ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

2027ರ ಫುಟ್ಬಾಲ್ ಏಷ್ಯಾಕಪ್ ಆಯೋಜನೆಯಿಂದ ಹಿಂದೆ ಸರಿದ ಭಾರತ; ಸೌದಿ ಅರೇಬಿಯಾಗೆ ಒಲಿದ ಆತಿಥ್ಯ

Saudi Arabia Set To Host After India Withdraws From 2027 Football Asia Cup

2027ರ ಫುಟ್ಬಾಲ್ ಏಷ್ಯಾಕಪ್ ಆತಿಥ್ಯಕ್ಕೆ ಸಲ್ಲಿಸಿದ್ದ ಬಿಡ್ ಅನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಡಿಸೆಂಬರ್ 5ರಂದು ಹಿಂಪಡೆದ ಕಾರಣ, ಏಕೈಕ ಬಿಡ್ಡರ್ ಆಗಿ ಉಳಿದಿರುವ ಸೌದಿ ಅರೇಬಿಯಾವು ಫುಟ್ಬಾಲ್ ಏಷ್ಯನ್ ಕಪ್ 2027 ಪಂದ್ಯಾವಳಿ ಆಯೋಜನೆಗೆ ಸಿದ್ಧವಾಗಿದೆ.

ಏಷ್ಯನ್ ಫುಟ್ಬಾಲ್ ಕಾನ್ಫೆಡರೇಶನ್(ಎಎಫ್‌ಸಿ)ನ ಕಾರ್ಯಕಾರಿ ಸಮಿತಿಯು ಅಕ್ಟೋಬರ್‌ನಲ್ಲಿ ಭಾರತ ಮತ್ತು ಸೌದಿ ಅರೇಬಿಯಾದಿಂದ ಬಿಡ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಿತ್ತು. ಕತಾರ್ 2023ರ ಏಷ್ಯನ್ ಕಪ್ ಆಯೋಜನೆಯಿಂದ ಹಿಂದೆ ಸರಿಯುವ ಮೊದಲು ಚೀನಾದಲ್ಲಿ ನಿಗದಿಪಡಿಸಲಾಗಿತ್ತು.

ಚಿಕಿತ್ಸೆಗೆ ಸ್ಪಂದಿಸುತ್ತಿರುವ ಪೀಲೆ; ಆಸ್ಪತ್ರೆಯಿಂದಲೇ ಸಂದೇಶ ರವಾನಿಸಿದ ಬ್ರೆಜಿಲ್ ದಂತಕಥೆಚಿಕಿತ್ಸೆಗೆ ಸ್ಪಂದಿಸುತ್ತಿರುವ ಪೀಲೆ; ಆಸ್ಪತ್ರೆಯಿಂದಲೇ ಸಂದೇಶ ರವಾನಿಸಿದ ಬ್ರೆಜಿಲ್ ದಂತಕಥೆ

ಸೌದಿ ಅರೇಬಿಯನ್ ಫುಟ್ಬಾಲ್ ಫೆಡರೇಶನ್‌ನ 2027ರ ಫುಟ್ಬಾಲ್ ಏಷ್ಯಾಕಪ್ ಆಯೋಜನೆ ಬಿಡ್ ಅನ್ನು ಮುಂದಿನ ವರ್ಷ ಫೆಬ್ರವರಿಯಲ್ಲಿ ಎಎಫ್‌ಸಿ ಕಾಂಗ್ರೆಸ್‌ಗೆ ಪ್ರಸ್ತುತಪಡಿಸಲಾಗುವುದು ಮತ್ತು ಆತಿಥೇಯ ರಾಷ್ಟ್ರವನ್ನು ನಿರ್ಧರಿಸಲು ಬಹ್ರೇನ್‌ನಲ್ಲಿ ಮತ್ತೊಂದು ಸಭೆ ನಡೆಸಲಾಗುತ್ತದೆ.

Saudi Arabia Set To Host After India Withdraws From 2027 Football Asia Cup

ಮತ್ತೊಂದೆಡೆ, ಭಾರತವು 2027ರ ಫುಟ್ಬಾಲ್ ಏಷ್ಯಾಕಪ್ ಆಯೋಜನೆ ಬಿಡ್‌ನಿಂದ ಹಿಂದೆ ಸರಿಯುವುದರ ಹಿಂದೆ "ಅಚ್ಚುಕಟ್ಟಾದ ಫುಟ್‌ಬಾಲ್ ರಚನೆಯ ಅಡಿಪಾಯವನ್ನು ನಿರ್ಮಿಸಿದ' ನಂತರ ಕೇಂದ್ರೀಕರಿಸುವ ಅಗತ್ಯವನ್ನು ವಾದಿಸಿದೆ.

"ಭಾರತವು ಯಾವಾಗಲೂ ದೊಡ್ಡ ಪಂದ್ಯಾವಳಿಗಳಿಗೆ ಅದ್ಭುತ ಮತ್ತು ದಕ್ಷ ಆತಿಥ್ಯ ವಹಿಸಿದೆ. ಇದು ಇತ್ತೀಚೆಗೆ ಮುಕ್ತಾಯಗೊಂಡ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್‌ನಲ್ಲಿ ಸಾಕಷ್ಟು ಪ್ರದರ್ಶಿಸಲ್ಪಟ್ಟಿದೆ," ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಅಧ್ಯಕ್ಷ ಕಲ್ಯಾಣ್ ಚೌಬೆ ಹೇಳಿದ್ದಾರೆ.

ಫಿಫಾ ವಿಶ್ವಕಪ್: ಮೆಸ್ಸಿಯ ಚೊಚ್ಚಲ ನಾಕೌಟ್ ಗೋಲು; ಆಸೀಸ್ ವಿರುದ್ಧ ಗೆದ್ದು 8ರ ಘಟ್ಟ ಪ್ರವೇಶಿಸಿದ ಅರ್ಜೆಂಟೀನಾಫಿಫಾ ವಿಶ್ವಕಪ್: ಮೆಸ್ಸಿಯ ಚೊಚ್ಚಲ ನಾಕೌಟ್ ಗೋಲು; ಆಸೀಸ್ ವಿರುದ್ಧ ಗೆದ್ದು 8ರ ಘಟ್ಟ ಪ್ರವೇಶಿಸಿದ ಅರ್ಜೆಂಟೀನಾ

"ಅಖಿಲ ಭಾರತ ಫುಟ್ಬಾಲ್ ಫೆಡರೇಶನ್‌ನ ಒಟ್ಟಾರೆ ಕಾರ್ಯತಂತ್ರವು ಪ್ರಸ್ತುತ ನಮ್ಮ ಫುಟ್‌ಬಾಲ್ ಅನ್ನು ತಳಮಟ್ಟದಿಂದ ಅಭಿವೃದ್ಧಿಪಡಿಸುವುದು ಮತ್ತು ಪ್ರತಿ ಹಂತದಲ್ಲೂ ಮೂಲಭೂತ ಸೌಲಭ್ಯಗಳ ಮೇಲೆ ಕೇಂದ್ರೀಕರಿಸುತ್ತದೆ," ಎಂದು ತಿಳಿಸಿದೆ.

Saudi Arabia Set To Host After India Withdraws From 2027 Football Asia Cup

ಸೌದಿ ಅರೇಬಿಯಾವು AFCಯ ಏಷ್ಯಾ ಕಪ್ ಪಂದ್ಯಾವಳಿಯನ್ನು ಮೂರು ಬಾರಿ ಗೆದ್ದಿದೆ. ಆದರೆ ಈ ಪ್ರತಿಷ್ಠಿತ ಪಂದ್ಯಾವಳಿಯನ್ನು ಎಂದಿಗೂ ಆಯೋಜಿಸಿಲ್ಲ. ಈ ವರ್ಷದ ಆರಂಭದಲ್ಲಿ ಸೌದಿ ಅರೇಬಿಯನ್ ಫುಟ್ಬಾಲ್ ಫೆಡರೇಶನ್ 2026ರ ಮಹಿಳಾ ಏಷ್ಯನ್ ಕಪ್ ಅನ್ನು ಆಯೋಜಿಸುವ ಆಸಕ್ತಿ ಮಂಡಿಸಿದೆ.

ಇತ್ತೀಚಿಗೆ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ 2022ರ ಆರಂಭಿಕ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ವಿರುದ್ಧ 2-1 ಗೋಲುಗಳಿಂದ ಐತಿಹಾಸಿಕ ಜಯ ಸಾಧಿಸಿತು. ಇದು ಸೌದಿ ಅರೇಬಿಯಾದ ಅಭಿಮಾನಿಗಳು ಮತ್ತು ದೇಶವಾಸಿಗಳು ಹೆಚ್ಚು ಸಂಭ್ರಮಿಸಲು ಕಾರಣವಾಗಿದೆ.

Story first published: Monday, December 5, 2022, 18:27 [IST]
Other articles published on Dec 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X