ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಕಪ್ 2022: ಮಣಿಕಾ ಬಾತ್ರಾ ಐತಿಹಾಸಿಕ ಸಾಧನೆ, ಕಂಚಿನ ಪದಕ ಗೆದ್ದ ಭಾರತದ ಮೊದಲ ಟಿಟಿ ಆಟಗಾರ್ತಿ

Asian Cup 2022: Manika Batra historical achievement as won bronze medal

ಥಾಯ್ಲೆಂಡ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಕಪ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಮಣಿಕಾ ಬಾತ್ರಾ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದುಕೊಂಡ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೂರು ಬಾರಿಯ ಏಷ್ಯನ್ ಚಾಂಪಿಯನ್ ಹಿನಾ ಹಯಾತಾ ಅವರನ್ನು 4-2 ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ ಮಣಿಕಾ ಬಾತ್ರಾ.

ವಿಶ್ವದ ಆರನೇ ಶ್ರೇಯಾಂಕಿತ ಆಟಗಾರ್ತಿ ಹಿನಾ ಹಯಾತಾ ಅವರನ್ನು 11-6, 6-11, 11-7, 12-10, 4-11, 11-2 ಅಂತರದಿಂದ ಸೋಲಿಸಿ ಮಣಿಕಾ ಭಾತ್ರಾ ಭಾರತದ ಪರವಾಗಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಈ ಸಾಧನೆಯ ಜೊತೆಗೆ ಮಣಿಕಾ ಬಾತ್ರಾ ಒಂದೇ ಕ್ರೀಡಾಕೂಟದಲ್ಲಿ ಇಬ್ಬರು ಟಾಪ್ 10 ಆಟಗಾರರನ್ನು ಸೋಲಿಸಿದ ಮೊದಲ ಭಾರತೀಯ ಪ್ಯಾಡ್ಲರ್ ಎನಿಸಿಕೊಂಡಿದ್ದಾರೆ. ಬಾತ್ರಾ ಮೊದಲ ಸುತ್ತಿನಲ್ಲಿ ವಿಶ್ವದ 7ನೇ ಶ್ರೇಯಾಂಕದ ಚೀನಾದ ಚೆನ್ ಕ್ಸಿಂಗ್‌ಟಾಂಗ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದ್ದರು.

IND vs NZ: ಕಿವೀಸ್ ವಿರುದ್ಧ ಭಾರತದ ಟಿ20 ತಂಡದ ಬಗ್ಗೆ ಜಾಂಟಿ ರೋಡ್ಸ್ ದೊಡ್ಡ ಹೇಳಿಕೆIND vs NZ: ಕಿವೀಸ್ ವಿರುದ್ಧ ಭಾರತದ ಟಿ20 ತಂಡದ ಬಗ್ಗೆ ಜಾಂಟಿ ರೋಡ್ಸ್ ದೊಡ್ಡ ಹೇಳಿಕೆ

ಕಳೆದ ಗುರುವಾರ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ 7ನೇ ಶ್ರೇಯಾಂಕಿತೆ ಚೆನ್ ಕ್ಸಿಂಗ್‌ಟಾಂಗ್‌ರನ್ನು ಸೋಲಿಸಿದ್ದ ಬಾತ್ರಾ ತಮ್ಮ ಗೆಲುವಿನ ಓಟವನ್ನು ಮುಂದುವರಿಸಿದ್ದರು. ಚೆನ್ ಕ್ಸಿಂಗ್‌ಟಾಂಗ್‌ರನ್ನು ಮಣಿಕಾ 8-11, 11-9, 11-6, 11-6, 9-11, 8-11, 11-9 ಅಂತರದಿಂದ ಮಣಿಸಿದ್ದರು. ಇದು ಮಣಿಕಾ ತಮ್ಮ ವೃತ್ತಿ ಜೀವನದಲ್ಲಿ ಚೀನೀ ಎದುರಾಳಿಯ ವಿರುದ್ಧದ ಮೂರನೇ ಗೆಲುವು ಎಂಬುದು ಮತ್ತೊಂದು ಅಂಶ. ಭಾರೀ ಗೆಲುವಿನ ಬಳಿಕ 27 ವರ್ಷದ ಮಣಿಕಾ ಮತ್ತಷ್ಟು ಛಲದ ಪ್ರದರ್ಶನದ ನೀಡಿ ಗೆಲುವಿನ ಲಯವನ್ನು ಮುಂದುವರಿಸಲು ಯಶಸ್ವಿಯಾಗಿದ್ದು ಈಗ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಇಷ್ಟೊಂದು ಬ್ರೇಕ್‌ನ ಅಗತ್ಯವೇನಿದೆ?: ಕೋಚ್ ರಾಹುಲ್ ದ್ರಾವಿಡ್ ನಿಲುವಿಗೆ ರವಿ ಶಾಸ್ತ್ರಿ ಕಿಡಿಇಷ್ಟೊಂದು ಬ್ರೇಕ್‌ನ ಅಗತ್ಯವೇನಿದೆ?: ಕೋಚ್ ರಾಹುಲ್ ದ್ರಾವಿಡ್ ನಿಲುವಿಗೆ ರವಿ ಶಾಸ್ತ್ರಿ ಕಿಡಿ

ಪ್ರಸ್ತುತ ವಿಶ್ವದ ನಂ.44 ಶ್ರೇಯಾಂಕಿತೆಯಾಗಿರುವ ಬಾತ್ರಾ ಟೂರ್ನಿಯ ಸೆಮಿ ಫೈನಲ್‌ಗೆ ಅರ್ಹತೆ ಪಡೆದ ಏಕೈಕ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೇತನ್ ಬಾಬೂರ್ ನಂತರ ಚಾಂಪಿಯನ್‌ಶಿಪ್‌ನಲ್ಲಿ ಅಂತಿಮ ನಾಲ್ಕುರ ಘಟ್ಟವನ್ನು ತಲುಪಿದ ಎರಡನೇ ಭಾರತೀಯ ಪ್ಯಾಡ್ಲರ್ ಎನಿಸಿಕೊಂಡಿದ್ದಾರೆ ಮಣಿಕಾ ಬಾತ್ರಾ.

39 ವರ್ಷಗಳ ಏಷ್ಯನ್ ಕಪ್ ಇತಿಹಾಸದಲ್ಲಿ ಭಾರತೀಯ ಟೇಬಲ್ ಟೆನಿಸ್ ಆಟಗಾರರ ಪೈಕಿ ಮಣಿಕಾ ಬಾತ್ರಾ ಅತ್ಯುನ್ನತ ಸಾಧನೆ ಮಾಡಿದಂತಾಗಿದೆ. ಇದಕ್ಕೂ ಮುನ್ನ ಅಚಂತಾ ಶರತ್ ಕಮಲ್ ಮತ್ತು ಜಿ ಸತ್ಯನ್ ಅವರು 2015 ಮತ್ತು 2019ರ ಆವೃತ್ತಿಗಳಲ್ಲಿ ಕ್ರಮವಾಗಿ ಆರನೇ ಸ್ಥಾನ ಗಳಿಸಿದ್ದು ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು.

Story first published: Saturday, November 19, 2022, 18:57 [IST]
Other articles published on Nov 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X