ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup: ಬೆಲ್ಜಿಯಂಗೆ ಶಾಕ್ ನೀಡಿ 24 ವರ್ಷಗಳ ನಂತರ ಮೊದಲ ಜಯ ದಾಖಲಿಸಿದ ಮೊರೊಕ್ಕೊ

Another Big Upset In Fifa World Cup 2022: World No. 22 Morocco Beats World No.2 Belgium

ಫಿಫಾ ವಿಶ್ವಕಪ್‌ 2022ರಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಭಾನುವಾರ ದಾಖಲಾಗಿದೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ಬಲಿಷ್ಠ ಬೆಲ್ಜಿಯಂ ತಂಡವನ್ನು 22ನೇ ರ್‍ಯಾಂಕಿಂಗ್‌ನಲ್ಲಿರುವ ಮೊರೊಕ್ಕೋ 2-0 ಗೋಲುಗಳ ಅಂತರದಿಂದ ಜಯ ಸಾಧಿಸಿದೆ.

ಅಲ್‌ ತುಮಾಮ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ 1998ರ ಬಳಿಕ ತನ್ನ ಮೊದಲನೇ ಜಯವನ್ನು ಸಾಧಿಸಿತು. ಅದೂ ಕೂಡ ಬಲಿಷ್ಠ ಬೆಲ್ಜಿಯಂ ವಿರುದ್ಧ ಜಯ ಗಳಿಸಿ ಇತಿಹಾಸ ನಿರ್ಮಿಸಿತು.

ಪಂದ್ಯ ಆರಂಭದಿಂದಲೂ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದರು. ಮೊದಲಾರ್ಧದಲ್ಲಿ ಉಭಯ ತಂಡಗಳಿಗೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ದ್ವಿತೀಯಾರ್ಧದಲ್ಲಿ, ಪಂದ್ಯದ 73ನೇ ನಿಮಿಷದಲ್ಲಿ ಅಬ್ದುಲ್ ಹಮೀದ್ ಸಾಬಿರಿ ಫ್ರೀಕಿಕ್ ಮೂಲಕ ಮೊದಲ ಗೋಲು ಗಳಿಸಿ ಮೊರೊಕ್ಕೊ ಜಯಕ್ಕೆ ಮುನ್ನುಡಿ ಬರೆದರು.

ಅದಾದ ನಂತರ ಪಂದ್ಯದ ಹೆಚ್ಚುವರಿ ಸಮಯದಲ್ಲಿ (90+2ನೇ ನಿಮಿಷದಲ್ಲಿ) ಝಕರಿಯಾ ಅಬು ಖಲೀಲ್ ಎರಡನೇ ಗೋಲು ದಾಖಲಿಸುವ ಮೂಲಕ ಬೆಲ್ಜಿಯಂಗೆ ಮತ್ತೊಂದು ಶಾಕ್ ನೀಡಿದರು.

ಈ ಜಯದ ಮೂಲಕ ಎಫ್‌ ಗುಂಪಿನಲ್ಲಿ ಒಂದು ಜಯ ಮತ್ತು ಒಂದು ಡ್ರಾ ಮೂಲಕ ಎರಡನೇ ಸ್ಥಾನಕ್ಕೇರಿದೆ. ಬೆಲ್ಜಿಯಂ ಈ ಸೋಲಿನೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.

Another Big Upset In Fifa World Cup 2022: World No. 22 Morocco Beats World No.2 Belgium

ಬೆಲ್ಜಿಯಂ ನಾಕ್‌ಔಟ್ ಹಾದಿ ಕಠಿಣ

ಈ ಆಘಾತಕಾರಿ ಸೋಲಿನ ಮೂಲಕ ಬೆಲ್ಜಿಯಂ ನಾಕೌಟ್ ಹಾದಿ ಕೂಡ ಕಠಿಣವಾಗಿದೆ. ಎಫ್ ಗ್ರೂಪ್‌ನಲ್ಲಿ ಕ್ರೊಯೇಷಿಯಾ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಮೊರೊಕ್ಕೊ ಕೂಡ 4 ಅಂಕಗಳನ್ನು ಪಡೆಯುವ ಮೂಲಕ 2ನೇ ಸ್ಥಾನದಲ್ಲಿದೆ.

ಮೊರೊಕ್ಕೊ ವಿರುದ್ಧದ ಸೋಲಿನ ನಂತರ ಬೆಲ್ಜಿಯಂ 3ನೇ ಸ್ಥಾನಕ್ಕೆ ಕುಸಿದಿದೆ. ಬೆಲ್ಜಿಯಂ ತನ್ನ ಮುಂದಿನ ಪಂದ್ಯವನ್ನು ಡಿಸೆಂಬರ್ 1ರಂದು ಕ್ರೊವೇಷಿಯಾ ವಿರುದ್ಧ ಆಡಲಿದ್ದು ಆ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಮಾತ್ರ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಲಿದೆ. ಇಲ್ಲವಾದರೆ, ಬೆಲ್ಜಿಯಂ ವಿಶ್ವಕಪ್ ಅಭಿಯಾನ ಗುಂಪು ಹಂತದಲ್ಲೇ ಅಂತ್ಯವಾಗಲಿದೆ.

ಮೊರೊಕ್ಕೊ ತನ್ನ ಮುಂದಿನ ಪಂದ್ಯದಲ್ಲಿ ಕೆನಡಾವನ್ನು ಎದುರಿಸಲಿದೆ. ಡಿಸೆಂಬರ್ 1ರಂದು ಈ ಪಂದ್ಯ ನಡೆಯಲಿದೆ. ಆಡಿರುವ ಎರಡು ಪಂದ್ಯಗಳಲ್ಲಿ ಸೋಲನುಭವಿಸಿರುವ ಕೆನಡಾ ಈಗಾಗಲೇ ವಿಶ್ವಕಪ್‌ ರೇಸ್‌ನಿಂದ ಹೊರ ಬಿದ್ದಿದ್ದು, ಔಪಚಾರಿಕವಾಗಿ ಮೊರೊಕ್ಕೊ ವಿರುದ್ಧ ಆಡಲಿದೆ.

Story first published: Monday, November 28, 2022, 2:30 [IST]
Other articles published on Nov 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X