ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

2018ರ ಐಎಸ್‌ಎಲ್‌ನಿಂದ ನಿರ್ಗಮಿಸಿದ ಚೆನ್ನೈಗೆ ಈಗ ಎಎಫ್‌ಸಿ ಕಪ್ ಗುರಿ

By Isl Media
ISL 2018: Mumbai end Chennai’s hopes of title defence with 2-0 win

ಚೆನ್ನೈ ಡಿಸೆಂಬರ್ 8: ಈ ಬಾರಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್ಸಿ ಅಚ್ಚರಿಯ ಆಘಾತ ಕಂಡು ನಿಗರ್ಮಿಸಿದೆ. ಬಲಿಷ್ಠವಾದ ಬೆಂಗಳೂರು ಎಫ್ಸಿ ತಂಡವನ್ನು ಸೋಲಿಸಿ ಪ್ರಶಸ್ತಿ ಗೆಲ್ಲುವುದು ಎಷ್ಟು ಕಠಿಣ ಎಂಬುದನ್ನು ಕಳೆದ ಋತುವಿನಲ್ಲಿ ತೋರಿಸಿದ್ದ ಕ್ಲಬ್ ಈ ಬಾರಿ ಅದೆಲ್ಲವನ್ನೂ ಮರೆತ ತಂಡವಾಗಿ ಕಂಡು ಬಂತು.

ಬ್ಯಾಟ್‌ ಕೆಳಗಿಡುವ ಮುನ್ನ ಆಕರ್ಷಕ ಶತಕ ಬಾರಿಸಿದ ಗೌತಮ್ ಗಂಭೀರ್!ಬ್ಯಾಟ್‌ ಕೆಳಗಿಡುವ ಮುನ್ನ ಆಕರ್ಷಕ ಶತಕ ಬಾರಿಸಿದ ಗೌತಮ್ ಗಂಭೀರ್!

ಗುರುವಾರ ನಡೆದ ಪಂದ್ಯದಲ್ಲಿ ಮುಂಬೈ ಸಿಟಿ ತಂಡದ ವಿರುದ್ಧ 0-2 ಗೋಲುಗಳ ಅಂತರದಲ್ಲಿ ಸೋಲು ಮೂಲಕ ಹನ್ನೊಂದು ಪಂದ್ಯಗಳಲ್ಲಿ ಎಂಟನೇ ಆಘಾತ ಕಂಡಿತು. ಇದೊಂದು ಅಚ್ಚರಿಯ ಆಘಾತ. ಪ್ರಶಸ್ತಿ ಕಾಯ್ದುಕೊಳ್ಳುವುದು ಒತ್ತಟ್ಟಿಗಿರಲಿ, ಅಂತಿಮ ನಾಲ್ಕರ ಹಂತ ತಲುಪುವಲ್ಲಿಯೂ ಚೆನ್ನೈ ವಿಫಲವಾಯಿತು.

ಚೆನ್ನೈ ತಂಡ ಈಗ ಐದು ಅಂಕಗಳನ್ನು ಹೊಂದಿದೆ. ಉಳಿದಿರುವ ಏಳು ಪಂದ್ಯಗಳಲ್ಲಿ ಎಲ್ಲ ಪಂದ್ಯಗಳನ್ನೂ ಗೆದ್ದರೂ 26 ಅಂಕವಾಗುತ್ತದೆ. ಕಳೆದ ವರ್ಷ ಪ್ಲೇ ಆಫ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ತಂಡವೇ 30 ಅಂಕಗಳನ್ನು ಗಳಿಸಿತ್ತು. ಚೆನ್ನೆ' ಇನ್ನು ಪ್ಲೇಆಫ್ ತಲುಪತ್ತದೆ ಎಂದರೆ ಅದು ವಾಸ್ತವಕ್ಕೆ ದೂರವಾದುದು.

ದಾಖಲೆಯಲ್ಲಿ ತೆಂಡೂಲ್ಕರ್, ದ್ರಾವಿಡ್ ಸಾಲಿಗೆ ಸೇರಿಕೊಂಡ ವಿರಾಟ್ ಕೊಹ್ಲಿ!ದಾಖಲೆಯಲ್ಲಿ ತೆಂಡೂಲ್ಕರ್, ದ್ರಾವಿಡ್ ಸಾಲಿಗೆ ಸೇರಿಕೊಂಡ ವಿರಾಟ್ ಕೊಹ್ಲಿ!

'ಕ್ಲಬ್ ಜತೆ ಸಂಬಂ' ಹೊಂದಿರುವ ಪ್ರತಿಯೊಬ್ಬರಿಗೂ ನಿರಾಸೆಯಾಗಿರುವುದು ಸಹಜ ಎಂದು ನನ್ನ ಅನಿಸಿಕೆ. ಈ ನಿರಾಸೆ ಹಾಗೂ ನೋವಿನ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ. ಇದು ನನ್ನಲ್ಲಿ ಅತೀವ ನೋವನ್ನುಂಟು ಮಾಡಿದೆ. ಸೆಪ್ಟಂಬರ್ ತಿಂಗಳಿಗಿಂತ ಮುಂಚಿತವಾಗಿಯೇ ಹನ್ನೆರಡು ತಿಂಗಳಿಂದ ತಂಡದ ಜತೆಯಲ್ಲಿದ್ದ ನನಗೆ ಸಾಕಷ್ಟು ನೋವಾಗಿದೆ. ಆದರೆ ವೃತ್ತಿಯಲ್ಲಿ ಇದು ಸಾಮಾನ್ಯವಾಗಿರುತ್ತದೆ, 'ಎಂದು ಕೋಚ್ ಜಾನ್ ಗ್ರೆಗೋರಿ ಹೇಳಿದ್ದಾರೆ.

ಫುಟ್ಬಾಲ್ ಅಭಿಮಾನಿಗಳಿಗಿಂತ ಗ್ರೆಗೋರಿ ಅವರಿಗೆ ತಮ್ಮ ತಂಡ ಈ ರೀತಿ ಕಳಪೆ ಪ್ರದರ್ಶನ ತೋರಲು ಕಾರಣ ಏನೆಂಬುದನ್ನು ಯೋಚಿಸುವಂತಾಗಿದೆ. ಕಳದೆ ವರ್ಷ ಪ್ರತಿಯೊಂದು ತಂಡವೂ ಈ ತಂಡವನ್ನು ಎದುರಿಸಲು ಹೆದರುತ್ತಿತ್ತು. ಆದರೆ ಈ ಬಾರಿ ಅದೇ ತಂಡ ಸಂಘಟಿತವಾಗಿ ಪ್ರತಿಯೊಂದು ವಿಭಾಗದಲ್ಲೂ ವೈಫಲ್ಯ ಕಂಡಿರುವುದು ಅಚ್ಚರಿಯನ್ನುಂಟು ಮಾಡಿದೆ. ಎದುರಾಳಿ ತಂಡಕ್ಕೆ 21 ಗೋಲುಗಳನ್ನು ನೀಡಿರುವ ತಂಡದ ಸ್ಟಾರ್ ಆಟಗಾರರು ಸಂಪೂರ್ಣ ವಿರಾದರು. ಅದರಲ್ಲೂ ಕಳೆದ ಬಾರಿಯ ಹೀರೋ ಜೆಜೆ ಲಾಲ್‌ಪೆಖ್ಲುವಾಗ ಕೂಡ ಒಂದು ಗೋಲನ್ನೂ ಗಳಿಸದಿರುವುದ ನಿರಾಸೆಯ ವಿಚಾರ.

Story first published: Saturday, December 8, 2018, 22:55 [IST]
Other articles published on Dec 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X