ರಷ್ಯಾ ಟೂರ್ ಡೈರಿ: ಇಲ್ಲೊಬ್ಬ ಯುವಕನಿಗೆ ಫೆಲ್ಪ್ಸ್ ಮೀರಿಸುವ ತವಕ!

By ಅರವಿಂದ್ ಎಸ್
Russia Tour Diary: Young swim champs hope to be better than Phelps

ವೋಲ್ಗೊಗ್ರಾಡ್, ಜೂ. 28: ಸರನ್ಸ್ಕ್ ನಿಂದ ವೋಲ್ಗೊಗ್ರಾಡ್ ಗೆ ಹೊರಟಿದ್ದ ಆ ಟ್ರೇನಿನಲ್ಲಿ ಎಲ್ಲಾ ಪ್ರಯಾಣಿಕರೂ ಓಪನ್ ಸ್ಲೀಪರ್ ವಿಭಾಗದಲ್ಲಿದ್ದರು. ಅಲ್ಲದು ಬಿರು ಬೇಸಿಗೆಯ ಕಾಲ. ತಾಪಮಾನ 38 ಡಿಗ್ರಿ ಸೆಲ್ಶಿಯಸ್ ತಲುಪಿತ್ತು. ಸರನ್ಸ್ಕ್ ನಿಂದ ಟ್ರೇನ್ ಹತ್ತಿದ್ದ ಪ್ರಯಾಣಿಕರು ಅದಾಗಲೇ 18 ಗಂಟೆಗಳಕಾಲ ರೈಲಿನೊಳಗೆ ಶೆಖೆ ಸಹಿಸಿಕೊಂಡು ಹೈರಾಣಾಗಿದ್ದಂತೆ ಕಂಡಿತು. ಈಗಲೂ ಬಹಳ ಶೆಖೆ ಇದ್ದಿದ್ದರಿಂದ ಟ್ರೇನ್ ಪ್ರಯಾಣಿಕರು ಸಹಜವಾಗೇ ರಕ್ಷಣೆಗೆ ಕರ ವಸ್ತ್ರವನ್ನು ಹೊರ ತೆಗೆಯಬೇಕಾಯ್ತು.

ಅಲ್ಲಿದ್ದ ಒಟ್ಟು 38 ಮಂದಿ ಪ್ರಯಾಣಿಕರಲ್ಲಿ 12 ಮಂದಿ ಸ್ವಿಮ್ಮರ್ ಗಳು ರಾಷ್ಟ್ರೀಯ ಮಟ್ಟದ ಸ್ಪರ್ಧೆ ಮುಗಿಸಿ ಮರಳುತ್ತಿದ್ದರು. ಸರನ್ಸ್ಕ್ ಅಲ್ಲಿಲ್ಲಿ ತಿರುಗಿ ಸಮಯ ಕಳೆಯುವ ಬದಲು ಅವರಲ್ಲರೂ ಪೆಂಝದಲ್ಲಿ ರೈಲು ಹತ್ತಿದ್ದರು. ಶೆಖೆ ಬೆವರಿನ ಕಾರಣ ಟ್ರೇನಿನಲ್ಲಿ ಮಲಗಬೇಕು ಅಂದರೂ ನಿದ್ದೆ ಬರಬೇಕಲ್ಲ? ಹಾಗಾಗಿ ಅವರಿಗಿದ್ದ ಆಯ್ಕೆಯೊಂದೆ; ಟ್ರೇನ್ ನಲ್ಲಿ ಕಾರ್ಡ್ಸ್ ಆಡ್ತಾ ಸಮಯ ದೂಡೋದು.

ಫೀಫಾ ಸೆಮಿಫೈನಲ್‌ಗೆ ಬರುವ ತಂಡಗಳು ಯಾವುವು? ವರಾಹ ಭವಿಷ್ಯ

ರಷ್ಯಾದ ಟ್ರೇನ್ ಗಳಲ್ಲಿ ಮದ್ಯಪಾನಕ್ಕೆ ಅನುಮತಿಯಿಲ್ಲ. ಆದರೂ ಬೆಲಾರಷ್ಯನ್ ಜೋಡಿಯೊಂದು ಅರೆಬೆತ್ತಲೆ ರೀತಿಯಲ್ಲಿ ಅಂಗಿ ಕಳಚಿ ಬಿಯರ್ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡಿತ್ತು. ವಸೇಲಿ ಮತ್ತು ಅಲೆಕ್ಸ್ ಎನ್ನುವ ಆ ಜೋಡಿಗೆ ಟ್ರೇನಿನಲ್ಲಿ ಇತರ ರಷ್ಯನ್ ಪ್ರಯಾಣಿಕರಿದ್ದಾರೆ, ಮಕ್ಕಳಿದ್ದಾರೆ ಎನ್ನುವ ಪರಿವೆಯಿದ್ದಂತಿರಲಿಲ್ಲ. ಎಲ್ಲರೂ ಇವರತ್ತಲೇ ನೋಡುವಂತೆ ತಮಾಷೆಯಾಗಿ ವರ್ತಿಸುತ್ತಿದ್ದರು. ಇತ್ತ ಕಾರ್ಡ್ಸ್ ಆಡುತ್ತಿದ್ದವರಲ್ಲಿ ಬ್ರೆಸ್ಟ್ ಸ್ಟ್ರೋಕ್ ಈಜು ಪ್ರವೀಣ ವ್ಲಾಡಿಮಿರ್ ಸುಖರೆಂಕೊ ಪಂದ್ಯ ಸೋತಿದ್ದಕ್ಕಾಗಿ 'ವಾಟ್ ದ ಫ...' ಅಂತ ಕಿರುಚುವವರೆಗೂ ಮೋಜಿನ ವಾತಾವರಣ ಅಲ್ಲಿತ್ತು.

ಬಿಯರ್ ಹಿಡಿದಿದ್ದ ಜೋಡಿಯಲ್ಲಿ ಮಾತನಾಡಿಸಲು ಯತ್ನಿಸಿದೆ. 'ಹೌದು, ನಾನು ಇಂಗ್ಲೀಷ್ ಮಾತನಾಡಬಲ್ಲೆ' ಎಂದ ಅಲೆಕ್ಸಾಂಡರ್ ವೆರೆಚಾಗೈನ್. ಆದರೆ ಬಿಯರ್ ನ ಕಿಕ್ಕಿನಲ್ಲಿದ್ದ ಅವನು ಸ್ವಲ್ಪವಾದ್ರೂ ಸರಿಯಾದ ವಾಕ್ಯ ಬಳಸಿದ್ದು ಅದೊಂದು ಮಾತಿನಲ್ಲಿ ಮಾತ್ರ!.

ಅದೇ ಸ್ವಿಮ್ಮಿಂಗ್ ವಿಚಾರಕ್ಕೆ ಬಂದರೆ ವೋಲ್ಗೊಗ್ರಾಡ್ ನ ಈಜುಕೇಂದ್ರದಿಂದ ಬಂದಿದ್ದ ಅಲೆಕ್ಸಾಂಡರ್ ಸೇರಿಸಿ ಅಲ್ಲಿದ್ದ ಹುಡುಗರೆಲ್ಲ ಪ್ರವೀಣರು ಎನಿಸಿತು. ಯಾಕೆಂದರೆ ಅವರ ವಯೋಮಾನದ ಸ್ಪರ್ಧೆಯಲ್ಲಿ ಇಡೀ ತಂಡ ಉತ್ತಮ ಪ್ರದರ್ಶನವನ್ನು ನೀಡಿ ರಾಷ್ಟ್ರೀಯ ಕ್ರೀಡಾಕೂಟದಿಂದ ಮರಳುತ್ತಿದ್ದರು.

ಜರ್ಮನ್ ನಂತೆ ಮುಖಭಂಗ ಅನುಭವಿಸಿದ ಪ್ರಮುಖ ತಂಡಗಳಿವು!

ಅಲೆಕ್ಸಾಂಡರ್ ಮಾತನಾಡಿಸಿದೆ. 'ನನ್ನ ಹೆತ್ತವರಿಂದ ನಾನು ಈಜುವುದನ್ನು ಕಲಿತೆ' ಎಂದನಾತ. ಮಾತು ಮುಂದುವರೆಸಿ, 'ಪೆಂಝದಲ್ಲಿ ನಾನು ಇತ್ತೀಚೆಗಷ್ಟೇ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೆ. ಹುಡುಗರ ವಿಭಾಗದ ಸ್ಪರ್ಧೆಯಲ್ಲಿ ನಾನೇ ಮೊದಲ ಬಹುಮಾನ ಗಳಿಸಿದೆ. ಅಷ್ಟೇ ಅಲ್ಲ ನನಗೆ ಇನ್ನೊಂದೆರಡು ಕಂಚಿನ ಪದಕಗಳೂ ಲಭಿಸಿದ್ದಾವೆ. ಭವಿಷ್ಯದಲ್ಲಿ ನಾನು ದೊಡ್ಡವರ ಸ್ಪರ್ಧೆಯಲ್ಲಿ ರಷ್ಯಕ್ಕೇ ಮೊದಲಿಗನಾಗಿ ಬರಬಲ್ಲೆ. ಅಷ್ಟೇ ಅಲ್ಲ, ಮುಂದೊಂದು ದಿನ ಒಲಿಂಪಿಕ್ಸ್ ನಲ್ಲೂ ಪದಕ ಗೆಲ್ಲುವ ಕನಸು ನನ್ನದು' ಎಂದು ಖುಷಿಯಿಂದ ವಿಚಾರಗಳನ್ನು ಹಂಚಿಕೊಂಡ.

ಆ ತಂಡದಲ್ಲಿದ್ದ ಮತ್ತೊಬ್ಬ ಈಜುಪಟುವನ್ನು ಮಾತಾಡಿಸಿದೆ. ವ್ಲಾಡಿಮೀರ್ ಅವನ ಹೆಸರು. 150 ಮೀ. ಫ್ರೀ ಸ್ಟೈಲ್ ನಲ್ಲಿ ಪ್ರಥಮ, 50ಮೀ. ಬ್ರೆಸ್ಟ್ ಸ್ಟ್ರೋಕ್ ನಲ್ಲಿ ವ್ಲಾಡಿಮೀರ್ ದ್ವಿತೀಯ ಸ್ಥಾನ ಪಡೆದಿದ್ದ. ಇನ್ನೂ ಖುಷಿಯೆನಿಸಿದ ವಿಚಾರವೆಂದರೆ ಆತನಿಗೆ ಮೈಕಲ್ ಫೆಲ್ಪ್ಸ್ ನಂತಾಗುವ ಆಸೆಯಂತೆ.

'ಸುಮಾರು ಎಂಟು ವರ್ಷಗಳಿಗೆ ಹಿಂದೆಯೇ ನಾನು ಸ್ವಿಮಿಂಗ್ ಆರಂಭಿಸಿದೆ. ನಾನು ಆರು ವರ್ಷದವನಿದ್ದಾಗಲೇ ನನಗೆ ಒಲಿಂಪಿಕ್ಸ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಬೇಕೆನ್ನುವ ಆಸೆ ಅದ್ಹೇಗೋ ಮೂಡಿತ್ತು. ನಾನು ಖಂಡಿತಾ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತೇನೆ. ಬಂಗಾರದ ಮೀನು ಖ್ಯಾತಿಯ ಫೆಲ್ಪ್ಸ್ ಗೂ ಮಿಕ್ಕಿ ಸಾಧಿಸುವ ಆಸೆ ನನ್ನದು' ಎಂದ ವ್ಲಾಡಿಮೀರ್.

ಹೀಗೆ ಮಾತನಾಡಿಸಿದ್ದಾಗಲೇ ನನಗೆ ಆ ಈಜು ತಂಡದಲ್ಲಿದ್ದ ಪ್ರತಿಭಾನ್ವಿತರ ಪರಿಚಯವಾಯ್ತು. ಅವರ ಸಾಧನೆ, ಕನಸುಗಳನ್ನು ಕೇಳುತ್ತ ಖುಷಿಯೂ ಆಯ್ತು. ನಾನು ಅಲ್ಲಿದ್ದವರೊಡನೆ ಮಾತು ಮುಂದುವರೆಸಿದೆ. ಅಲ್ಲಿದ್ದ ಮಂದಿಯಲ್ಲಿ ಬಗೆ ಬಗೆ ವಿಚಾರಗಳನ್ನು ನಾನು ಕೆದಕಿ ಮಾತನಾಡುತ್ತಲೇಯಿದ್ದೆ. ರೈಲು ತನ್ನ ಪಾಡಿಗೆ ಉರುಳುತ್ತಿತ್ತು..

(ನಮ್ಮ myKhel.com ಪ್ರತಿನಿಧಿ ಅರವಿಂದ್ ಎಸ್ ಅವರು ರಷ್ಯಾದಲ್ಲಿದ್ದು, ಫುಟ್ಬಾಲ್ ಅಭಿಮಾನಿಗಳ ದೃಷ್ಟಿಕೋನದಿಂದ ಲೇಖನಗಳನ್ನು ರಚಿಸುತ್ತಿದ್ದಾರೆ)

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

Story first published: Thursday, June 28, 2018, 23:55 [IST]
Other articles published on Jun 28, 2018
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more