ಭಾರತದ ಆತಿಥ್ಯದಲ್ಲಿ ಏಷ್ಯನ್ ಮಾಸ್ಟರ್ಸ್ ಮ್ಯಾರಥಾನ್ -2022

ಭಾರತಕ್ಕೆ ಏಷ್ಯಾದ ಅತ್ಯಂತ ಪ್ರತಿಷ್ಠಿತ ಏಷ್ಯನ್ ಮಾಸ್ಟರ್ಸ್ ಮ್ಯಾರಥಾನ್‍ನ ಉದ್ಘಾಟನಾ ಆವೃತ್ತಿಯ ಆತಿಥ್ಯದ ಹಕ್ಕನ್ನು ಭಾರತೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಒಕ್ಕೂಟ (ಎಂಎಎಫ್‍ಐ)ಪಡೆದಿರುವುದು ದೇಶಕ್ಕೆ ಬಹಳ ಹೆಮ್ಮೆಯ ಕ್ಷಣ ಎನಿಸಿದೆ.

ಭಾರತೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಒಕ್ಕೂಟ ಭಾರತದಲ್ಲಿ ಏಕೈಕ ಅಕೃತ ಸಂಸ್ಥೆಯಾಗಿದ್ದು, ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಮತ್ತು ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್‌ಗಾಗಿ ಸಂಯೋಜಿತವಾಗಿದೆ. ಜೊತೆಗೆ 35 ವರ್ಷ ಮೇಲ್ಪಟ್ಟ ಮಾಸ್ಟರ್ಸ್ ಅಥ್ಲೆಟಿಕ್ಸ್‌ಗಾಗಿ ಕ್ರೀಡಾಪಟುಗಳು, ಟ್ರ್ಯಾಕ್ ಮತ್ತು ಫೀಲ್ಡ್ (ಜಂಪ್ಸ್ ಮತ್ತು ಥ್ರೋ), ಕ್ರಾಸ್ ಕಂಟ್ರಿ ರಸ್ತೆ ರೇಸ್‍ಗಳು, ಮ್ಯಾರಥಾನ್‍ಗಳು ಮತ್ತು ಅಥ್ಲೆಟಿಕ್ಸ್‍ನ ಅಭಿವೃದ್ಧಿ ಕಾರ್ಯಕ್ರಮಗಳ ಎಲ್ಲ ಅಥ್ಲೆಟಿಕ್ಸ್ ವಿಭಾಗಗಳಿಗೆ ಅಧಿಕೃತ ಜವಾಬ್ದಾರನಾಗಿದೆ.

ಸುಮಾರು 40ಕ್ಕೂ ಹೆಚ್ಚು ಏಷ್ಯಾ ದೇಶಗಳು ಅಧಿಕೃತವಾಗಿ ಫುಲ್ ಮ್ಯಾರಥಾನ್ (42.195 ಕಿ.ಮೀ.), ಹಾಫ್ ಮ್ಯಾರಥಾನ್ (21.097 ಕಿ.ಮೀ.) ಮತ್ತು 10 ಕಿ.ಮೀ ದೂರದಲ್ಲಿ ಓಟಗಳಲ್ಲಿ ತಮ್ಮ ದೇಶಗಳನ್ನು ಪ್ರತಿನಿಸುವ ಸ್ಪರ್ಧೆಯಂತೆಯೇ ಏಷ್ಯಾದಲ್ಲಿ ನಡೆಯಲಿರುವ ಸ್ಪರ್ಧೆ ಇದಾಗಿದೆ. ಏಷ್ಯಾ ಮತ್ತು ಏಷ್ಯಾಯೇತರ ದೇಶಗಳ 35 ವರ್ಷ ಮೇಲ್ಪಟ್ಟ ಮಾಸ್ಟರ್ಸ್ ಅಥ್ಲೀಟ್ ಗಳಿಗೆ ಈ ರೇಸ್ ಮುಕ್ತವಾಗಿರುತ್ತದೆ.

'' ಏಷ್ಯಾ ಮಾಸ್ಟರ್ಸ್ ಮ್ಯಾರಥಾನ್‍ನಲ್ಲಿ ಸ್ಥಾನ ಪಡೆದಿರುವುದು ನಿಜಕ್ಕೂ ಭಾರತಕ್ಕೆ ಗೌರವವಾಗಿದೆ. ನಮ್ಮ ದೇಶವು ಮಾಸ್ಟರ್ಸ್ ಅಥ್ಲೀಟ್‍ಗಳ ಪೈಕಿ ಏಷ್ಯಾದಲ್ಲೇ ಅತ್ಯಕ ಪದಕಗಳನ್ನು ಗಳಿಸಿದ ಹೆಮ್ಮೆಯನ್ನು ಹೊಂದಿದೆ. ಜೊತೆಗೆ ಈ ಅನನ್ಯ ರಸ್ತೆ ಓಟವು ನಮ್ಮ ಓಟಗಾರರಿಗೆ ಏಷ್ಯಾ ಮತ್ತು ಏಷ್ಯಾಯೇತರ ರಾಷ್ಟ್ರಗಳ ಅತ್ಯುತ್ತಮ ಓಟಗಾರರ ವಿರುದ್ಧ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಲಿದೆ'' ಎಂದು ಶಿವಪ್ರಗಾಸಂ ಹೇಳಿದ್ದಾರೆ.

ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್ ಮತ್ತು 10 ಕಿ.ಮೀ. ಓಟದಲ್ಲಿ ಅತ್ಯುನ್ನತ ತಾಂತ್ರಿಕ ಮಾನದಂಡಗಳೊಂದಿಗೆ ಓಟವನ್ನು ನಡೆಸಲಾಗುತ್ತದೆ. ಈ ಸ್ಪರ್ಧೆಯನ್ನು 2022ರ ಕೊನೆಯ ತ್ರೈಮಾಸಿಕದಲ್ಲಿ ಆಯೋಜಿಸಲು ನಿಗದಿಪಡಿಸಲಾಗಿದೆ. ಹಾಗೆಯೇ ಓಟಗಾರರಿಗೆ ತರಬೇತಿ ಮತ್ತು ನೋಂದಣಿ ಸಾಧ್ಯವಾಗುವಂತೆ ಶೀಘ್ರದಲ್ಲೇ ಹೆಚ್ಚಿನ ವಿವರಗಳನ್ನು ಪ್ರಕಟಿಸಲಾಗುತ್ತದೆ.

ಈ ಕುರಿತು ಪ್ರತಿಕ್ರಿಯಿಸಿರುವ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ (ಎಎಂಎ) ಕಾರ್ಯದರ್ಶಿ ಶಿವಪ್ರಗಾಸಂ, ಇಂದು, ಓಟವು ವಿಶ್ವದ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದೆ. ಕಳೆದ ನಾಲ್ಕು ದಶಕಗಳಲ್ಲಿ ಭಾರತವು ಸ್ಪರ್ಧೆಯಲ್ಲಿ ನಾವು ನೋಡಿದ ಕೆಲವು ಅತ್ಯುತ್ತಮ ಕ್ರೀಡಾಪಟುಗಳನ್ನು ಘೋಷಿಸುವ ಜೊತೆಗೆ ಉದ್ಯೋಗವನ್ನು ಕಲ್ಪಿಸಿದೆ. 2021ರ ಅಕ್ಟೋಬರ್ ನಲ್ಲಿ ನಡೆದ ಎಎಂಎ ಮಂಡಳಿ ಸಭೆಯಲ್ಲಿ ಭಾರತೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಒಕ್ಕೂಟ ಪ್ರಸ್ತುತಪಡಿಸಿದ ಪ್ರಸ್ತಾವನೆಗೆ ಎಎಂಎ ಕೌನ್ಸಿಲ್ ಸರ್ವಾನುಮತದಿಂದ ಅನುಮೋದನೆ ನೀಡಿತು. ನಂತರ ಅಕೃತವಾಗಿ ಏಷ್ಯನ್ ಮಾಸ್ಟರ್ಸ್ ಮ್ಯಾರಥಾನ್ ಕೂಟವನ್ನು ಭಾರತಕ್ಕೆ ಹಂಚಿಕೆ ಮಾಡಿದೆ ಎಂದು ಅವರು ಹೇಳಿದ್ದಾರೆ.

ಇದಲ್ಲದೆ, ಎಎಂಎ ಭಾರತದ ಆತಿಥ್ಯದಲ್ಲಿ ಆಯೋಜಿಸಲಾಗುವ ಏಷ್ಯನ್ ಮಾಸ್ಟರ್ಸ್ ಮ್ಯಾರಥಾನ್ ಅನ್ನು ಎದುರು ನೋಡುತ್ತಿದೆ. ಜೊತೆಗೆ ಭಾರತೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಒಕ್ಕೂಟಕ್ಕೆ ಎಲ್ಲ ರೀತಿಯ ಸಹಕಾರ ಮತ್ತು ತಾಂತ್ರಿಕ ನೆರವು ಒದಗಿಸಲಿದೆ ಎಂದು ಶಿವಪ್ರಗಾಸಂ ತಿಳಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, November 25, 2021, 15:38 [IST]
Other articles published on Nov 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X