ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022: ಯು ಮುಂಬಾ ವಿರುದ್ಧ ರೋಚಕ ಜಯ ಸಾಧಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್

PKL 2022: Raider Arjun Deshwal’s Helps Jaipur Pink Panthers To Beat U Mumba

ರೈಡರ್ ಅರ್ಜುನ್ ದೇಶವಾಲ್ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ಸೋಮವಾರ ನಡೆದ ಪ್ರೊ ಕಬಡ್ಡಿ ಲೀಗ್‌ನಲ್ಲಿ ಯು ಮುಂಬಾ ತಂಡವನ್ನು 42-39 ಅಂಕಗಳಿಂದ ಸೋಲಿಸಿತು. ದೇಶವಾಲ್ ಅವರ 15 ರೇಡ್ ಪಾಯಿಂಟ್‌ಗಳು ಮತ್ತು ಅಂಕುಶ್ ಅವರ ಐದು ಟ್ಯಾಕಲ್ ಪಾಯಿಂಟ್‌ಗಳು ಜೈಪುರ ತಂಡವು ಕಠಿಣ ಹೋರಾಟದ ಗೆಲುವು ದಾಖಲಿಸಲು ನೆರವಾಯಿತು.

ಮೊದಲಾರ್ಧದಲ್ಲಿ ಉಭಯ ತಂಡಗಳು ಸಮಬಲದಿಂದ ಹೋರಾಡಿದವು. ಎರಡೂ ತಂಡಗಳು ಪಾಯಿಂಟ್‌ ಗಳಿಸಿದವು. ಆರಂಭದ ನಿಮಿಷಗಳಲ್ಲಿ ಸುರಿಂದರ್ ಸಿಂಗ್, ರಿಂಕು ಮತ್ತು ಜೈ ಭಗವಾನ್‌ರನ್ನು ಔಟ್‌ ಮಾಡುವ ಮೂಲಕ ದೇಶವಾಲ್ ಸೂಪರ್ ರೈಡ್ ಮಾಡಿದರು. ಸೂಪರ್ ರೇಡ್‌ನಿಂದ ಯು ಮುಂಬಾ ಒತ್ತಡಕ್ಕೆ ಸಿಲುಕಿತು. ಶೀಘ್ರದಲ್ಲೇ ಯು ಮುಂಬಾವನ್ನು ಆಲೌಟ್ ಮಾಡುವ ಮೂಲಕ ಜೈಪುರ ಪಿಂಕ್ ಪ್ಯಾಂಥರ್ಸ್ 9-1 ಮುನ್ನಡೆ ಸಾಧಿಸಿತು.

ಫುಟ್ಬಾಲ್‌ ಚಾಂಪಿಯನ್‌ಷಿಪ್‌: ಡ್ರೀಮ್ ಯುನೈಟೆಡ್‌ ವಿರುದ್ಧ ಎಫ್‌ಸಿ ಬೆಂಗಳೂರು 3-1 ಅಂತರದ ಜಯಫುಟ್ಬಾಲ್‌ ಚಾಂಪಿಯನ್‌ಷಿಪ್‌: ಡ್ರೀಮ್ ಯುನೈಟೆಡ್‌ ವಿರುದ್ಧ ಎಫ್‌ಸಿ ಬೆಂಗಳೂರು 3-1 ಅಂತರದ ಜಯ

ಆದರೆ, ಪಿಂಕ್‌ ಪ್ಯಾಂಥರ್ಸ್‌ನ ಅಂಕುಶ್, ರಾಹುಲ್ ಚೌಧರಿ ಮತ್ತು ಸಾಹುಲ್ ಕುಮಾರ್ ಅವರನ್ನು ಒಂದೇ ರೇಡ್‌ನಲ್ಲಿ ಹೈದರಾಲಿ ಎಕ್ರಾಮಿ ಔಟ್ ಮಾಡುವ ಮೂಲಕ ಯು ಮುಂಬಾವನ್ನು ಮತ್ತೆ ಆಟಕ್ಕೆ ಕರೆತಂದರು. ಕೆಲವೇ ನಿಮಿಷಗಳಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಆಲೌಟ್ ಮಾಡುವ ಮೂಲಕ 17-17 ಅಂಕಗಳಲ್ಲಿ ಸಮಬಲ ಸಾಧಿಸಿತು.

ರೋಚಕ ಆಟದಲ್ಲಿ ಗೆದ್ದ ಜೈಪುರ ಪಿಂಕ್ ಪ್ಯಾಂಥರ್ಸ್

ನಂತರ ತಿರುಗಿಬಿದ್ದ ಜೈಪುರ ಪಿಂಕ್ ಪ್ಯಾಂಥರ್ಸ್ ಮೊದಲಾರ್ಧ ಮುಕ್ತಾಯದ ಹಂತಕ್ಕೆ 20-19 ರಿಂದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ, ಯು ಮುಂಬಾ ತಂಡದ ಡಿಫೆಂಡರ್‌ಗಳು ಆಟವನ್ನು ರೋಚಕವಾಗಿಸಿದರು ಮತ್ತು ನಿಧಾನವಾಗಿ ಬೃಹತ್ ಮುನ್ನಡೆ ಸಾಧಿಸಿದರು.

ಪಿಂಕ್ ಪ್ಯಾಂಥರ್ಸ್ ಡಿಫೆಂಡರ್‌ಗಳಾದ ಅಂಕುಶ್ ಮತ್ತು ಲಕ್ಕಿ ಶರ್ಮಾ ಅವರು ತಾವು ಸೂಪರ್ ಟ್ಯಾಕಲ್ ಪಡೆದುಕೊಂಡಿದ್ದೇವೆ ಎಂದು ಭಾವಿಸಿದರು, ಆದರೆ, ಆಶಿಶ್ ಮಾತ್ರ ಸ್ಲಿಪ್ ಔಟ್ ಆಗುವ ಮೂಲಕ ಪ್ಯಾಂಥರ್ಸ್ ತಂಡವನ್ನು ಆಲೌಟ್ ಮಾಡಿದರು, ಯು ಮುಂಬಾ 27-22 ಮುನ್ನಡೆ ಸಾಧಿಸಿತು.

ಆದರೆ, ಜೈಪುರ ನಂತರ ತಿರುಗಿ ಬಿದ್ದು, ಯು ಮುಂಬಾ ತಂಡವನ್ನು ಮತ್ತೊಮ್ಮೆ ಆಲೌಟ್ ಮಾಡುವ ಮೂಲಕ 34-33 ರಿಂದ ಮುನ್ನಡೆ ಸಾಧಿಸಿತು. ಆಟದ ಮುಕ್ತಾಯಕ್ಕೆ ಐದು ನಿಮಿಷಗಳು ಉಳಿದಿರುವಾಗ, ಆಟ ಹೆಚ್ಚಿನ ರೋಚಕತೆ ಪಡೆದುಕೊಂಡಿತು. ಕೊನೆಯಲ್ಲಿ, ಯು ಮುಂಬಾ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರು. ಆದರೆ, ಜೈಪುರ ಪಿಂಕ್ ಪ್ಯಾಂಥರ್ಸ್ ಆಟದ ಕೊನೆಯ ಕ್ಷಣಗಳಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದರು. ಅಂತಿಮವಾಗಿ 42-39 ಅಂಕಗಳಿಂದ ಜಯ ಸಾಧಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಪ್ರಗತಿ ಸಾಧಿಸಿದರು.

Story first published: Monday, November 7, 2022, 23:49 [IST]
Other articles published on Nov 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X