ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಶನಿವಾರ ಭಾರತ-ಪಾಕಿಸ್ತಾನ ಮುಖಾಮುಖಿ

ಮಸ್ಕತ್, ಅಕ್ಟೋಬರ್ 19: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿಯಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಶನಿವಾರ (ಅಕ್ಟೋಬರ್ 20) ಸೆಣಸಲಿದೆ.

ಕಳೆದ ಬಾರಿಯ ಚಾಂಪಿಯನ್ಸ್ ಭಾರತ, ಒಮನ್ ವಿರುದ್ಧ 11-0 ಗೋಲುಗಳ ಭರ್ಜರಿ ವಿಜಯದೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಮಾಜಿ ಚಾಂಪಿಯನ್ಸ್ ಪಾಕಿಸ್ತಾನ ಶುಕ್ರವಾರ ರಾತ್ರಿ ದಕ್ಷಿಣ ಕೊರಿಯಾ ವಿರುದ್ಧ ಮೊದಲ ಪಂದ್ಯ ಆಡಲಿದೆ.

ಯೂತ್ ಒಲಿಂಪಿಕ್: ಭಾರತದ ಪುರುಷರ, ಮಹಿಳೆಯರ ಹಾಕಿ ತಂಡಕ್ಕೆ ಬೆಳ್ಳಿಯೂತ್ ಒಲಿಂಪಿಕ್: ಭಾರತದ ಪುರುಷರ, ಮಹಿಳೆಯರ ಹಾಕಿ ತಂಡಕ್ಕೆ ಬೆಳ್ಳಿ

ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭರ್ಜರಿ ಆರಂಭ ಪಡೆದು ಬಳಿಕ ಮುಗ್ಗರಿಸಿದ್ದ ಭಾರತದ ಹಾಕಿ ತಂಡ ಪಾಕಿಸ್ತಾನದ ವಿರುದ್ಧ ತನ್ನ ಕಹಿಯನ್ನು ಮರೆಯುವ ವಿಶ್ವಾಸ ಹೊಂದಿದೆ ಎಂದು ಕೋಚ್ ಹರೇಂದ್ರ ಸಿಂಗ್ ಹೇಳಿದ್ದಾರೆ.

Asian champions Trophy: India will take pakistan on Saturday

ಟೂರ್ನಿಯ ಸ್ಪರ್ಧಾತ್ಮಕ ಭಾಗ ಶನಿವಾರ ಪಾಕಿಸ್ತಾನದ ಪಂದ್ಯದೊಂದಿಗೆ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಏಷ್ಯನ್ ಗೇಮ್ಸ್‌ನ ಸೆಮಿಫೈನಲ್ಸ್‌ನಲ್ಲಿ ಸೋಲು ಅನುಭವಿಸಿದ ಕೆಲವು ದಿನಗಳವರೆಗೆ ತಂಡದ ಮೂಡ್ ಚೆನ್ನಾಗಿರಲಿಲ್ಲ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವಲ್ಲಿ ವಿಫಲರಾಗಿರುವುದು ಈಗಲೂ ಆಟಗಾರರ ಮನಸ್ಸಿನಲ್ಲಿ ಕಾಡುತ್ತಿದೆ. ಆದರೆ, ಗತಿಸಿ ಹೋದ ವಿಚಾರದ ಬಗ್ಗೆ ನಾವು ಚಿಂತಿಸುತ್ತಾ ಕೂರಲು ಆಗುವುದಿಲ್ಲ ಎಂದು ಹರೇಂದ್ರ ಸಿಂಗ್ ಹೇಳಿದ್ದಾರೆ.

ಹಾಕಿ ವಿಶ್ವಕಪ್‌ಗೆ ರೆಹಮಾನ್ ಸಂಗೀತದ ಮೆರುಗು, ಗುಲ್ಜಾರ್‌ ಸಾಹಿತ್ಯಹಾಕಿ ವಿಶ್ವಕಪ್‌ಗೆ ರೆಹಮಾನ್ ಸಂಗೀತದ ಮೆರುಗು, ಗುಲ್ಜಾರ್‌ ಸಾಹಿತ್ಯ

ಪಂದ್ಯದ ಸಮಯ: ರಾತ್ರಿ 10.40
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ ಸ್ಟಾರ್

Story first published: Saturday, October 20, 2018, 9:35 [IST]
Other articles published on Oct 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X