ಕಾಮನ್‌ವೆಲ್ತ್‌‌ ಸ್ಕ್ಯಾಶ್: ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟ ದೀಪಿಕಾ

Posted By:
CWG 2018, squash: Team India settle for Silver Dipika gets double

ಗೋಲ್ಡ್ ಕೋಸ್ಟ್ , ಏಪ್ರಿಲ್ 15: ಕಾಮನ್‌ವೆಲ್ತ್‌‌ ಕ್ರೀಡಾಕೂಟ 2018ರಲ್ಲಿ ಸ್ಕ್ವಾಶ್ ನಲಿ ಭಾರತ ಪದಕಗಳ ಬೇಟೆ ಮುಂದುವರಿದಿದೆ. ಮಹಿಳೆಯರ ಸ್ಕ್ವಾಷ್‌‌ನಲ್ಲಿ ಜೋಷ್ನಾ ಚಿನ್ನಪ್ಪ ಮತ್ತು ದೀಪಿಕಾ ಪಳ್ಳಿಕಲ್‌ ಬೆಳ್ಳಿ ಪದಕ ಗೆದ್ದಿದ್ದಾರೆ. ಇದಕ್ಕೂ ಮುನ್ನ ಮಿಶ್ರ ಡಬಲ್ಸ್ ನಲ್ಲೂ ದೀಪಿಕಾ ಹಾಗೂ ಸೌರವ್ ಬೆಳ್ಳಿ ಪದಕ ಜಯಿಸಿದ್ದರು.

ಆಸ್ಟ್ರೇಲಿಯಾದ ಗೋಲ್ಡ್‌‌ ಕೋಸ್ಟ್‌‌ನಲ್ಲಿ ನಡೆದಿರುವ ಕಾಮನ್‌ವೆಲ್ತ್‌‌ ಗೇಮ್ಸ್‌ -2018ನ ಮಹಿಳೆಯರ ಡಬಲ್ಸ್‌ ಸ್ಕ್ವಾಶ್ ‌ನಲ್ಲಿ ಜೋಷ್ನಾ-ದೀಪಿಕಾ ಜೋಡಿ ನ್ಯೂಜಿಲೆಂಡಿನ ಮಹಿಳೆಯರನ್ನು ಸೋಲಿಸಿದರು.

ನ್ಯೂಜಿಲ್ಯಾಂಡ್‌‌ನ ಜೋಯಿಲ್ಲೆ ಕಿಂಗ್‌‌ ಮತ್ತು ಅಮಂಡಾ ಲ್ಯಾಂಡರ್ಸ್‌-ಮರ್ಫಿ ವಿರುದ್ಧ 0-2 ಅಂತರದಿಂದ ಸೋಲು(09-11,08-11) ಕಂಡ ದೀಪಿಕಾ ಪಳ್ಳಿಕಲ್, ಜೋಶ್ನಾ ಚಿನ್ನಪ್ಪ ಅವರು ಬೆಳ್ಳಿ ಪದಕ ಗಳಿಸಿದರು. ಗ್ಲಾಸ್ಗೋದಲ್ಲಿ ಭಾರತದ ದೀಪಿಕಾ ಹಾಗೂ ಜೋಶ್ನಾ ಚಿನ್ನದ ಪದಕ ಗೆದ್ದಿದ್ದರು.

ದೀಪಿಕಾ ಪಳ್ಳಿಕಲ್ ಹಾಗೂ ಸೌರವ್ ಘೋಶಾಲ್ ಅವರು ಆಸ್ಟ್ರೇಲಿಯಾದ ಡೋನಾ ಉರ್ಗುಹಾರ್ಟ್ ಹಾಗೂ ಕೆಮರೂನ್ ಪಿಲೆ ವಿರುದ್ಧ 8-11, 10-11ರಲ್ಲಿ ಸೋಲು ಕಂಡು, ಮಿಶ್ರ ಡಬಲ್ಸ್ ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.

ಒಟ್ಟಾರೆ, 66 ಪದಕಗಳನ್ನು ಗಳಿಸಿ ಪದಕ ಪಟ್ಟಿಯಲ್ಲಿ ಸದ್ಯ 3ನೇ ಸ್ಥಾನದಲ್ಲಿದೆ. ಭಾರತ ಇದುವರೆಗೂ ಒಟ್ಟು 26 ಚಿನ್ನ, 20 ಬೆಳ್ಳಿ ಹಾಗೂ 20 ಕಂಚು ಪದಕಗಳನ್ನು ಗೆದ್ದುಕೊಂಡಿದೆ.

Story first published: Sunday, April 15, 2018, 12:40 [IST]
Other articles published on Apr 15, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ