ಅತಿಥೇಯ ಮಲೇಷ್ಯಾ ವಿರುದ್ಧ ಭಾರತ ಹಾಕಿ ತಂಡಕ್ಕೆ ಗೆಲುವು

Posted By:
Indian Hockey team beats Malaysia by 5-1 goal

ಇಫೋ, ಮಾರ್ಚ್ 08: ಅತ್ಯುತ್ತಮ ಆಟ ಆಡಿದ ಭಾರತ ಪುರುಷರ ಹಾಕಿ ತಂಡವು ಅಜ್ಲನ್ ಷಾ ಕಪ್ ಹಾಕಿ ಟೂರ್ನಿಯಲ್ಲಿ 5-1ಗೋಲುಗಳಿಂದ ಮಲೇಷ್ಯಾ ತಂಡವನ್ನು ಮಣಿಸಿದೆ.

ಭಾರತದ ಶಿಲಾನಂದ್ ಲಾಕ್ರಾ (10ನೇ ನಿ), ಗುರ್ಜಂತ್ ಸಿಂಗ್‌ (42, 57ನೇ ನಿ.), ಸುಮಿತ್ ಕುಆರ್‌ (48ನೇ ನಿಮಿಷ) ಮತ್ತು ರಮಣ್‌ದೀಪ್‌ ಸಿಂಗ್‌ (51ನೇ ನಿ) ಭಾರತದ ಪರ ಗೋಲು ಗಳಿಸಿದರು. ಮಲೇಷ್ಯಾ ಪರ ಏಕೈಕ ಗೋಲನ್ನು ಫೈಸಲ್ ಸಾರಿ (33ನೇ ನಿ) ಹೊಡೆದರು.

ಭಾರತ ತಂಡವು ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದು ಗೆದ್ದು, ಒಂದನ್ನು ಸೋತು, ಒಂದು ಡ್ರಾ ಮಾಡಿಕೊಂಡಿದ್ದು, ನಾಲ್ಕು ಪಾಯಿಂಟ್ಸ್‌ಗಳ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಆಡಿರುವ ಎಲ್ಲಾ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ, ಅರ್ಜೆಂಟೀನಾ ಎರಡನೇ ಸ್ಥಾನದಲ್ಲಿದೆ.

ಈ ಜಯದೊಂದಿಗೆ ಟೂರ್ನಿಯಲ್ಲಿ ಮೊದಲ ಬಾರಿ ಪೂರ್ಣ ಪಾಯಿಂಟ್ ಗಳಿಸಿದ ಭಾರತ ಫೈನಲ್‌ ಪ್ರವೇಶದ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ನಾಳೆ (ಶುಕ್ರವಾರ) ನಡೆಯಲಿರುವ ರೌಂಡ್‌ ರಾಬಿನ್ ಹಂತದ ಕೊನೆಯ ಪಂದ್ಯಗಳ ಫಲಿತಾಂಶದ ಮೇಲೆ ಭಾರತದ ಭವಿಷ್ಯ ನಿಂತಿದೆ.

Story first published: Thursday, March 8, 2018, 9:56 [IST]
Other articles published on Mar 8, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ