ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022 : ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋತ ಬೆಂಗಳೂರು ಬುಲ್ಸ್

PKL 2022: Jaipur Pink Panthers Beat Bengaluru Bulls By 45-25 Points

ಪ್ರೊ ಕಬಡ್ಡಿ ಲೀಗ್ ಸೀಸನ್ 9ರಲ್ಲಿ ನವೆಂಬರ್ 30ರಂದು ಹೈದರಾಬಾದ್‌ನ ಗಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಬೆಂಗಳೂರು ಬುಲ್ಸ್ ವಿರುದ್ಧ 45-25 ಅಂಕಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು, ಸತತವಾಗಿ ಪಾಯಿಂಟ್‌ಗಳನ್ನು ಪಡೆಯುವ ಮೂಲಕ ಮುನ್ನಡೆ ಪಡೆದುಕೊಂಡಿತು.

ಬೆಂಗಳೂರು ಬುಲ್ಸ್ ತಂಡ ರೈಡಿಂಗ್‌ನಲ್ಲಿ ಉತ್ತಮವಾಗಿ ಆಡಿದರು ರಕ್ಷಣಾ ವಿಭಾಗ ಸಾಕಷ್ಟು ದುರ್ಬಲವಾಗಿತ್ತು. ಇದರ ಲಾಭ ಪಡೆದ ಜೈಪುರ ಪಿಂಕ್ ಪ್ಯಾಂಥರ್ಸ್‌ ಉತ್ತಮ ದಾಳಿ ಸಂಘಟಿಸಿತು.

ಅರ್ಜುನ್ ದೇಸ್ವಾಲ್ ಒಟ್ಟು 13 ರೈಡಿಂಗ್ ಪಾಯಿಂಟ್ ಗಳಿಸುವ ಮೂಲಕ ಮಿಂಚಿದರು. ಬೆಂಗಳೂರು ಪರವಾಗಿ ಭರತ್ 10 ರೈಡಿಂಗ್ ಪಾಯಿಂಟ್ ಗಳಿಸಿದ್ದು ಬಿಟ್ಟರೆ ಉಳಿದವರು ಜೈಪುರ ಪಿಂಕ್ ಪ್ಯಾಂಥರ್ಸ್ ರಕ್ಷಣಾ ಕೋಟೆಯನ್ನು ಭೇದಿಸುವಲ್ಲಿ ವಿಫಲವಾದರು.

ಬೆಂಗಳೂರು ತಂಡ ಒಟ್ಟು 18 ರೈಡಿಂಗ್ ಪಾಯಿಂಟ್ ಗಳಿಸಿದರೆ, ಜೈಪುರ ಪಿಂಕ್ ಪ್ಯಾಂಥರ್ಸ್ 19 ರೈಡಿಂಗ್ ಪಾಯಿಂಟ್ ಗಳಿಸಿತು. ಆದರೆ, ಪಿಂಕ್ ಪ್ಯಾಂಥರ್ಸ್‌ ತಂಡ ರಕ್ಷಣಾ ವಿಭಾಗದಲ್ಲಿ ಸಾಕಷ್ಟು ಯಶಸ್ವಿಯಾಯಿತು. 19 ಟ್ಯಾಕಲ್ ಪಾಯಿಂಟ್ಸ್ ಗಳಿಸುವ ಮೂಲಕ ಬುಲ್ಸ್ ಪಡೆಯನ್ನು ಕಟ್ಟಿಹಾಕಿತು. ಆದರೆ ಬೆಂಗಳೂರು ಬುಲ್ಸ್ ಕೇವಲ 6 ಟ್ಯಾಕಲ್ ಪಾಯಿಂಟ್ಸ್ ಪಡೆಯುವ ಮೂಲಕ ರಕ್ಷಣಾ ವಿಭಾಗದಲ್ಲಿ ಸಾಕಷ್ಟು ಕಳಪೆ ಆಟ ಪ್ರದರ್ಶಿಸಿತು.

PKL 2022: Jaipur Pink Panthers Beat Bengaluru Bulls By 45-25 Points

ಅರ್ಜುನ್ ದೇಶ್‌ವಾಲ್ ಮತ್ತು ವಿ ಅಜಿತ್ ಉತ್ತಮ ಆಟ

ಸಹಲ್ ಕುಮಾರ್ ಮತ್ತು ಅಂಕುಶ್ ಎಲ್ಲರೂ ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದರು, ಮೊದಲಾರ್ಧದ ಮೊದಲ ಹತ್ತು ನಿಮಿಷಗಳಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ 4 ಪಾಯಿಂಟ್ ಮುನ್ನಡೆ ಪಡೆದರು.

ಅರ್ಜುನ್ ದೇಶ್ವಾಲ್ ಮತ್ತು ವಿ ಅಜಿತ್ ಕೂಡ ಅಂಕಗಳನ್ನು ಪಡೆಯುವ ಮೂಲಕ ಜೈಪುರ ಪಿಂಕ್ ಪ್ಯಾಂಥರ್ಸ್ ತಮ್ಮ ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಹಾಯ ಮಾಡಿದರು. ಮೊದಲಾರ್ಧದ ಮುಕ್ತಾಯದ ಹೊತ್ತಿಗೆ ಜೈಪುರ ಪಿಂಕ್ ಪ್ಯಾಂಥರ್ಸ್ 25-10 ಅಂಕಗಳ ಮುನ್ನಡೆ ಸಾಧಿಸಿತು.

ಅಂತಿಮ ಹತ್ತು ನಿಮಿಷಗಳಿದ್ದಾಗ, ಬೆಂಗಳೂರು ಬುಲ್ಸ್ 20 ಪಾಯಿಂಟ್‌ಗಳಿಂದ ಹಿನ್ನಡೆಯಲ್ಲಿತ್ತು, ಯಾವ ಹಂತದಲ್ಲೂ ಜೈಪುರ ಪಿಂಕ್‌ ಪ್ಯಾಂಥರ್ಸ್ ಬುಲ್ಸ್ ಅನ್ನು ವಿರೋಧಿಸಲು ಅವಕಾಶ ಮಾಡಿಕೊಡಲಿಲ್ಲ.

Story first published: Wednesday, November 30, 2022, 22:27 [IST]
Other articles published on Nov 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X