ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಸ್ಪೇನಿನ ವಿಶ್ವಕಪ್ ಹೀರೋ ಆಂಡ್ರೆಸ್ ಇನಿಯಸ್ಟಾ ನಿವೃತ್ತಿ

By Mahesh
ಸ್ಪೇನಿನ ವಿಶ್ವಕಪ್ ಹೀರೋ ಆಂಡ್ರೆಸ್ ಇನಿಯಸ್ಟಾ ನಿವೃತ್ತಿ | Oneindia Kannada
Iniesta confirms international retirement following Spains World Cup exit

ಮಾಸ್ಕೋ, ಜುಲೈ 02: ವಿಶ್ವಕಪ್ ನ ಮಾಜಿ ಚಾಂಪಿಯನ್ ಸ್ಪೇನ್ ಈ ಬಾರಿ ವಿಶ್ವಕಪ್ ನಲ್ಲಿ 16ನೇ ಸುತ್ತಿನಿಂದಲೇ ಹೊರಬಿದ್ದಿದೆ. ಅತಿಥೇಯ ರಾಷ್ಟ್ರ ರಷ್ಯಾದ ಎದುರು ಪೆನಾಲ್ಟಿ ಶೂಟೌಟ್ ನಲ್ಲಿ ಅನುಭವಿ ಸ್ಪೇನ್ ಮುಗ್ಗರಿಸಿತು. ಇದರ ಜತೆಗೆ ಸ್ಪೇನ್ ತಂಡದ ಫುಟ್ಬಾಲ್ ದಿಗ್ಗಜ ಆಂಡ್ರೆಸ್ ಇನಿಯಸ್ಟಾ ಅವರು ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.

16ನೇ ಸುತ್ತಿನ ಸ್ಪೇನ್-ರಷ್ಯಾ ತಂಡಗಳ ಸೆಣಸಾಟದಲ್ಲಿ ಪಂದ್ಯದ ಅವಧಿ ಮುಗಿದಾಗ, ಉಭಯ ತಂಡಗಳು 1-1ರ ಡ್ರಾ ಸಾಧಿಸಿತ್ತು. ಆದರೆ, ಹೆಚ್ಚುವರಿ ಕಾಲಾವಧಿಯಲ್ಲೂ ಗೋಲ್ ದಾಖಲಾಗಲಿಲ್ಲ. ಹೀಗಾಗಿ, ಪೆನಾಲ್ಟಿ ಶೂಟೌಟ್ ನಲ್ಲಿ ರಷ್ಯಾ, ಸ್ಪೇನನ್ನು 4-3ರಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟು ಇತಿಹಾಸ ನಿರ್ಮಿಸಿತು.

ಪೆನಾಲ್ಟಿ ಶೂಟೌಟ್ ನಲ್ಲಿ ಸ್ಪೇನ್ ವಿರುದ್ಧ 4-3ರಿಂದ ಗೆದ್ದು ಬೀಗಿದ ರಷ್ಯಾ!ಪೆನಾಲ್ಟಿ ಶೂಟೌಟ್ ನಲ್ಲಿ ಸ್ಪೇನ್ ವಿರುದ್ಧ 4-3ರಿಂದ ಗೆದ್ದು ಬೀಗಿದ ರಷ್ಯಾ!

ಜರ್ಮನಿ, ಪೋರ್ಚುಗಲ್ ಹಾಗೂ ಅರ್ಜೆಂಟೀನಾ ನಂತರ ಸ್ಪೇನ್ ವಿಶ್ವಕಪ್ ನಿಂದ ನಿರ್ಗಮಿಸಿದ ನೆಚ್ಚಿನ ತಂಡ ಎನಿಸಿಕೊಂಡಿದೆ. 34 ವರ್ಷ ವಯಸ್ಸಿನ ಇನಿಯಸ್ಟಾ ಅವರು ಪಂದ್ಯದ ನಂತರ ಮಾತನಾಡಿ, ಇದು ನನ್ನ ಕೊನೆ ಪಂದ್ಯವಾಗಿದ್ದು, ರಾಷ್ಟ್ರೀಯ ತಂಡದ ಪರ ಆಡಿದ್ದು ನನ್ನ ಹೆಮ್ಮೆಯ ವಿಷಯ ಎಂದಿದ್ದಾರೆ.

ನೆದರ್ಲೆಂಡ್ ವಿರುದ್ಧ 2010ರಲ್ಲಿ ಸ್ಪೇನ್ ಗೆಲ್ಲಲು ಕಾರಣರಾಗಿ ವಿಶ್ವಕಪ್ ಎತ್ತಲು ನೆರವಾಗಿದ್ದ ಇನಿಯಸ್ಟಾ ಅವರು 2006ರಲ್ಲಿ ಕಣಕ್ಕಿಳಿದು, 2008 ಹಾಗೂ 2012ರಲ್ಲಿ ಯುರೋಪಿಯನ್ ಚಾಂಪಿಯನ್ ಶಿಪ್ ಗೆಲ್ಲಲು ನೆರವಾದರು. 12 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿ ಬದುಕು ಕಂಡಿದ್ದಾರೆ.

ಜನಪ್ರಿಯ ಫುಟ್ಬಾಲ್ ಕ್ಲಬ್ ಬಾರ್ಸಿಲೋನಾ ಪರ 22 ವರ್ಷಗಳ ಕಾಲ ಆಡಿದ ನಂತರ ಕಳೆದ ಮೇ ತಿಂಗಳಿನಲ್ಲಿ ಜಪಾನ್ ನ ವಿಸ್ಸೆಲ್ ಕೊಬೆ ತಂಡ ಸೇರಿದರು.

ಬಾರ್ಸಿಲೋನಾ ಪರ 674 ಬಾರಿ ಆಡಿ 32 ಟ್ರೋಫಿಗಳನ್ನು ಗೆದ್ದಿರುವ ಇನಿಯಸ್ಟಾ ಅವರನ್ನು ಸ್ಪೇನಿನ ದಿಗ್ಗಜರ ಸಾಲಿನಲ್ಲಿ ನೋಡಲಾಗುತ್ತದೆ.

Story first published: Monday, July 2, 2018, 20:37 [IST]
Other articles published on Jul 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X