಟುಂಬದವರಿಗೆ ಇದರಿಂದ ತೊಂದರೆಯಾಗಬಹುದು ಎಂಬ ಭಯ ನನ್ನನ್ನು ಆವರಿಸಿತ್ತು. ಆದರೆ, ನನ್ನ ಸುತ್ತ ಮುತ್ತಲಿರುವ ಜನರ ಬೆಂಬಲ ಅಪಾರವಾಗಿದ್ದು, ಇಂಥದ್ದೊಂದು ಅಂತಿಮ ಹೆಜ್ಜೆ ಇಡಲು ನೆರವಾಗಿದೆ. ಇದೀಗ ಸಂಪೂರ್ಣವಾಗಿ ಮುಕ್ತವಾಗಿದ್ದೇನೆ. ನನ್ನ ತನ ಕಾಯ್ದುಕೊಳ್ಳುವುದು ಮತ್ತು ಮುಕ್ತವಾಗಿ ಇರುವುದು ನಿರಾಳ ಅನುಭವ ತಂದುಕೊಟ್ಟಿದೆ. ಇದನ್ನೇ ಮುಂದುವರಿಸಲಿದ್ದೇನೆ,'' ಎಂದು ಸದ್ಯ ಗ್ರೀನ್‌ ಗಲ್ಲಿ ಎಫ್‌ಸಿ ತಂಡದ ಪರ ಫಾರ್ವರ್ಡ್‌ ಆಟಗಾರನಾಗಿರುವ ಆಂಡಿ ಬ್ರೆನನ್‌ ತಮ್ಮ ಇನ್‌ಸ್ಟಾಗ್ರಾಮ್‌ ಗೋಡೆಯ ಮೇಲೆ ಬರೆದು ಕೊ೦ಡಿದ್ದಾರೆ.

 IPL: ಸೂಪರ್‌ ಕಿಂಗ್ಸ್‌ ಗೆಲುವಿಗಾಗಿ ರಕ್ತವನ್ನೇ ಹರಿಸಿದ್ದ ಶೇನ್‌ ವ್ಯಾಟ್ಸನ್‌! IPL: ಸೂಪರ್‌ ಕಿಂಗ್ಸ್‌ ಗೆಲುವಿಗಾಗಿ ರಕ್ತವನ್ನೇ ಹರಿಸಿದ್ದ ಶೇನ್‌ ವ್ಯಾಟ್ಸನ್‌!

ಆಸ್ಟ್ರೇಲಿಯಾದ 'ಎ' ಲೀಗ್‌ ಫುಟ್ಬಾಲ್‌ ಟೂರ್ನಿಯಲ್ಲಿ 2015-2017ರವರೆಗೆ ನ್ಯೂಕ್ಯಾಸಲ್‌ ಜೆಟ್ಸ್‌ ತಂಡದ ಪರ ಆಡಿದ ಅನುಭವ ಹೊಂದಿರುವ ಆಂಡಿ ಬ್ರೆನನ್‌, ಸದ್ಯ ವಿಕ್ಟೋರಿಯನ್‌ ನ್ಯಾಷನಲ್‌ ಪ್ರೀಮಿಯರ್‌ ಲೀಗ್‌ನಲ್ಲಿ ಗ್ರೀನ್‌ ಗಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

 ವಿಶ್ವಕಪ್‌: ಟೀಮ್‌ ಇಂಡಿಯಾ ಕುರಿತು ಕೋಚ್‌ ರವಿ ಶಾಸ್ತ್ರಿ ಅಭಿಪ್ರಾಯವಿದು ವಿಶ್ವಕಪ್‌: ಟೀಮ್‌ ಇಂಡಿಯಾ ಕುರಿತು ಕೋಚ್‌ ರವಿ ಶಾಸ್ತ್ರಿ ಅಭಿಪ್ರಾಯವಿದು

ಇದಕ್ಕೂ ಮುನ್ನ ಅಮೆರಿಕದ ಕಾಲಿನ್‌ ಮಾರ್ಟಿನ್‌, ಅತ್ಯುನ್ನತ ಮಟ್ಟದ ಡಿವಿಷನ್‌ ಹಂತದ ಫುಟ್ಬಾಲ್‌ನಲ್ಲಿ ಆಡುತ್ತಿರುವ ವಿಶ್ವದ ಏಕಮಾತ್ರ ಗೇ ಫುಟ್ಬಾಲರ್‌ ಆಗಿದ್ದರು. ಇದೀಗ ಈ ಪಟ್ಟಿಗೆ ಬ್ರೆನನ್‌ ಸೇರ್ಪಡೆಯಾಗಿದ್ದಾರೆ. ಇನ್ನು 2014ರಲ್ಲಿ ಜರ್ಮನಿಯ ಮತ್ತು ಆಸ್ಟನ್‌ ವಿಲ್ಲಾರ್‌ ತಂಡದ ಆಟಗಾರ ಥಾಮಸ್‌ ಹಿಟ್ಸ್‌ಸ್ಪೆರ್ಗರ್‌ ತಾವು ಗೇ ಎಂಬುದನ್ನು ಬಹಿರಂಗ ಪಡಿಸಿದ್ದರು.

'ಗೇ' ಎಂದು ಹೇಳಿದ್ದ ಕ್ರಿಕೆಟರ್‌ ಜೇಮ್ಸ್‌ ಫಾಕ್ನರ್‌

ವೇಗದ ಬೌಲಿಂಗ್, ಅಬ್ಬರದ ಬ್ಯಾಟಿಂಗ್ ಮೂಲಕ ಖ್ಯಾತಿ ಪಡೆದಿದ್ದ 2015ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ನ ಪಂದ್ಯ ಶ್ರೇಷ್ಠ ಆಟಗಾರ ಆಸ್ಟ್ರೇಲಿಯಾದ ಆಲ್‌ರೌಂಡರ್ ಜೇಮ್ಸ್‌ ಫಾಕ್ನರ್ ತಾವು 'ಗೇ' ಎಂಬ ಗುಟ್ಟನ್ನು ಬಹಿರಂಗ ಪಡಿಸಿದ್ದರು. ಕಳೆದ ತಿಂಗಳು ತಮ್ಮ 29ನೇ ಜನ್ಮ ದಿನ ಆಚರಿಸಿಕೊಂಡ ಜೇಮ್ಸ್‌, ತಾಯಿ ಮತ್ತು ತಮ್ಮ 'ಬಾಯ್‌ಫ್ರೆಂಡ್‌' ಜೊತೆಗೆ ಭೋಜನ ಸವಿಯುತ್ತಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಐದು ವರ್ಷದಿಂದಲೂ ತಾವು ಜೊತೆಯಾಗಿರುವುದಾಗಿಯೂ ಬರೆದುಕೊಂಡಿದ್ದರು. 69 ಏಕದಿನ ಪಂದ್ಯ ಆಡಿರುವ ಅವರು 96 ವಿಕೆಟ್ ಗಳಿಸಿದ್ದಾರೆ ಮತ್ತು 1033 ರನ್ ಗಳಿಸಿದ್ದಾರೆ. 60 ಐಪಿಎಲ್‌ ಪಂದ್ಯಗಳಲ್ಲಿ 59 ವಿಕೆಟ್ ಗಳಿಸಿ 527 ರನ್ ಗಳಿಸಿದ್ದಾರೆ. ಅವರು ಕೇವಲ ಒಂದು ಟೆಸ್ಟ್‌ ಪಂದ್ಯವನ್ನಷ್ಟೆ ಆಡಿದ್ದಾರೆ.

ಮರು ದಿನವೇ ಗೇ ಅಲ್ಲ ಎಂದು ಸ್ಪಷ್ಟಣೆ

ಸಾಮಾಜಿಕ ಜಾಲತಾಣದಲ್ಲಿ ತಾವು ಸಲಿಂಗಿ ಎಂಬುದರ ಸೂಚನೆ ನೀಡುವ ಪೋಸ್ಟ್‌ ಮಾಡಿ ಪೆಚ್ಚಾದ ಆಸ್ಟ್ರೇಲಿಯಾದ ಆಲ್‌ರೌಂಡರ್‌ ಜೇಮ್ಸ್‌ ಫಾಕ್ನರ್‌, ಮರುದಿನವೇ ಯೂ-ಟರ್ನ್‌ ಹೊಡೆದರು. ತಾವು ಗೇ ಅಲ್ಲ ಈ ಕುರಿತಾಗಿ ತಪ್ಪಾಗಿ ಗ್ರಹಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಒಂದನ್ನು ಹಾಕಿದ್ದ ಫಾಕ್ನರ್‌, ತಮ್ಮ ಬಾಯ್‌ಫ್ರೆಂಡ್‌ ಜೊತೆಗೆ ಊಟ ಮಾಡುತ್ತಿದ್ದು, 5 ವರ್ಷಗಳ ಬಾಂಧವ್ಯವನ್ನು ಸಂಭ್ರಮಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಜೊತೆಗೆ 'ಟುಗೆದರ್‌ ಫಾರ್‌ 5 ಯಿಯರ್ಸ್‌' ಎಂದು ಹ್ಯಾಷ್‌ ಟ್ಯಾಗ್‌ ಕೂಡ ಬಳಕೆ ಮಾಡಿದ್ದರು. ಚಿತ್ರದಲ್ಲಿ ಫಾಕ್ನರ್‌ ಅವರ ತಾಯಿ ಮತ್ತು ಸ್ನೇಹಿತ ರಾಬ್‌ ಜೂಬ್‌ ಇದ್ದರು. "Birthday dinner with the boyfriend @robjubbsta and my mother @roslyn_carol_faulkner #togetherfor5years," ಎಂದು ಫಾಕ್ನರ್‌ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. ಆದರೆ, ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟನ್ನು ತಪ್ಪಾಗಿ ಗ್ರಹಿಸಲಾಗಿದೆ. ನಾನು ಗೇ ಅಲ್ಲ. ಆತ ನನ್ನ ಅತ್ಯುತ್ತಮ ಸ್ನೇಹಿತ ಎಂದಿದ್ದಾರೆ. "ನನ್ನ ಹಿಂದಿನ ಪೋಸ್ಟನ್ನು ತಪ್ಪಾಗಿ ಗ್ರಹಿಸಲಾಗಿದೆ. ನಾನು ಗೇ ಅಲ್ಲ. ಆದರೂ, ಎಲ್‌ಜಿಬಿಟಿ ಸಮುದಾಯಕ್ಕೆ ಇಷ್ಟು ಬೆಂಬಲ ಕಂಡು ಸಂತಸವಾಗಿದೆ. ಪ್ರೀತಿ ಎಂದಿಗೂ ಪ್ರೀತಿಯೇ ಎಂಬುದನ್ನು ಮರೆಯಬಾರದು. ಅಂದಹಾಗೆ @ರಾಬ್‌ಜೂಬ್‌ ನನ್ನ ಆತ್ಮೀಯ ಸ್ನೇಹಿತ. ಕಳೆದ ರಾತ್ರಿ ನಾವಿಬ್ಬರು ಒಂದೇ ಮನೆಯಲ್ಲಿ 5 ವರ್ಷ ಕಾಲ ಉಳಿದುದ್ದರ ಸಂಭ್ರಮ ಆಚರಿಸಿದೆವು,'' ಎಂದು ಎಡಗೈ ವೇಗಿ ತಮ್ಮ ಮತ್ತೊಂದು ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಬರೆದಿದ್ದರು.

ಕ್ರಿಕೆಟ್‌ ಜಗತ್ತಿನಲ್ಲಿ ಸಲಿಂಗಿ ಮದುವೆ!

ಕಳೆದ ತಿಂಗಳು ನ್ಯೂಜಿಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ಹೇಲೇ ಜೆನ್ಸೆನ್‌ ಆಸ್ಟ್ರೇಲಿಯಾದ ಯುವ ಆಟಗಾರ್ತಿ ನಿಕೊಲಾ ಹ್ಯಾಂಡ್‌ಕಾಕ್‌ ಅವರನ್ನು ಮದುವೆಯಾಗಿದ್ದರು. 26 ವರ್ಷದ ಬೌಲರ್‌ ಹೇಲೇ ಜೆನ್ಸೆನ್‌ ಮತ್ತು ಇನ್ನು ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸದ 23 ವರ್ಷದ ಆಟಗಾರ್ತಿ ನಿಕೊಲಾ ಅವರನ್ನು ವರಿಸಿದ್ದಾರೆ. ಮಹಿಳಾ ಬಿಗ್‌ಬ್ಯಾಷ್‌ ಲೀಗ್‌ ಕ್ರಿಕೆಟ್‌ ಟೂರ್ನಿ ವೇಳೆ ಈ ಇಬ್ಬರೂ ಆಟಗಾರ್ತಿಯರು ಮೆಲ್ಬೋರ್ನ್‌ ಸ್ಟಾರ್ಸ್‌ ಪರ ಆಡಿದ್ದರು. ಅಂದಿನ ಸ್ನೇಹವೇ ಇಬ್ಬರ ಮದುವೆಗೆ ಅಡಿಗಲ್ಲಾಗಿದೆ.

ದಕ್ಷಿಣ ಆಫ್ರಿಕಾ ತಂಡದ ನಾಯಕಿ ಮದುವೆ!

ಅಂದಹಾಗೆ ಕ್ರಿಕೆಟ್‌ ಜಗತ್ತಿನಲ್ಲಿ ಮಹಿಳಾ ಆಟಗಾರ್ತಿಯರು ವಿವಾಹವಾಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ನ್ಯೂಜಿಲೆಂಡ್‌ ತಂಡದ ಏಮಿ ಸ್ಯಾಟರ್ತ್‌ವೇಟ್‌ ಮತ್ತು ಲೀ ತಹೂಹು ಮದುವೆಯಾಗಿದ್ದರು. ಬಳಿಕ ದಕ್ಷಿಣ ಆಫ್ರಿಕಾ ತಂಡದ ಆಟಗಾರ್ತಿಯರಾದ ಡ್ಯಾನ್‌ ವ್ಯಾನ್‌ ನೀ ಕೆರ್ಕ್‌ (ತಂಡದ ನಾಯಕಿ ಕೂಡ) ಮತ್ತು ಮರಿಝೇನ್‌ ಕಾಪ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕ್ರಿಕೆಟ್‌ ಜಗತ್ತಿನಲ್ಲಿ ಮಿಂಚಿನ ಸಂಚಲನವನ್ನುಂಟು ಮಾಡಿದ್ದರು.

Story first published: Wednesday, May 15, 2019, 14:17 [IST]
Other articles published on May 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X