ಹಾಕಿ: ಮೂರನೇ ಬಾರಿಗೆ ಏಷ್ಯಾ ಕಪ್ ಗೆದ್ದ ಭಾರತ ತಂಡ

Posted By:

ಢಾಕಾ, ಅಕ್ಟೋಬರ್ 22 : ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾ ಕಪ್‌ ಪುರುಷರ ಹಾಕಿ ಟೂರ್ನಿಯ ಫೈನಲ್‌ ನಲ್ಲಿ ಭಾರತ ತಂಡವು 2-1 ಅಂತರದಲ್ಲಿ ಮಲೇಷಿಯಾ ವಿರುದ್ಧ ಗೆಲುವು ದಾಖಲಿಸಿದೆ. ಈ ಮೂಲಕ ಮೂರನೇ ಬಾರಿಗೆ ಏಷ್ಯಾಕಪ್ ಗೆದ್ದ ಭಾರತ ಚಾಂಪಿಯನ್ ಎನಿಸಿಕೊಂಡಿದೆ.

ಶನಿವಾರ ನಡೆದ ಪಂದ್ಯದಲ್ಲಿ ಸೂಪರ್‌ -4 ಗೇಮ್‌ನ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 0-4 ಅಂತರದಲ್ಲಿ ಸೋಲಿಸಿ, ಫೈನಲ್‌ಗೆ ಭಾರತ ಲಗ್ಗೆ ಇಟ್ಟಿತ್ತು. ಅಂತಿಮ ಹಣಾಹಣಿಯಲ್ಲಿ ತನ್ನ ಲಯವನ್ನು ಮುಂದುವರೆಸಿ ಉತ್ತಮ ಗೆಲುವು ದಾಖಲಿಸಿದೆ.

India beat Malaysia 2-1 to win 3rd Asia Cup hockey title

ಹತ್ತು ವರ್ಷಗಳ ಬಳಿಕ ಏಷ್ಯಾ ಕಪ್ ಮತ್ತೆ ಭಾರತಕ್ಕೆ ಸಿಕ್ಕಿದೆ.2003 ಹಾಗೂ 2007ರಲ್ಲಿ ಕಪ್ ಗೆದ್ದಿದ್ದ ಭಾರತ, 2011ರಲ್ಲಿ ರನ್ನರ್ ಅಪ್ ಆಗಿತ್ತು.

10ನೇ ಆವೃತ್ತಿಯ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಮಲೇಷಿಯಾ ವಿರುದ್ಧ ರಮಣ್ ದೀಪ್ ಸಿಂಗ್ (3ನೇ ನಿಮಿಷ) ಹಾಗೂ ಲಲಿತ್ ಉಪಾಧ್ಯಾಯ್ (29ನೇ ನಿಮಿಷ) ಗೋಲು ಬಾರಿಸಿದರು. ಮಲೇಷಿಯಾ ಪರ ಸಹಾರಿಲ್ ಸಬಾ (50ನೇ ನಿಮಿಷ) ಏಕೈಕ ಗೋಲು ಬಾರಿಸಿದರು.

ಇನ್ನೊಂದೆಡೆ, ಪಾಕಿಸ್ತಾನ ತಂಡವು 6-3 ಅಂತರದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭರ್ಜರಿ ಜಯ ದಾಖಲಿಸಿ ಮೂರನೇ ಸ್ಥಾನ ಗಳಿಸಿದೆ.

Story first published: Sunday, October 22, 2017, 19:31 [IST]
Other articles published on Oct 22, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ