Euro 2020: ಬೆಲ್ಜಿಯಂ ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ ಇಟಲಿ

ಮ್ಯೂನಿಚ್: ಜರ್ಮನಿಯ ಮ್ಯೂನಿಚ್‌ನಲ್ಲಿರುವ ಅಲಿಯಾನ್ಸ್ ಅರೆನಾದಲ್ಲಿ ಶನಿವಾರ (ಜುಲೈ 3) ನಡೆದ ಯೂನಿಯನ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯೂರೋ 2020 ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಜಿಯಂ ಮತ್ತು ಇಟಲಿ ನಡುವಿನ ಮುಖಾಮುಖಿಯಲ್ಲಿ ಬೆಲ್ಜಿಯಂ ಸೋಲಿಸಿರುವ ಇಟಲಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಪಂದ್ಯದ ಮೊದಲಾರ್ಧದಲ್ಲಿ ಅಂದರೆ 31ನೇ ನಿಮಿಷದಲ್ಲಿ ಇಟಲಿಯ ನಿಕೊಲೊ ಬರೆಲ್ಲಾ ಮೊದಲ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಅದಾಗಿ 44ನೇ ನಿಮಿಷದಲ್ಲಿ ಇಟಲಿಯಿಂದ ಎರಡನೇ ಗೋಲ್ ಸಿಡಿಯಿತು. ಲೊರೆಂಜೊ ಪೆಲ್ಲೆಗ್ರಿನಿ ಗೋಲ್ ಬಾರಿಸಿ ತಂಡದ ಮುನ್ನಡೆ ಹೆಚ್ಚಿಸಿದರು.
ಅದಾಗಿ ಪ್ರಥಮಾರ್ಧದ ಕೊನೇ ಕ್ಷಣದಲ್ಲಿ ಅಂದರೆ 45+2ನೇ ಬೆಲ್ಜಿಯಂನ ಅನುಭವಿ ಆಟಗಾರ ರೊಮೇಲು ಲುಕಾಕು ಗೋಲ್ ಬಾರಿಸಿ ಸೋಲಿನ ಅಂತರ ಕಡಿಮೆ ಮಾಡಿಕೊಂಡರು. ಪಂದ್ಯದ ದ್ವಿತೀಯಾರ್ಧದಲ್ಲಿ ಗೋಲ್‌ಗಾಗಿ ಇತ್ತಂಡಗಳ ಮಧ್ಯೆ ಜಿದ್ದಾಜಿದ್ದಿಯ ಹೋರಾಟ ನಡೆಯಿತಾದರೂ ಆ ಬಳಿಕ ಗೋಲ್ ದಾಖಲಾಗಲಿಲ್ಲ.
ಜುಲೈ 6ರ ಮಂಗಳವಾರ ವೆಂಬ್ಲಿಯಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ಇಟಲಿ ತಂಡ ಸ್ಪೇನ್ ಸವಾಲು ಸ್ವೀಕರಿಸಲಿದೆ. ಸ್ಪೇನ್-ಸ್ವಿಟ್ಜರ್‌ಲ್ಯಾಂಡ್ ಶುಕ್ರವಾರದ ಪಂದ್ಯ 1-1ರಿಂದ ಸಮಬಲಗೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications