ಹಾಕಿ ಮುಖ್ಯ ಕೋಚ್ ಆಗಿ ಲಾಲ್ರೆಮ್ಸಿಯಾಮಿ ನೇಮಿಸಿದ ಮಿಝೋರಾಂ ಸರ್ಕಾರ

ನವದೆಹಲಿ: ಭಾರತೀಯ ಹಾಕಿ ಆಟಗಾರ್ತಿ ಲಾಲ್ರೆಮ್ಸಿಯಾಮಿ ಅವರನ್ನು ಮಿಝೋರಾಂ ಸರ್ಕಾರ ಅಲ್ಲಿನ ಮುಖ್ಯ ಹಾಕಿ ಕೋಚ್ ಆಗಿ ಆರಿಸಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಲಾಲ್ರೆಮ್ಸಿಯಾಮಿ ಅವರು ಮಹಿಳಾ ಹಾಕಿ ತಂಡದ ಭಾಗವಾಗಿದ್ದರು. ಲಾಲ್ರೆಮ್ಸಿಯಾಮಿ ಇನ್ನು ಮಿಝೋರಾಂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಡಿಯಲ್ಲಿ ಹಾಕಿ ಮುಖ್ಯ ಕೋಚ್ ಆಗಿ ಗ್ರೂಪ್ 'ಎ' ನೌಕರಿ ಮಾಡಲಿದ್ದಾರೆ.

ತಶಾ ಸಾತ್ವಿಕ್ ಜೊತೆ ಜಂಟಿ ಜೀವನಕ್ಕೆ ಕಾಲಿರಿಸಿದ ಸಂದೀಪ್ ಶರ್ಮಾತಶಾ ಸಾತ್ವಿಕ್ ಜೊತೆ ಜಂಟಿ ಜೀವನಕ್ಕೆ ಕಾಲಿರಿಸಿದ ಸಂದೀಪ್ ಶರ್ಮಾ

ಆಗಸ್ಟ್ 8ರಲ್ಲಷ್ಟೇ ಮುಕ್ತಾಯಗೊಂಡ ಟೋಕಿಯೋ ಒಲಿಂಪಿಕ್ಸ್ 2021ರಲ್ಲಿ ಲಾಲ್ರೆಮ್ಸಿಯಾಮಿ ಉತ್ತಮ ಪ್ರದರ್ಶನಕ್ಕೆ ಪ್ರೋತ್ಸಾಹವಾಗಿ ಮಿಝೋರಾಂ ಸರ್ಕಾರ ಲಾಲ್ರೆಮ್ಸಿಯಾಮಿಗೆ ಗುರುವಾರ (ಆಗಸ್ಟ್ 19) ಗ್ರೂಪ್‌ 'ಎ' ಹುದ್ದೆಯನ್ನು ಆಫರ್ ಮಾಡಿತ್ತು. ಅದರಂತೆ ಈಗ ಲಾಲ್ರೆಮ್ಸಿಯಾಮಿ ಮಿಝೋರಾಂನ ಮುಖ್ಯ ಕೋಚ್ ಆಗಿ ಆರಿಸಲ್ಪಟ್ಟಿದ್ದಾರೆ.

ಮಿಝೋರಾಂನಿಂದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಮೊದಲ ಮಹಿಳಾ ಹಾಕಿ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಲಾಲ್ರೆಮ್ಸಿಯಾಮಿ ಪಾತ್ರರಾಗಿದ್ದಾರೆ. ಹೀಗಾಗಿ ಅವರಿಗೆ ರಾಜ್ಯದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿ ಗ್ರೂಪ್ 'ಎ' ಹುದ್ದೆ ನೀಡಲಾಗಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ತಂಡ ಮೊದಲ ಬಾರಿ ಸೆಮಿಫೈನಲ್‌ಗೆ ಪ್ರವೇಶಿಸಿ ಇತಿಹಾಸ ನಿರ್ಮಿಸಿತ್ತು.

ಟಿ ಟ್ವೆಂಟಿ ವಿಶ್ವಕಪ್: ಸೆಮಿಫೈನಲ್ ಪ್ರವೇಶಿಸಬಹುದಾದ ತಂಡಗಳನ್ನು ಹೆಸರಿಸಿದ ಗೌತಮ್ ಗಂಭೀರ್ಟಿ ಟ್ವೆಂಟಿ ವಿಶ್ವಕಪ್: ಸೆಮಿಫೈನಲ್ ಪ್ರವೇಶಿಸಬಹುದಾದ ತಂಡಗಳನ್ನು ಹೆಸರಿಸಿದ ಗೌತಮ್ ಗಂಭೀರ್

"ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಡಿಯಲ್ಲಿ ಮಿಝೋರಾಂನಿಂದ ಒಲಿಂಪಿಕ್ಸ್‌ಗೆ ಆಯ್ಕೆಯಾದ ಏಕಮಾತ್ರ ಮೊದಲ ಮಹಿಳಾ ಹಾಕಿ ಆಟಗಾರ್ತಿ ಲಾಲ್ರೆಮ್ಸಿಯಾಮಿ ಅವರನ್ನು ಹಾಕಿ ಮುಖ್ಯ ಕೋಚ್ ಆಗಿ ಗ್ರೂಪ್‌ 'ಎ' ಪೋಸ್ಟ್‌ಗೆ ಆಯ್ಕೆಗೆ ಅನುಮೋದಿಸಲಾಗಿದೆ ಎಂದು ತಿಳಿಸಲು ಮಿಝೋರಾಂ ಸರ್ಕಾರಕ್ಕೆ ಹೆಮ್ಮೆಯಾಗುತ್ತಿದೆ," ಎಂದು ಮಿಝೋರಾಂ ಮುಖ್ಯ ಮಂತ್ರಿ ಝೋರಂತಂಗ ಟ್ವೀಟ್‌ನಲ್ಲಿ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, August 20, 2021, 16:28 [IST]
Other articles published on Aug 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X