ಏಷ್ಯನ್ ಕಪ್ 2019: ಭಾರತದ ಹೆಮ್ಮೆಯ ಫುಟ್ಬಾಲ್ ಆಟಗಾರರ ಕಿರುವಿವರ

By Isl Media
ASIAN CUP 2019: Indian all Players Profile

ನವದೆಹಲಿ, ಜನವರಿ 3: ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ ಎಫ್ ) ಏಷ್ಯನ್ ಫುಟ್ಬಾಲ್ ಕಾನ್ಫಿಡರೇಷನ್ (ಎಎಫ್ಸಿ) ಏಷ್ಯನ್ ಕಪ್ 2019ಗಾಗಿ 23 ಸದಸ್ಯರನ್ನೊಳಗೊಂಡ ತಂಡವನ್ನು ಪ್ರಕಟಿಸಿದ್ದು, ಪಂದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ 2019 ಜನವರಿ 5 ರಿಂದ ಆರಂಭಗೊಳ್ಳಲಿದೆ. ಬ್ಲೂ ಟೈಗರ್ಸ್ ಖ್ಯಾತಿಯ ಭಾರತ ತಂಡಕ್ಕೆ ಎಂಟು ವರ್ಷಗಳ ನಂತರ ನಾಲ್ಕನೇ ಎಎಫ್ ಸಿ ಏಷ್ಯನ್ ಕಪ್ ಆಗಿದೆ.

ನಿಂಗಿನ್ನೂ ಬೋರ್‌ ಅನ್ಸಿಲ್ವಾ?: ಸುಸ್ತಾದ ಲಿಯಾನ್, ಪೂಜಾರಗೆ ಪ್ರಶ್ನೆ!

ಕಿರ್ಗೀಜ್ ರಿಪಬ್ಲಿಕ್, ಮ್ಯಾನ್ಮಾರ್ ಮತ್ತು ಮಕಾವ್‌ನಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಗೆದ್ದ ಪಂದ್ಯಗಳಲ್ಲಿ ಗೆದ್ದ 24 ತಂಡಗಳಲ್ಲಿ ಭಾರತವೂ ಕೂಡ ತನ್ನ ಸ್ಥಾನವನ್ನು ಗಳಿಸಿದೆ. ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ, ಬಹೆರಿನ್, ಥಾಯ್ಲೆಂಡ್ ಹಾಗೂ ಆತಿಥೇಯ ಯುಎಇ ವಿರುದ್ಧ ಪಂದ್ಯಗಳನ್ನು ಆಡಲಿದೆ. ಅಬುಧಾಬಿಯಲ್ಲಿ ಜನವರಿ 6ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಬ್ಲೂ ಟೈಗರ್ಸ್ ಪಡೆ ಥಾಯ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

ಐಪಿಎಲ್ 2019 ಆತಿಥ್ಯದ ಬಗ್ಗೆ ಊಹಾಪೋಹ, ವೇಳಾಪಟ್ಟಿ ವೈರಲ್!

ಸ್ಟೀನ್ ಕಾನ್‌ಸ್ಟಾಂಟೈನ್ ಅವರ ತರಬೇತಿಯಲ್ಲಿ ಭಾರತ ತಂಡ ಫಿಫಾ ರಾಂಕಿಂಗ್‌ನಲ್ಲಿ 170 ರಿಂದ ಅಗ್ರ 100 ಸ್ಥಾನಕ್ಕೆ ತಲುಪಿತ್ತು. 2015ರಲ್ಲಿ ಏಷ್ಯಾ ಕಪ್‌ಗೆ ಅರ್ಹತೆ ಪಡೆಯುವಲ್ಲಿ ಭಾರತ ತಂಡ ವಿಲವಾದ ನಂತರ ಕಾನ್‌ಸ್ಟಾಂಟೈನ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಾರಂಭಿಸಿದರು. ಆ ನಂತರ 13 ಪಂದ್ಯಗಳಲ್ಲಿ ಅಜೇಯವಾಗಿ ಭಾರತ ಯಶಸ್ಸು ಕಂಡಿತ್ತು. ಇಂಗ್ಲೆಂಡ್‌ನ ಕೋಚ್ ಅವರ ತರಬೇತಿಯಲ್ಲಿ ಪಳಗಿರುವ ತಂಡ 2017ರಲ್ಲಿ ಮೂರು ರಾಷ್ಟ್ರಗಳ ಪಂದ್ಯವನ್ನು ಗೆದ್ದುಕೊಂಡಿತ್ತು, ಅಲ್ಲದೆ 2018ರಲ್ಲಿ ಇಂಟರ್‌ಕಾಂಟಿನೆಂಟಲ್ ಕಪ್ ಪ್ರಶಸ್ತಿ ಗೆದ್ದಿತ್ತು.

ಏಷ್ಯಾ ಫುಟ್ಬಾಲ್‌ನ ಮಹಾ ಸಂಗ್ರಾಮಕ್ಕೆ ಭಾರತ ಸಜ್ಜಾಗಿದೆ, ಬ್ಲೂ ಟೈಗರ್ಸ್‌ನ ಆಟಗಾರರ ಬಗ್ಗೆ ಕಿರು ಮಾಹಿತಿ ಇಲ್ಲಿದೆ.

ಗುರ್‌ಪ್ರೀತ್ ಸಿಂಗ್ ಸಂಧೂ

ಗುರ್‌ಪ್ರೀತ್ ಸಿಂಗ್ ಸಂಧೂ

ಕ್ಲಬ್: ಬೆಂಗಳೂರು.

ಸ್ಥಾನ: ಗೋಲ್‌ಕೀಪರ್.

ವಯಸ್ಸು: 26.

2017ರಲ್ಲಿ ನಾರ್ವೆ ಸ್ಟಾಬೆಕ್ ಕ್ಲಬ್‌ನಿಂದ ಬೆಂಗಳೂರು ತಂಡವನ್ನು ಸೇರಿಕೊಂಡಾಗಿನಿಂದ ಸಂಧೂ, ಕ್ಲಬ್ ಹಾಗೂ ದೇಶಕ್ಕಾಗಿ ಉತ್ತಮ ರೀತಿಯಲ್ಲಿ ಆಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಕ್ಲಬ್ ಹಾಗೂ ದೇಶಕ್ಕಾಗಿ ಆಡಿದ ಪ್ರತಿಯೊಂದು ಪಂದ್ಯದಲ್ಲೂ ಮಿಂಚಿರುವ ಕಾರಣ ಕೋಚ್‌ಗೆ ಅವರು ಮೊದಲ ಆಯ್ಕೆಯಾಗಿತ್ತು. ಗಾತ್ರದಲ್ಲಿ ಎತ್ತರ ಹಾಗೂ ನಿರ್ಧಾರ ಕೈಗೊಳ್ಳುವಲ್ಲಿ ಅವರು ನಿಸ್ಸೀಮರಾಗಿದ್ದರು. ಅವರು ಬಹಳ ವಿಸ್ತಾರದ ಅಂತರದಲ್ಲಿ ಚೆಂಡನ್ನು ತಡೆಯಬಲ್ಲರು. ಗೋಲ್ ಬಾಕ್ಸ್‌ನ ಫ್ರೆಮ್ ಅನ್ನು ಉತ್ತಮ ರೀತಿಯಲ್ಲಿ ಆವರಿಸಿಕೊಳ್ಳುವ ಸಾಮರ್ಥ್ಯ ಅವರಲ್ಲಿದೆ. ಹೀರೋ ಇಂಡಿಯನ್ ಸೂಪರ್ ಲೀಗ್‌ನ ಎರಡು ಆವೃತ್ತಿಗಳಲ್ಲಿ ಗುರ್‌ಪ್ರೀತ್ 30 ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. ಕೇವಲ 25 ಗೋಲುಗಳನ್ನು ದಾಖಲಾಗಲು ಬಿಟ್ಟಿರುವ ಅವರು 76 ಗೋಲುಗಳನ್ನು ತಡೆದಿದ್ದರು. ನಾರ್ವೆಗೆ ತೆರಳುವ ಮುನ್ನ ಅವರು ಈಸ್ಟ್ ಬೆಂಗಾಲ್ ತಂಡದ ಪರ ಆಡಿದ್ದರು. ಭಾರತ ತಂಡದ ಪರ 29 ಪಂದ್ಯಗಳನ್ನು ಆಡಿದ್ದರು.

ಅಮ್ರೀಂದರ್ ಸಿಂಗ್

ಅಮ್ರೀಂದರ್ ಸಿಂಗ್

ಕ್ಲಬ್: ಮುಂಬೈ ಸಿಟಿ ಎಫ್ ಸಿ,

ಸ್ಥಾನ: ಗೋಲ್‌ಕೀಪರ್.

ವಯಸ್ಸು: 25.

ತರಬೇತುದಾರರು ಅಮ್ರೀಂದರ್ ಕೋಚ್ ಜವಾಬ್ದಾರಿಗೆ ಸೂಕ್ತ ಆಟಗಾರ ಎಂದು ಗುರುತಿಸುವ ಮೊದಲು ಸ್ಟ್ರೈಕರ್ ವಿಭಾಗದಲ್ಲಿ ಆಡುತ್ತಿದ್ದರು. ಪಂಜಾಬ್ ಮೂಲದ ಗೋಲ್‌ಕೀಪರ್ ರಾಷ್ಟ್ರೀಯ ತಂಡದಲ್ಲಿ ಯಾವಾಗಲೂ ಗುರ್‌ಪ್ರೀತ್ ಸಿಂಗ್ ಸಂಧೂ ಅವರಿಗೆ ಬದಲಿಗನಾಗಿ ಅಂಗಣಕ್ಕಿಳಿಯುತ್ತಿದ್ದರು. ಹಿಂದೆ ಪುಣೆ ಎಫ್ ಸಿ, ಎಟಿಕೆ ಹಾಗೂ ಬೆಂಗಳೂರು ಎಫ್ ಸಿ ಪರ ಆಡಿದ್ದರು. ಎಎಫ್ ಸಿ ಕಪ್ ಸೆಮಿಫೈನಲ್‌ನಲ್ಲಿ ಆಡಿದ್ದರು. ನಂತರ ಮುಂಬೈ ತಂಡದಲ್ಲಿ ಕಾಣಿಸಿಕೊಂಡು ಉತ್ತಮ ಗೋಲ್‌ಕೀಪರ್ ಎನಿಸಿದ್ದಾರೆ.

ವಿಶಾಲ್ ಕೈತ್

ವಿಶಾಲ್ ಕೈತ್

ಕ್ಲಬ್: ಪುಣೆ ಸಿಟಿ.

ಸ್ಥಾನ: ಗೋಲ್‌ಕೀಪರ್.

ವಯಸ್ಸು: 22.

ಪುಣೆ ಸಿಟಿ ತಂಡದಲ್ಲಿ ಗೋಲ್‌ಕೀಪಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ವಿಶಾಲ್ ಕೈತ್ ತಾನೊಬ್ಬ ಉತ್ತಮ ಗೋಲ್‌ಕೀಪರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಚೆಂಡಿನಂತೆ ಚಿಮ್ಮುವುದು, ಜತೆಯಲ್ಲಿ ಚೆಂಡನ್ನು ತಡೆಯುವ ಮೂಲಕ ಭಾರತ ತಂಡದಲ್ಲಿ ಗುರ್‌ಪ್ರೀತ್ ಸಿಂಗ್ ಅವರ ಸ್ಥಾನವನ್ನು ತುಂಬುವ ಗೋಲ್‌ಕೀಪರ್ ಎನಿಸಿಕೊಂಡಿದ್ದಾರೆ. ಐಎಸ್‌ಎಲ್ ಬದುಕಿನಲ್ಲಿ ಕೈತ್ 21 ಪಂದ್ಯಗಳನ್ನಾಡಿದ್ದು, ಅದರಲ್ಲಿ ಏಳು ಕ್ಲೀನ್ ಶೀಟ್ ಸಾಧನೆ ಮಾಡಿದ್ದಾರೆ.2018ರ ಸ್ಯ್‌ಾ ಚಾಂಪಿಯನ್‌ಷಿಪ್‌ನಲ್ಲಿ ವಿಶಾಲ್ ಗೋಲ್‌ಕೀಪಿಂಗ್‌ನಲ್ಲಿ ಭಾರತ ತಂಡಕ್ಕೆ ಮೊದಲ ಆಯ್ಕೆಯಾಗಿತ್ತು. ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಕ್ಲೀನ್ ಶೀಟ್ ಸಾಧನೆ ಮಾಡಿದ್ದಾರೆ.

ಪ್ರೀತಮ್ ಕೊತಾಲ್

ಪ್ರೀತಮ್ ಕೊತಾಲ್

ಕ್ಲಬ್: ಡೆಲ್ಲಿ ಡೈನಮೋಸ್.

ಸ್ಥಾನ: ರೈಟ್ ಬ್ಯಾಕ್.

ವಯಸ್ಸು: 25.

ಟಾಟಾ ಫುಟ್ಬಾಲ್ ಅಕಾಡೆಮಿ (ಟಿಎಫ್ ಎ)ಯಲ್ಲಿ ಪಳಗಿರುವ ಪ್ರೀತಮ್ ಕೊತಾಲ್, ಕಳೆದ ಮೂರು ವರ್ಷಗಳಿಂದ ಭಾರತ ತಂಡದ ರೈಟ್ ಬ್ಯಾಕ್ ವಿಭಾಗದಲ್ಲಿ ಮೊದಲ ಆಯ್ಕೆ ಎನಿಸಿದ್ದಾರೆ. ಡೆಲ್ಲಿ ಡೈನಾಮೋಸ್ ತಂಡದಲ್ಲಿ ತನ್ನ ಛಾಪನ್ನು ಮೂಡಿಸುವುದಕ್ಕೆ ಮೊದಲು ಪಶ್ಚಿಮ ಬಂಗಾಳದ ಈ ಆಟಗಾರ ಮೋಹನ್ ಬಾಗನ್, ಪುಣೆ ಸಿಟಿ ಹಾಗೂ ಎಟಿಕೆ ತಂಡಗಳಲ್ಲಿ ಆಡಿದ್ದರು. ಎಡ ಭಾಗದ ಡಿಫೆನ್ಸ್ ವಿಭಾಗವನ್ನು ನಿಯಂತ್ರಿಸುವುದರ ಜತೆಯಲ್ಲಿ ಫುಲ್ ಬ್ಯಾಕ್ ವಿಭಾಗದಲ್ಲಿದ್ದು ಫಾರ್ವರ್ಡ್ ವಲಯದಲ್ಲೂ ಆಡುವ ಚಾಕಚಕತ್ಯತೆ ಹೊಂದಿದ್ದಾರೆ.

ಸಾರ್ಥಕ್ ಗೌಳಿ

ಸಾರ್ಥಕ್ ಗೌಳಿ

ಕ್ಲಬ್-ಪುಣೆ ಸಿಟಿ.

ಸ್ಥಾನ-ಡಿಫೆಂಡರ್.

ವಯಸ್ಸು-21.

ಮಿಂಚಿನ ಓಟ ಹಾಗೂ ಎದುರಾಳಿಯ ಭದ್ರ ಕೋಟೆಯನ್ನು ಮುರಿಯುವಲ್ಲಿ ರೈಟ್-ಬ್ಯಾಕ್ ವಿಭಾಗದಲ್ಲಿ ಸಾರ್ಥಕ್ ಗೌಳಿ ಹೆಸರುವಾಸಿ. ಫಾರ್ವರ್ಡ್ ವಿಭಾಗದಲ್ಲಿ ಎದುರಾಳಿಯ ಆಟಗಾರರನ್ನು ನಿಯಂತ್ರಿಸಿ ಚೆಂಡನ್ನು ತನ್ನ ವಷಕ್ಕೆ ತೆಗೆದುಕೊಂಡು ಫಾರ್ವರ್ಡ್ ಆಟಗಾರರಿಗೆ ನೆರವಾಗುವುದು. ಕಳೆದ ಎರಡು ಐಎಸ್‌ಎಲ್ ಋತುವಿನಲ್ಲಿ ಪುಣೆ ತಂಡದ ಪರ ಆಡುತ್ತಿದ್ದ ಗೌಳಿ, ತನ್ನ ಸ್ಥಾನಕ್ಕೆ ಮೊದಲ ಆಯ್ಕೆ ಎಂಬುದನ್ನು ಸಾಬೀತುಪಡಿಸಿದ್ದಾರೆ. 21 ಪಂದ್ಯಗಳನ್ನಾಡಿರುವ ಸಾರ್ಥಕ್ ಗೌಳಿ ಒಂದು ಗೋಲು ಹಾಗೂ ನಾಲ್ಕು ಬಾರಿ ಗೋಲು ಗಳಿಸಲು ನೆರವಾಗಿದ್ದಾರೆ.

ಸಂದೇಶ್ ಜಿಂಗಾನ್

ಸಂದೇಶ್ ಜಿಂಗಾನ್

ಕ್ಲಬ್- ಕೇರಳ ಬ್ಲಾಸ್ಟರ್ಸ್.

ಸ್ಥಾನ- ಡಿಫೆಂಡರ್-ಸೆಂಟರ್/ರೈಟ್ ಬ್ಯಾಕ್.

ವಯಸ್ಸು-25

ಪಂಜಾಬ್ ಸಂಜಾತ ಸಂದೇಶ್ ಜಿಂಗಾನ್ ಇತ್ತೀಚಿನ ವರ್ಷಗಳಲ್ಲಿ ತನ್ನ ಕ್ಲಬ್ ಹಾಗೂ ದೇಶಕ್ಕಾಗಿ ಸ್ಥಿರ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಕೇರಳ ಬ್ಲಾಸ್ಟರ್ಸ್ ಪರ 70 ಪಂದ್ಯಗಳನ್ನಾಡಿರುವ ಜಿಂಗಾನ್, ನಾಲ್ಕು ಗೋಲು ಗಳಿಕೆಯಲ್ಲಿ ನೆರವಾಗಿದ್ದಾರೆ. ದೈಹಿಕವಾಗಿ ಬಲಿಷ್ಠರಾಗಿರುವ ಜಿಂಗಾನ್, ತಂಡದಲ್ಲಿ ಅತ್ಯಂತ ಎತ್ತರದ ಡಿಫೆಂಡರ್. ಅತ್ಯಂತ ಆಕ್ರಮಣಕಾರಿ ಆಟಕ್ಕೆ ಅವರು ಹೆಸರುವಾಸಿ. ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ಎಂದೂ ನಡೆದುಕೊಂಡವರಲ್ಲ. ರೈಟ್ ಬ್ಯಾಕ್‌ನಲ್ಲೂ ಉತ್ತಮವಾಗಿ ಆಡುವ ಜಿಂಗಾನ್ ಭಾರತ ತಂಡದ ಅತ್ಯಮೂಲ್ಯ ಆಟಗಾರ.

ಅನಾಸ್ ಎಡಥೋಡಿಕಾ

ಅನಾಸ್ ಎಡಥೋಡಿಕಾ

ಕ್ಲಬ್-ಕೇರಳ ಬ್ಲಾಸ್ಟರ್ಸ್

ಸ್ಥಾನ-ಡಿಫೆಂಡರ್, ಸೆಂಟರ್ ಬ್ಯಾಕ್.

ವಯಸ್ಸು-31

ಫುಟ್ಬಾಲ್ ಕ್ರೀಡೆ ಹೆಚ್ಚು ಜನಪ್ರಿಯವಾಗಿರುವ ಕೇರಳದ ಮಲಪ್ಪುರಂನ ಆಟಗಾರ ಅನಾಸ್ ಅಡಥೋಡಿಕಾ 2007ರಲ್ಲಿ ಮುಂಬೈ ಎಫ್ಸಿ ಪರ ಆಡುವ ಮೂಲಕ ಗಮನ ಸೆಳೆದವರು. 2015ರಲ್ಲಿ ಹೀರೋ ಐಎಸ್‌ಎಲ್‌ನಲ್ಲಿ ಡೆಲ್ಲಿ ಡೈನಮೋಸ್‌ಗೆ ಸಹಿ ಮಾಡಿದ್ದರು. 2017ರಲ್ಲಿ ಆಟಗಾರರ ಡ್ರಾಫ್ಟ್ನಲ್ಲಿ ಜೆಮ್ಷೆಡ್ಪುರ ತಂಡ ಅನಾಸ್ ಅವರನ್ನು ಆಯ್ಕೆ ಮಾಡಿತು. 2018-19ರಲ್ಲಿ ಅನಾಸ್ ಕೇರಳ ಬ್ಲಾಸ್ಟರ್ ತಂಡವನ್ನು ಸೇರಿಕೊಂಡಿದ್ದಾರೆ. ಐಎಸ್‌ಎಲ್‌ನಲ್ಲಿ 37 ಪಂದ್ಯಗಳನ್ನಾಡಿರುವ ಅನಾಸ್ ಗಳಿಸಿದ್ದು ಒಂದು ಗೋಲು. ಅಲ್ಪ ಅವಧಿಯಲ್ಲೇ ಭಾರತದ ಪರ 15 ಪಂದ್ಯಗಳನ್ನಾಡಿರುವ ಅನಾಸ್, ಕೋಚ್ ಸ್ಟಿನ್ ಕಾನ್‌ಸ್ಟಾಂಟೈನ್ ಅವರು ಸೆಂಟರ್ ಬ್ಯಾಕ್‌ಗೆ ಆಟಗಾರರನ್ನು ಆಯ್ಕೆ ಮಾಡುವಾಗ ಸಂದೇಶ್ ಜಿಂಗಾನ್ ಅವರ ಜತೆಯಲ್ಲೇ ಅನಾಸ್ ಆಯ್ಕೆಯಾಗುತ್ತಿದ್ದರು. ಯುಎಇನಲ್ಲಿ ನಡೆಯಲಿರುವ ಪಂದ್ಯದಲ್ಲಿ ಅನಾಸ್ ಪ್ರಮುಖ ಪಾತ್ರವಹಿಸುವುದು ಸ್ಪಷ್ಟವಾಗಿದೆ.

ಸಲಾಂ ರಂಜನ್ ಸಿಂಗ್

ಸಲಾಂ ರಂಜನ್ ಸಿಂಗ್

ಕ್ಲಬ್- ವೆಸ್ಟ್ ಬೆಂಗಾಲ್

ಸ್ಥಾನ-ಡಿಫೆಂಡರ್.

ವಯಸ್ಸು-23.

ಪುಣೆ ಎಫ್‌ಸಿ ಅಕಾಡೆಮಿಯಲ್ಲಿ ಪಳಗಿರುವ ಮಣಿಪುರದ ಆಟಗಾರ ರಂಜನ್ ಸಿಂಗ್, 2013-14ರಲ್ಲಿ ಐ ಲೀಗ್ ಸೇರುವ ಮೂಲಕ ವೃತ್ತಿಪರ ಫುಟ್ಬಾಲ್‌ಗೆ ಕಾಲಿಟ್ಟರು. ಮೂರು ವರ್ಷಗಳ ಕಾಲ ಐ ಲೀಗ್‌ನಲ್ಲಿದ್ದ ಅವರನ್ನು ಸಾಲದ ಮೂಲಕ ಬೆಂಗಳೂರು ತಂಡವನ್ನು ಸೇರಿಕೊಂಡರು. ಈಗ ಐ ಲೀಗ್‌ನಲ್ಲಿ ಈಸ್ಟ್ ಬೆಂಗಾಲ್ ಪರ ಆಡುತ್ತಿರುವ ರಂಜನ್ ಸಿಂಗ್ ಐ ಲೀಗ್‌ನಿಂದ ತಂಡವನ್ನು ಸೇರಿಕೊಂಡು ಏಕೈಕ ಆಟಗಾರರೆನಿಸಿದ್ದಾರೆ. ಡಿಫೆನ್ಸ್‌ನಲ್ಲಿ ಉತ್ತಮವಾಗಿ ಆಟ ತೋರಬಲ್ಲ ರಂಜನ್ ಸಿಂಗ್ ಇತ್ತೀಚಿಗೆ ಜೋರ್ಡನ್ ವಿರುದ್ಧ ನಡೆದ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಏನೆಂಬುದನ್ನು ಪ್ರದರ್ಶಿಸಿದ್ದರು.

ಸುಭಾಶಿಶ್ ಬೋಸ್

ಸುಭಾಶಿಶ್ ಬೋಸ್

ಕ್ಲಬ್-ಮುಂಬೈ ಸಿಟಿ ಎಫ್ಸಿ.

ಸ್ಥಾನ-ಡಿಫೆಂಡರ್.

ವಯಸ್ಸು-23.

ಪುಣೆ ಸಿಟಿ ಎಫ್ ಸಿ ಯೂತ್ ಅಕಾಡೆಮಿಯಲ್ಲಿ ಪಳಗಿರುವ ಸುಭಾಶಿಶ್ ಬೋಸ್, ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾ ಪರ 2016ರಲ್ಲಿ ಐ ಲೀಗ್ ಪಂದ್ಯಗಳನ್ನು ಆಡುವ ಮೂಲಕ ವೃತ್ತಿಪರ ಫುಟ್ಪಾಲ್‌ಗೆ ಕಾಲಿಟ್ಟರು. ಪ್ರಮುಖ ತಂಡಗಳಾದ ಮೋಹನ್ ಬಾಗನ್ ಹಾಗೂ ಬೆಂಗಳೂರು ತಂಡದ ಪರ ಆಡುವ ಮೂಲಕ ಗಮನ ಸೆಳೆದರು. ನಂತರ ಮುಂಬೈ ಸಿಟಿ ಎಫ್ ಸಿ ಪರ ಆಡಲಾರಂಭಿಸಿದರು. ಕೋಲ್ಕೊತಾ ಮೂಲದ ಆಟಗಾರ ಅಗತ್ಯಬಿದ್ದರೆ ಸೆಂಟರ್‌ಬ್ಯಾಕ್‌ನಲ್ಲೂ ಆಡಬಲ್ಲರು, ಆದರೆ ಅವರ ಸಹಜವಾದ ಆಟ ನಮಗೆ ಕಾಣಸಿಗುವುದು ಲೆಫ್ಟ್ ಬ್ಯಾಕ್‌ನಲ್ಲಿ.

ನಾರಾಯಣ ದಾಸ್

ನಾರಾಯಣ ದಾಸ್

ಕ್ಲಬ್-ಡೆಲ್ಲಿ ಡೈನಮೋಸ್ ಎಫ್ ಸಿ.

ಸ್ಥಾನ-ಲೆಫ್ಟ್ ಬ್ಯಾಕ್.

ವಯಸ್ಸು-25

ಟಾಟಾ ಫುಟ್ಬಾಲ್ ಅಕಾಡೆಮಿ (ಟಿಎ್‌ಎ)ಯಲ್ಲಿ ಪಳಗಿರುವ ನಾರಾಯಣ್ ದಾಸ್, ಮೂಲತಃ ಪಶ್ಚಿಮ ಬಂಗಾಳದವರು. ಪೈಲಾನ್ ಏರೋಸ್, ಈಸ್ಟ್ ಬೆಂಗಾಲ್, ಡೆಂಪೊ, ಪುಣೆ ಸಿಟಿ ಹಾಗೂ ಗೋವಾ ತಂಡದಲ್ಲಿ ಆಡಿದ ಅನು‘ಭವ ಹೊಂದಿರುವ ನಾರಾಯಣ್ ದಾಸ್, ನಂತರ ಡೆಲ್ಲಿ ಡೈನಾಮೋಸ್ ಪರ ಆಡತೊಡಗಿದರು. ಲೆಫ್ಟ್ ಬ್ಯಾಕ್ ಆಟಗಾರ ನಾರಾಯಣ ದಾಸ್ 2013ರಲ್ಲಿ ಭಾರತ ತಂಡವನ್ನು ಸೇರಿಕೊಂಡರು. ನಂತರ ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡದ ಕೋಚ್ ಅವರ ಆಯ್ಕೆ ಆಟಗಾರರಲ್ಲಿ ಒಬ್ಬರೆನಿಸಿದರು.

ರೌಲಿನ್ ಬೋರ್ಗಸ್

ರೌಲಿನ್ ಬೋರ್ಗಸ್

ಸ್ಥಾನ- ಸೆಂಟ್ರಲ್‌ಮಿಡ್‌ಫೀಲ್ಡರ್, ಡಿಫೆನ್ಸಿವ್ ಮಿಡ್‌ಫೀಲ್ಡರ್.

ವಯಸ್ಸು-26.

ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾದಲ್ಲಿ ಪಳಗಿರುವ ರೌಲಿನ್, ಡಿಫೆನ್ಸಿವ್ ಮಿಡ್‌ಫೀಲ್ಡರ್ ವಿಭಾಗದ ಉತ್ತಮ ಆಟಗಾರರೆನಿಸಿಕೊಂಡರು. ಈ ವಿಭಾಗದಲ್ಲಿ ಉತ್ತಮವಾಗಿ ಆಡಬಲ್ಲ ದೇಶದ ಉತ್ತಮ ಆಟಗಾರ ಕೂಡ ಹೌದು. ಐದು ವರ್ಷಗಳ ಕಾಲ ಸ್ಪೋರ್ಟಿಂಗ್ ತಂಡದಲ್ಲಿ ಆಡಿದ ನಂತರ ರೌಲಿನ್ ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು ಸೇರಿಕೊಂಡರು. 2019ರ ನಂತರ ಗುವಾಹಟಿ ಕ್ಲಬ್‌ನ ಪ್ರಮುಖ ಆಟಗಾರರೆನಿಸಿದರು. ಎಎಫ್ ಸಿ ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬೋರ್ಗಸ್ ಉತ್ತಮ ಆಟ ಪ್ರದರ್ಶಿಸಿದ್ದರು. ಮಕಾವ್ ವಿರುದ್ಧ ನಡೆದ ಪಂದ್ಯದಲ್ಲಿ ರೌಲಿನ್ ಗಳಿಸಿದ ಗೋಲಿನಿಂದ ಭಾರತ ಗೆದ್ದಿತ್ತು. ನಾರ್ತ್ ಈಸ್ಟ್ ಯುನೈಟೆಡ್ ಪರ ಇದುವರೆಗೂ 12 ಪಂದ್ಯಗಳನ್ನಾಡಿರುವ ರೌಲಿನ್, ಎರಡು ಗೋಲುಗಳು ಹಾಗೂ ಎರಡು ಗೋಲು ಗಳಿಸುವಲ್ಲಿ ನೆರವನ್ನು ನೀಡಿರುತ್ತಾರೆ.

ಅನಿರುಧ್ ಥಾಪಾ

ಅನಿರುಧ್ ಥಾಪಾ

ಕ್ಲಬ್-ಚೆನ್ನೈಯಿನ್.

ಸ್ಥಾನ-ಮಿಡ್‌ಫೀಲ್ಡರ್-ಸೆಂಟರ್.

ವಯಸ್ಸು-20.

2016ರಲ್ಲಿ ಚೆನ್ನೆಯಿನ್ ಫುಟ್ಬಾಲ್ ತಂಡವನ್ನು ಸೇರಿಕೊಳ್ಳುವ ಮೂಲಕ ಡೆಹ್ರಾಡೂನ್ ಮೂಲದ ಅನಿರಧ್ ಥಾಪಾ ವೃತ್ತಿಪರ ಫುಟ್ಬಾಲ್‌ಗೆ ಕಾಲಿಟ್ಟರು. ಮಿನರ್ವಾ ಪಂಜಾಬ್ ಪರ ಕೆಲವು ಸಮಯ ಆಡಿದ ಥಾಪಾ ನಂತರ ಚೆನ್ನೆಯಿನ್ ತಂಡದ ನಿತ್ಯದ ಆಟಗಾರರೆನಿಸಿದರು. ಚೆಂಡಿನ ಮೇಲೆ ನಿಯಂತ್ರಣ ಹಾಗೂ ಪಾಸ್ ಮಾಡುವ ತಂತ್ರ ಇದರಿಂದಾಗಿ ಅನಿರುಧ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದರು. ಭಾರತ ತಂಡದ ಪರ ಆಕ್ರಮಣಕಾರಿಮಿಡ್‌ಫೀಲ್ಡರ್ ಕೂಡ ಹೌದು. ಅಗತ್ಯ ಇದ್ದಾಗ ತಂಡಕ್ಕೆ ಈ ವಿಭಾಗದಲ್ಲೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಆಟದ ತೀವೃತೆಯನ್ನು ಗಮನಿಸಿ ಅದಕ್ಕೆ ಸೂಕ್ತವಾದ ಪಾಸ್ ನೀಡುವಲ್ಲಿ ಅನಿರುಧ್ ನಿಸ್ಸೀಮರು. ಐಎಸ್‌ಎಲ್‌ನಲ್ಲಿ ಆಡಿರುವ 26 ಪಂದ್ಯಗಳಲ್ಲಿ ಅನಿರುಧ್ ಎರಡು ಗೋಲು ಹಾಗೂ ಮೂರು ಗೋಲು ಗಳಿಕೆಯಲ್ಲಿ ನೆರವಾಗಿದ್ದಾರೆ. ಅನಿರುಧ್ 13 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುತ್ತಾರೆ.

ವಿನೀತ್ ರಾಯ್

ವಿನೀತ್ ರಾಯ್

ಕ್ಲಬ್-ಡೆಲ್ಲಿ ಡೈನಮೋಸ್.

ಸ್ಥಾನ-ಮಿಡ್‌ಫೀಲ್ಡರ್.

ವಯಸ್ಸು-21

ಅಸ್ಸಾಂ ಮೂಲದ ಈ ಮಿಡ್‌ಫೀಲ್ಡರ್ ‘ಾರತದ ಉದಯೋನ್ಮುಖ ಮಿಡ್‌ಫೀಲ್ಡರ್ ಎನಿಸಿದ್ದಾರೆ. 2016ರಲ್ಲಿ ಕೇರಳ ಬ್ಲಾಸ್ಟರ್ಸ್ ಪರ ಆಡುವ ಮೂಲಕ ಐಎಸ್‌ಎಲ್‌ಗೆ ಕಾಲಿಟ್ಟರು. ನಂತರ ಡೆಲ್ಲಿ ಡೈನಮೋಸ್ ಪರ ಆಡಲು ಆರಂಭಿಸಿ ಅಲ್ಲಿ ಯಶಸ್ಸಿನ ಹೆಜ್ಜೆ ಇಟ್ಟರು. ಈ ಋತುವಿನಲ್ಲಿ ತಮ್ಮ ಕ್ಲಬ್ ಪರ ವಿನೀತ್ ಕೇವಲ ನಾಲ್ಕು ಪಂದ್ಯಗಳನ್ನಾಡಿದ್ದಾರೆ. ಆದರೆ ರಾಷ್ಟ್ರೀಯ ತಂಡದಲ್ಲಿ ಅವರ ಕೊಡುಗೆ ನಿರಂತರವಾಗಿರುತ್ತದೆ. ತನ್ನ ಆಟದ ಮೂಲಕ ಕೋಚ್ ಸ್ಟೀನ್ ಕಾನ್‌ಸ್ಟಾಂಟೈನ್ ಅವರನ್ನು ಆಕರ್ಷಿಸಿರುವ ವಿನೀತ್ ಬಾಂಗ್ಲಾದೇಶದಲ್ಲಿ ನಡೆದ ಸ್ಯಾಫ್ ಗೇಮ್ಸ್‌ನಲ್ಲಿ ಉತ್ತಮ ಆಟ ಪ್ರದರ್ಶಿಸಿರುವುದು ತಂಡದಲ್ಲಿ ಸ್ಥಾನ ಪಡೆಯಲು ಮತ್ತೊಂದು ಕಾರಣವಾಗಿದೆ.

ಹಲಿಚರಣ್ ನಾರ್ಜರಿ

ಹಲಿಚರಣ್ ನಾರ್ಜರಿ

ಕ್ಲಬ್-ಕೇರಳ ಬ್ಲಾಸ್ಟರ್ಸ್.

ಸ್ಥಾನ-ಲೆಫ್ಟ್ /ರೈಟ್ ವಿಂಗರ್.

ವಯಸ್ಸು-24.

ಇಂಡಿಯನ್ ಏರೋಸ್ ಪರ ಆಡಲು ಆರಂಭಿಸಿದ ಹಾಲಿಚರಣ್ ನಾರ್ಜರಿ ನಂತರ 2014ರಲ್ಲಿ ಗೋವಾ ತಂಡದ ಸದಸ್ಯರಾದರು. ಈ ಫಾರ್ವರ್ಡ್ ಆಟಗಾರ ನಂತರ ಗೋವಾ ತಂಡವನ್ನು ತೊರೆದು 2015ರಲ್ಲಿ ನಾರ್ತ್ ಈಸ್ಟ್ ತಂಡವನ್ನು ಸೇರಿಕೊಂಡರು. ಕಳೆದ ಮೂರು ಋತುಗಳಿಂದ ಪರ್ವತಪ್ರದೇಶದ ತಂಡದ ಪರ ಆಡಿ, ಈಗ ಕೇರಳ ಬ್ಲಾಸ್ಟರ್ಸ್‌ನ ಪ್ರಮುಖ ಆಟಗಾರರೆನಿಸಿದ್ದಾರೆ. 43 ಪಂದ್ಯಗಳನ್ನಾಡಿರುವ ನಾರ್ಜರಿ ಇದುವರೆಗೂ ಐದು ಗೋಲುಗಳನ್ನು ಗಳಿಸಿದ್ದು, ಒಂದು ಗೋಲು ಗಳಿಸುವಲ್ಲಿ ನೆರವಾಗಿದ್ದಾರೆ. ಸ್ಟೀನ್ ಕಾನ್‌ಸ್ಟಾಂಟೈನ್ ಅವರ ಪಾಳದಲ್ಲಿ ಗುರುತಿಸಲ್ಪಟ್ಟ ನಾರ್ಜರಿ ‘ಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. 2015ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ನಾರ್ಜರಿ 23 ಪಂದ್ಯಗಳನ್ನಾಡಿದ್ದು, ಒಂದು ಗೋಲು ಗಳಿಸಿದ್ದಾರೆ.

ಆಶಿಕ್ ಕುರುನಿಯಾನ್

ಆಶಿಕ್ ಕುರುನಿಯಾನ್

ಕ್ಲಬ್- ಎಫ್ ಸಿ ಗೋವಾ ಸಿಟಿ.

ಸ್ಥಾನ-ಮಿಡ್‌ಫೀಲ್ಡರ್.

ವಯಸ್ಸು-22.

ಯೂರೋಪ್‌ನಲ್ಲಿ ತರಬೇತಿ ಪಡೆದು ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಕೆಲವು ಆಟಗಾರರಲ್ಲಿ ಕುರುನಿಯಾನ್ ಕೂಡ ಒಬ್ಬರು. ಅವರು ವಿಲ್ಲಾರಿಯಲ್ ಸಿ ತಂಡದಲ್ಲಿ ತರಬೇತಿ ಪಡೆದಿರುತ್ತಾರೆ. ಭಾರತ ತಂಡದಲ್ಲಿ ಅವಕಾಶ ಪಡೆದಾಗಿನಿಂದ ಕುರುನಿಯಾನ್ ತಮ್ಮ ಆಟದಲ್ಲಿ ಸಾಕಷ್ಟು ಉತ್ತಮ ಅಂಶಗಳನ್ನು ಅಳವಡಿಸಿಕೊಂಡರು. ಇದರಿಂದ ಭಾರತ ತಂಡಕ್ಕೆ ಅಘತ್ಯವೆನಿಸಿರುವ ಆಟಗಾರರೆನಿಸಿದರು. 2018ರ ಇಂಟರ್‌ಕಾಂಟಿನೆಂಟಲ್ ಕಪ್‌ನಲ್ಲಿ ಚೀನಾ ವಿರುದ್ಧದ ಪಂದ್ಯದಲ್ಲಿ ಕುರುನಿಯಾನ್ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಪದಾರ್ಪಣೆ ಮಾಡಿದರು. 22 ವರ್ಷದ ಆಟಗಾರನಿಗೆ ಪುಣೆ ತಂಡದ ಮಧ್ಯಂತರ ಕೋಚ್ ಪ್ರದ್ಯುಮ್ ರೆಡ್ಡಿ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದರು.

ಜರ್ಮನ್‌ಪ್ರೀತ್ ಸಿಂಗ್

ಜರ್ಮನ್‌ಪ್ರೀತ್ ಸಿಂಗ್

ಕ್ಲಬ್-ಚೆನ್ನೈಯಿನ್.

ಸ್ಥಾನ-ಮಿಡ್‌ಫೀಲ್ಡರ್.

ವಯಸ್ಸು-22

ಟಾಟಾ ಫುಟ್ಬಾಲ್ ಅಕಾಡೆಮಿಯಲ್ಲಿ ತರಬೇತಿ ಪಡೆದ ನಂತರ ಜರ್ಮನ್‌ಪ್ರೀತ್ ಸಿಂಗ್ ಭಾರತದ ಫುಟ್ಬಾಲ್‌ನಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡರು.2017-18ರ ಐಎಸ್‌ಎಲ್ ಋತುವಿನಲ್ಲಿ ಚೆನ್ನೈಯಿನ್ ತಂಡವನ್ನು ಸೇರಿಕೊಂಡರು. ಜಾನ್ ಗ್ರೆಗೊರಿ ಪಡೆ ಐಎಸ್‌ಎಲ್ ಗೆದ್ದಾಗ ಆ ತಂಡದ ಸದಸ್ಯರಾಗಿದ್ದರು. ಮಿಡ್‌ಫೀಲ್ಡ್ ವಿಭಾಗದಲ್ಲಿ ಮಿಂಚಿನ ಪಾಸ್‌ಗೆ ಖ್ಯಾತಿ ಪಡೆದಿರುವ ಜರ್ಮನ್‌ಪ್ರೀತ್ ಈ ವಿಭಾಗದಲ್ಲಿ ತಂಡಕ್ಕಾಗಿ ಕಠಿಣಶ್ರಮ ವಹಿಸುವ ಆಟಗಾರ. ಎದುರಾಳಿಯ ಡಿೆಫೆನ್ಸ್ ವಿಭಾಗಕ್ಕೆ ಮಾರಕ ಅಸ್ತ್ರವಾಗಿರುವ ಜರ್ಮನ್‌ಪ್ರೀತ್ ಇದುವರೆಗೂ ಭಾರತದ ಪರ ಮೂರು ಪಂದ್ಯಗಳನ್ನು ಆಡಿರುತ್ತಾರೆ.

ಜಾಕಿಚಾಂದ್ ಸಿಂಗ್

ಜಾಕಿಚಾಂದ್ ಸಿಂಗ್

ಕ್ಲಬ್- ಎಫ್‌ಸಿ ಗೋವಾ.

ಸ್ಥಾನ- ಮಿಡ್‌ಪೀಲ್ಡರ್.

ವಯಸ್ಸು-26

ಐ ಲೀಗ್‌ನಲ್ಲಿ ರಾಯರ್ ವಾಹಿಂಗ್ಡೋ ಪಡೆ ಯಶಸ್ಸು ಕಾಣುವಲ್ಲಿ ಜಾಕಿಚಾಂದ್ ಅವರು ಪ್ರಮುಖ ಪಾತ್ರವಹಿಸಿರುತ್ತಾರೆ. ಆ ನಂತರ ತಮ್ಮ ಆತಿಥೇಯ ಕ್ಲಬ್ ಪರ ಆಡುತ್ತಿದ್ದ ಮಣಿಪುರಿ ಆಟಗಾರ ಈಗ ಎಫ್ಸಿ ಗೋವಾ ತಂಡದ ಪ್ರಮುಖ ಆಟಗಾರರೆನಿಸಿದ್ದಾರೆ. ಸರ್ಗಿಯೋ ಲೊಬೆರಾ ಅವರಲ್ಲಿ ಪಳಗಿರುವ ಜಾಕಿಚಾಂದ್, ಎರಡು ಗೋಲುಗಳನ್ನು ಗಳಿಸಿರುವುದಲ್ಲದೆ, ಎರಡು ಗೋಲು ಗಳಿಸಲು ನೆರವಾಗಿದ್ದಾರೆ. ಈ ವಿಂಗರ್ ವಿಭಾಗದ ಆಟಗಾರರ 2015ರಿಂದ ಸ್ಟೀನ್ ಅವರ ಯೋಜನೆಗಳ ಭಾಗವಾಗಿರುತ್ತಾರೆ. ಅದೇ ರೀತಿ ಯುಎಇಯಲ್ಲಿ ನಡೆಯುವ ಪಂದ್ಯಗಳಲ್ಲೂ ಜಾಕಿಚಾಂದ್ ಅವರಿಂದ ಉತ್ತಮ ಆಟದ ನಿರೀಕ್ಷೆಯಲ್ಲಿದ್ದಾರೆ.

ಪ್ರಣೋಯ್ ಹಾಲ್ಡರ್

ಪ್ರಣೋಯ್ ಹಾಲ್ಡರ್

ಕ್ಲಬ್- ಎಟಿಕೆ.

ಸ್ಥಾನ-ಮಿಡ್‌ಫೀಲ್ಡರ್.

ವಯಸ್ಸು-25.

ಭಾರತ ತಂಡದ ಮಿಡ್‌ಫೀಲ್ಡ್ ವಿಭಾಗದಲ್ಲಿ ಯಶಸ್ಸಿನ ಆಟಗಾರರೆಂದರೆ ಅದು ಪ್ರಣೋಯ್ ಹಾಲ್ಡರ್. ಇತ್ತೀಚಿನ ವರ್ಷಗಳಲ್ಲಿ ಅವರ ಆಟ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತರ್ವಹಿಸಿದೆ. ಫುಟ್ಬಾಲ್ ಆಟದ ಬಗ್ಗೆ ಅವರ ಸ್ಪಂದನೆ ತಂಡಕ್ಕೆ ಹಲವು ರೀತಿಯಲ್ಲಿ ನೆರವಾಗಿದೆ. ಗೋವಾ ಹಾಗೂ ಮುಂಬೈ ಸಿಟಿಯಲ್ಲಿ ಆಡಿದ ನಂತರ ಪ್ರಣೋಯ್ ಈಗ ಎಟಿಕೆ ತಂಡದ ಪ್ರಮುಖ ಆಟಗಾರರೆನಿಸಿದ್ದಾರೆ. ಸ್ಟೀವ್ ಕೊಪೆಲ್ ಅವರ ಉತ್ತಮ ಆಯ್ಕೆಯಾಗಿದ್ದಾರೆ. ಅನಿರುಧ್ ಥಾಪಾ ಅವರೊಂದಿಗೆ ಹೊಂದಾಣಿಕೆಯ ಆಟ ಪ್ರದರ್ಶಿಸುವ ಪ್ರಣೋಯ್ ತಂಡದ ಪ್ರಮುಖ ಅಸ್ತ್ರವೆನಿಸಿದ್ದಾರೆ. ಏಷ್ಯನ್ ಕಪ್‌ನಲ್ಲಿ ತಂಡ ಈ ಮಿಡ್‌ಫೀಲ್ಡ್ ಆಟಗಾರನಿಂದ ಸಾಕಷ್ಟು ನಿರೀಕ್ಷೆಯಲ್ಲಿದೆ. ದೇಶಕ್ಕಾಗಿ 11 ಪಂದ್ಯಗಳನ್ನಾಡಿರುವ ಪ್ರಣೋಯ್, ಒಂದು ಗೋಲು ಗಳಿಸಿದ್ದಾರೆ.

ಸುನಿಲ್ ಛೆಟ್ರಿ

ಸುನಿಲ್ ಛೆಟ್ರಿ

ಕ್ಲಬ್- ಬೆಂಗಳೂರು ಎಫ್ಸಿ.

ಸ್ಥಾನ-ಸೆಂಟರ್ ಫಾರ್ವರ್ಡ್, ಲೆಫ್ಟ್‌ ವಿಂಗ್.

ವಯಸ್ಸು-34.

ಭಾರತ ಫುಟ್ಬಾಲ್ ತಂಡದ ನಿರ್ವಿವಾದದ ಆಟಗಾರರೆಂದರೆ ಅದು ಸುನಿಲ್ ಛೆಟ್ರಿ. ಭಾರತದ ಫುಟ್ಬಾನಲ್ಲಿ ಪೀಠಿಕೆಯ ಅಗತ್ಯವಿಲ್ಲದ ಆಟಗಾರರೆಂದರೆ ಅದು ಸುನಿಲ್ ಛೆಟ್ರಿ. ಬ್ಲೂ ಟೈಗರ್ಸ್ ಪಡೆಯ ದೀರ್ಘ ಅವಧಿಯ ಆಟಗಾರ ಛೆಟ್ರಿ ‘ಭಾರತದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ. ಯಾವುದೇ ಸಂದರ್ಭದಲ್ಲೂ ತಂಡದ ಪರ ಮಿಂಚಿ ಪಂದ್ಯದ ಲಿತಾಂಶವನ್ನೇ ಬದಲಾಯಿಸಬಲ್ಲ ಆಟಗಾರ. ಅಂಗಣಕ್ಕಿಳಿದರೆ ಛೆಟ್ರಿ ಅವರದ್ದು ವಯಸ್ಸಿಗೂ ಮೀರಿದ ಆಟ. ಸೆಂಟರ್ ಫಾರ್ವರ್ಡ್‌ನಲ್ಲಿ ಯುವಕರನ್ನು ನಾಚಿಸುವ ಮಿಂಚಿನ ಓಟ. ಸ್ಪೋರ್ಟಿಂಗ್ ಲಿಸ್ಬನ್ ಬಿ ಹಾಗೂ ಮೋಜರ್ ಲೀಗ್ ಸೂಪರ್ (ಎಂಎಲ್‌ಎಸ್)ನಲ್ಲಿ ಆಡಿದ ಛೆತ್ರಿ ನಂತರ ಬೆಂಗಳೂರು ಕ್ಲಬ್‌ನ ನಾಯಕರೆನಿಸಿದರು.

ಜೆಜೆ ಲಾಲ್‌ಪೆಖ್ಲುವಾ

ಜೆಜೆ ಲಾಲ್‌ಪೆಖ್ಲುವಾ

ಕ್ಲಬ್- ಚೆನ್ನೈಯಿನ್

ಸ್ಥಾನ- ಫಾರ್ವರ್ಡ್, ಸೆಂಟರ್.

ವಯಸ್ಸು-27.

ಗೋಲು ಗಳಿಕೆಯಲ್ಲಿ ಮಿಂಚಿನ ವೇಗ ಕಾಣಬೇಗಿದ್ದರೆ ಜೆಜೆ ಲಾಲ್‌ಪೆಖ್ಲುವಾ ಅವರ ಆಟವನ್ನು ಗಮನಿಸಬೇಕು. ಗೋಲ್ ಬಾಕ್ಸ್ ಮುಂಭಾಗದಲ್ಲಿ ಮಿಂಚಿನ ಶಕ್ತಿ ಎಂದರೆ ಅದು ಜೆಜೆ. ನಿಯಂತ್ರಣಕ್ಕೆ ಚೆಂಡು ಸಿಕ್ಕರೆ ಅಲ್ಲಿ ಗೋಲು ಖಚಿತ. ಮಿಜೋರಾಂ ಮೂಲದ ಆಟಗಾರ ಜೆಜೆ ಆರಂಭದಲ್ಲಿ ಪುಣೆ ಸಿಟಿ ತಂಡದಲ್ಲಿದ್ದರು. 2014ರಲ್ಲಿ ಚೆನ್ನೈಯಿನ್ ತಂಡವನ್ನು ಸೇರಿಕೊಂಡ ಜೆಜೆ ಇಲ್ಲಿಯವರೆಗೂ ತಂಡದ ಪರ ಎಲ್ಲ ಐಎಸ್‌ಎಲ್ ಆಡಿದ್ದಾರೆ. 64 ಪಂದ್ಯಗಳನ್ನಾಡಿರುವ ಜೆಜೆ 22 ಗೋಲು ಹಾಗೂ ಏಳು ಬಾರಿ ಗೋಲು ಗಳಿಸಲು ನೆರವಾಗಿದ್ದಾರೆ. ಮೋಹನ್ ಬಾಗನ್ ತಂಡ ಐ ಲೀಗ್ ಚಾಂಪಿಯನ್ ಪಟ್ಟ ಗೆದ್ದಾಗ ಆ ತಂಡದ ಸದಸ್ಯರಾಗಿದ್ದರು. ಚೆನ್ನೈ‘ಯಿನ್ ತಂಡ ಎರಡು ಬಾರಿ ಐ ಲೀಗ್ ಗೆದ್ದಾಗಲೂ ಆ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಭಾರತದ ಪರ 52 ಪಂದ್ಯಗಳನ್ನಾಡಿರುವ ಜೆಜೆ ಇದುವರೆಗೂ 20 ಗೋಲುಗಳನ್ನು ಗಳಿಸಿದ್ದಾರೆ. ಎಎಫ್ ಸಿ ಏಷ್ಯನ್‌ಕಪ್‌ನಲ್ಲಿ ಜೆಜೆ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆ ಇದೆ.

ಸುಮೀತ್ ಪಸ್ಸಿ

ಸುಮೀತ್ ಪಸ್ಸಿ

ಕ್ಲಬ್- ಜೆಮ್ಷೆಡ್ಪುರ.

ಸ್ಥಾನ- ಸ್ಟ್ರೈಕರ್,

ವಯಸ್ಸು- 24.

ಚಂಡೀಗಢ ಫುಟ್ಬಾಲ್ ಅಕಾಡೆಮಿಯಲ್ಲಿ ಪಳಗಿದ ಸುಮೀತ್ ಪಸ್ಸಿ, 2016ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಏಷ್ಯಾ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಲಾವೋಸ್ ವಿರುದ್ಧ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದರು. ಆ ನಂತರ ಟಾಟಾ ಪಡೆಯನ್ನು ಸೇರಿದ ಅವರು ಈ ಋತುವಿನಲ್ಲಿ ಎರಡು ಗೋಲುಗಳನ್ನು ಗಳಿಸಿದ್ದಾರೆ. ಸೆಂಟರ್ ಫಾರ್ವರ್ಡ್‌ನಲ್ಲಿ ಉತ್ತಮ ರೀತಿಯಲ್ಲಿ ಆಟವಾಡಬಲ್ಲ ಪಸ್ಸಿ, ಮಿಂಚಿನ ವೇಗದಲ್ಲಿ ಚೆಂಡನ್ನು ಪಾಸ್ ಮಾಡಬಲ್ಲರು. ಈ ಎಲ್ಲ ಕಾರಣಗಳಿಂದಾಗಿ ಅವರು ‘ಭಾರತದ ಭರವಸೆಯ ಆಟಗಾರರೆನಿಸಿದ್ದಾರೆ.

ಬಲ್ವಂತ್ ಸಿಂಗ್

ಬಲ್ವಂತ್ ಸಿಂಗ್

ಕ್ಲಬ್- ಎಟಿಕೆ.

ಸ್ಥಾನ-ಸೆಂಟರ್ ಫಾರ್ವರ್ಡ್, ಲೆಫ್ಟ್ ವಿಂಗ್.

ವಯಸ್ಸು-32.

ಹೊಶಿಯಾರ್‌ಪುರ ಮೂಲದ ಆಟಗಾರ ಬಲ್ವಂತ್ ಸಿಂಗ್, ಎದುರಾಳಿ ತಂಡದ ಡಿಫೆನ್ಸ್ ವಿಭಾಗದ ಶಕ್ತಿಯನ್ನು ಛಿದ್ರಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ಆಟಗಾರ .ಜೆಸಿಟಿ ತಂಡದಲ್ಲಿ ಮಿಂಚಿದ ಬಲ್ವಂತ್ ಸಿಂಗ್ ನಂತರ ಸಲ್ಗಾಂವ್ಕರ್, ಚರ್ಚಿಲ್ ಬ್ರದರ್ಸ್ ಮತ್ತು ಮೋಹನ್ ಬಾಗನ್ ತಂಡಗಳಲ್ಲಿ ಆಡಿದ್ದಾರೆ. ಭಾರತ ತಂಡದಲ್ಲಿ ಸ್ಥಾನ ಪಡೆಯಲು ಬಹಳ ವರ್ಷಗಳ ವರೆಗೆ ಕಾದಿದ್ದ ಬಲ್ವಂತ್ ಸಿಂಗ್, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮಾರಿಷಸ್ ವಿರುದ್ಧದ ಮೊದಲ ಪಂದ್ಯದಲ್ಲೇ ಗೋಲು ಗಳಿಸಿ ಮಿಂಚಿದರು. ಬಲ್ವಂತ್ ಸಿಂಗ್ ಅವರ ಅನುಭವ ತಂಡಕ್ಕೆ ಅಗತ್ಯವಿದೆ ಎಂದು ಅರಿತು ಭಾರತ ತಂಡದ ಕೋಚ್ ಅನುಭವಿ ಆಟಗಾರನಿಗೆ ತಂಡದಲ್ಲಿ ಅವಕಾಶ ಕಲ್ಪಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts

Story first published: Thursday, January 3, 2019, 20:11 [IST]
Other articles published on Jan 3, 2019
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more