ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಾಮನ್ ವೆಲ್ತ್ ಬಂಗಾರ ವಿಜೇತ ಅಥ್ಲೀಟ್ ವಿಕಾಸ್ ಗೌಡ ನಿವೃತ್ತಿ

CWG gold medallist discus thrower Vikas Gowda retires

ನವದೆಹಲಿ, ಮೇ 30: ಕಾಮನ್ ವೆಲ್ತ್ ಗೇಮ್ಸ್ ನ ಪುರುಷರ ಡಿಸ್ಕಸ್ ಥ್ರೋ ನಲ್ಲಿ ಬಂಗಾರ ಗೆದ್ದ ಮೊದಲ ಮತ್ತು ಏಕಮಾತ್ರ ಭಾರತೀಯ ಕೀರ್ತಿಗೆ ಪಾತ್ರರಾಗಿದ್ದ ಅಥ್ಲೀಟ್ ವಿಕಾಸ್ ಗೌಡ ಅವರು ಬುಧವಾರ ನಿವೃತ್ತಿ ಘೋಷಿಸಿದ್ದಾರೆ.

ಕ್ರೀಡಾರಂಗದಲ್ಲಿ ಸುಮಾರು 15 ವರ್ಷಗಳ ಕಾಲ ಶ್ರಮಿಸಿರುವ ವಿಕಾಸ್ ಕ್ರೀಡಾ ಸಾಧನೆಗಾಗಿ 2017ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಒಲಿಂಪಿಕ್ಸ್ ನಲ್ಲಿ ನಾಲ್ಕು ಬಾರಿ ದೇಶವನ್ನು ಪ್ರತಿನಿಧಿಸಿರುವ 34ರ ಹರೆಯದ ವಿಕಾಸ್ ನಿವೃತ್ತಿ ನಿರ್ಧಾರ ಅಭಿಮಾನಿಗಳಲ್ಲಿ ಅಚ್ಚರಿ ತಂದಿದೆ.

ವಿಕಾಸ್ ವಿವೃತ್ತಿ ಘೋಷಿಸಿರುವುದನ್ನು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ತಿಳಿಸಿದೆ. ಎ.ಎಫ್.ಐ. ತನ್ನ ಟ್ವಿಟರ್ ಪೇಜ್ ನಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದೆ.

ಮೈಸೂರು ಮೂಲದ ವಿಕಾಸ್ 6ರ ಹರೆಯದವರಿದ್ದಾಗಲೇ ಅಮೆರಿಕಾದ ಮೇರಿಲ್ಯಾಂಡ್ ಗೆ ತೆರಳಿದ್ದರು. ವಿಕಾಸ್ ತಂದೆ ಶಿವೆ ಅವರೂ ಮಾಜಿ ಕ್ರೀಡಾಪಟುವೆ. ಜೊತೆಗೆ 1988ರ ಒಲಿಂಪಿಕ್ಸ್ ವೇಳೆ ರಾಷ್ಟ್ರೀಯ ತರಬೇತುದಾರರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಡಿಸ್ಕಸ್ ಥ್ರೋನಲ್ಲಿ 66.28ಮೀ. ಸಾಧನೆ ಮೂಲಕ 2012ರಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ವಿಕಾಸ್ ಭಾರತೀಯ ಅಗ್ರ ಕ್ರೀಡಾಪಟುಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. 2013 ಮತ್ತು 2015ರ ಏಷ್ಯಾನ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು.

ಜೊತೆಗೆ 2010ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ, 2014ರ ಗ್ಲಾಸ್ಗೋ ಗೇಮ್ಸ್ ನಲ್ಲಿ ಚಿನ್ನ ಜಯಿಸಿದ ಸಾಧನೆ ಮಾಡಿದ್ದರಲ್ಲದೆ 2010 ಏಷ್ಯಾನ್ ಗೇಮ್ಸ್ ನಲ್ಲಿ ಕಂಚು, 2014ರಲ್ಲಿ ವಿಕಾಸ್ ಬೆಳ್ಳಿ ಗೆದ್ದಿದ್ದರು.

2012ರ ಲಂಡನ್ ಒಲಿಂಪಿಕ್ಸ್ ಗೇಮ್ಸ್ ನಲ್ಲಿ ಫೈನಲ್ ಪ್ರವೇಶಿಸಿದ್ದು ಬಿಟ್ಟರೆ, ವಿಕಾಸ್ 2004, 2008, 2012 ಮತ್ತು 2016ರ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದು ಮಾತ್ರ. ಇತ್ತೀಚೆಗೆ ವಿಕಾಸ್ ಡಿಸ್ಕಸ್ ಥ್ರೋನಲ್ಲಿ ಹಿನ್ನಡೆ ಕಂಡಿದ್ದರು. ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ನಲ್ಲೂ ವಿಕಾಸ್ ಸಾಧನೆ ತೋರಿರಲಿಲ್ಲ. ಹೀಗಾಗಿಯೇ ವಿಕಾಸ್ ನಿವೃತ್ತಿಯ ನಿರ್ಧಾರಕ್ಕೆ ಬಂದಿರಬಹುದು ಎಂಬ ಮಾತುಗಳು ಕ್ರೀಡಾವಲಯದಲ್ಲಿ ಕೇಳಿಬರುತ್ತಿವೆ.

Story first published: Wednesday, May 30, 2018, 22:48 [IST]
Other articles published on May 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X