ಕಾಮನ್‌ವೆಲ್ತ್‌ನಲ್ಲಿ ಇಂದು ಏನೇನಾಯಿತು, ಚಿತ್ರಗಳೊಂದಿಗೆ..

Posted By:

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ನಲ್ಲಿ ಭಾರತದ ಕ್ರೀಡಾಳುಗಳು ಪದಕ ಬೇಟೆ ಮುಂದುವರೆಸಿದ್ದಾರೆ. ಈವರೆಗೆ ಕ್ರೀಡಾಕೂಟದಲ್ಲಿ ಈವರೆಗೆ 57 ಪದಕಗಳನ್ನು ಗೆದ್ದು, ಮೂರನೇ ಸ್ಥಾನದಲ್ಲಿದೆ.

ನಾಳೆ (ಏಪ್ರಿಲ್ 15)ಕ್ಕೆ ಕ್ರೀಡಾಕೂಟ ಮುಗಿಯುತ್ತಿದ್ದು, ಈವರೆಗೆ ಭಾರತವು 25 ಚಿನ್ನ, 14 ಬೆಳ್ಳಿ ಮತ್ತು 18 ಕಂಚಿನ ಪದಕವನ್ನು ತನ್ನ ಕೊರಳಿಗೆ ಧರಿಸಿಕೊಂಡಿದೆ.

ಕ್ರೀಡಾಕೂಟದಲ್ಲಿ ಇನ್ನೂ ಒಂದು ದಿನ ಬಾಕಿ ಇದ್ದು, ಬ್ಯಾಡ್‌ಮಿಂಟನ್ ಸೇರಿದಂತೆ ಇನ್ನೂ ಕೆಲವು ಪ್ರಮುಖ ಪಂದ್ಯಗಳು ನಾಳೆ ನಡೆಯಲಿದ್ದು, ಇನ್ನಷ್ಟು ಪದಕಗಳು ಭಾರತದ ಪಾಲಾಗುವ ಸಾಧ್ಯತೆ ಇದೆ. ಬ್ಯಾಡ್‌ಮಿಂಟನ್‌ನಲ್ಲಿ ಈಗಾಗಲೇ ಮೂರು ಪದಕಗಳು ಖಚಿತವಾಗಿವೆ.

ಇಂದು (ಏಪ್ರಿಲ್ 14) ಗೆದ್ದವರ ಬಿದ್ದವರ ಕತೆಗಳನ್ನು ಚಿತ್ರಗಳ ಮೂಲಕ ಕಾಣಲು ಮುಂದೆ ಓದಿರಿ...

ವಿನೇಶ್ ಪೊಗಾಟ್

ವಿನೇಶ್ ಪೊಗಾಟ್

ಭಾರತದ ಅತ್ಯುತ್ತಮ ಕುಸ್ತಿಪಟುಗಳ ಕುಟುಂಬ ಪೋಗಟ್‌ನ ಕುಡಿ ವಿನೀಶ್ ಫೋಗಟ್‌ ಅವರು ಇಂದು ಮಹಿಳಾ 50 ಕೆಜಿ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದರು. ಅವರ ಕುಸ್ತಿಯ ಅಬ್ಬರ ಹೇಗಿತ್ತೆಂದರೆ ಎದುರಾಳಿ ಆಟಗಾರ್ತಿಯನ್ನು ಅಕ್ಷರಶಃ ಎತ್ತಿ ಹೆಗಲ ಮೇಲೆ ಹಾಕಿಕೊಂಡು ನೆಲಕ್ಕೆ ಕೆಡವಿ ಚಿನ್ನ ಗೆದ್ದರು. ಏನೇ ಆಗ್ಲಿ ಹೆಣ್‌ ಮಕ್ಳೆ ಸ್ಟ್ರಾಂಗು ಗುರು.

ಮೇರೆ ಕೋಮ್ ಸವಾರಿ

ಮೇರೆ ಕೋಮ್ ಸವಾರಿ

ವಿಶ್ವ ಚಾಂಪಿಯನ್ ಮಹಿಳಾ ಬಾಕ್ಸರ್ ಭಾರತದ ಮೇರಿ ಕೋಮ್ ಇಂದು ಕಾಮನ್‌ವೆಲ್ತ್‌ ಮಹಿಳಾ ಬಾಕ್ಸಿಂಗ್ 45-48 ಕೆಜಿ ವಿಭಾಗದಲ್ಲಿ ಚಿನ್ನಕ್ಕೆ ಮುತ್ತಿಟ್ಟರು. ಫೈನಲ್‌ ಗೆದ್ದ ಕೂಡಲೇ ಮೇರಿ ಕೋಮ್‌ನ ಕೋಚ್ ಅವರನ್ನು ಭುಜದ ಮೇಲೆ ಹೊತ್ತು ಕುಣಿದಾಡಿದರು.

ಚಿನ್ನ ಗೆದ್ದ ಸುಮಿತ್‌

ಚಿನ್ನ ಗೆದ್ದ ಸುಮಿತ್‌

125 ಕೆಜಿ ಪುರುಷರ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಬಲ ಭೀಮ ಸುಮಿತ್ ಎದುರಾಳಿಯನ್ನು ಮಣ್ಣು ಮುಕ್ಕಿಸಿ ಚಿನ್ನ ಗೆದ್ದರು. ಗೆದ್ದ ಕೂಡಲೇ ಭಾರತ ಧ್ವಜವನ್ನು ಹೆಗಲಿಗೆ ಏರಿಸಿಕೊಂಡು ಕುಸ್ತಿ ಅಂಗಳದಲ್ಲೆಲ್ಲಾ ಓಡಾಡಿ ಸಂತಸ ವ್ಯಕ್ತಪಡಿಸಿದರು.

ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲ

ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲ

ಮಹಿಳಾ ಕುಸ್ತಿ ವಿಭಾಗದಲ್ಲಿ ಬಹು ನಿರೀಕ್ಷೆ ಹುಟ್ಟಿಸಿದ್ದ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸಾಕ್ಷಿ ಮಲ್ಲಿಕ್ ಕಾಮನ್‌ವೆಲ್ತ್‌ನಲ್ಲಿ ನಿರಾಸೆ ಮೂಡಿಸಿದರು. ಇಂದು ಅವರಿಗೆ ಕಂಚು ಮಾತ್ರವೇ ಗೆಲ್ಲಲು ಸಾಧ್ಯವಾಯಿತು. ಪದಕ ಪ್ರದಾನ ಸಮಾರಂಭದಲ್ಲಿ ಸಾಕ್ಷಿ ಕಣ್ಣೀರು ಸುರಿಸಿದರು.

ಟೇಬಲ್‌ ಟೆನ್ನಿಸ್‌ನಲ್ಲಿ ಬೆಳ್ಳಿ ಮಿಂಚು

ಟೇಬಲ್‌ ಟೆನ್ನಿಸ್‌ನಲ್ಲಿ ಬೆಳ್ಳಿ ಮಿಂಚು

ಟೇಬಲ್ ಟೆನ್ನಿಸ್‌ನಲ್ಲಿ ಈಗಾಗಲೇ ಎರಡು ಚಿನ್ನ ಗೆದ್ದಿರುವ ಭಾರತದ ಆಟಗಾರರು ಇಂದು ಮತ್ತೊಂದು ಪದಕವನ್ನು ಭಾರತದ ಪಾಲಿಗೆ ತಂದಿತ್ತರು. ಟೇಬಲ್ ಟೆನ್ನಿಸ್ ಡಬಲ್ಸ್ ವಿಭಾಗದಲ್ಲಿ ಭಾರತದ ಹೆಂಗೆಳೆಯರಾದ ಮಂಕಿತಾ ಬಾತ್ರಾ ಮತ್ತು ಎಂ.ದಾಸ್ ಬೆಳ್ಳಿ ಪದಕ ಗೆದ್ದರು. ಪದಕ ಗೆದ್ದ ಸಂಭ್ರಮ ವ್ಯಕ್ತಪಡಿಸಿದ್ದು ಹೀಗೆ.

ಕುಸ್ತಿಯಲ್ಲಿ ಮತ್ತೊಂದು ಚಿನ್ನ

ಕುಸ್ತಿಯಲ್ಲಿ ಮತ್ತೊಂದು ಚಿನ್ನ

ಪುರುಷರ 65 ಕೆಜಿ ವಿಭಾಗದ ಸ್ಪರ್ಧಿಸಿದ್ದ ಕುಸ್ತಿ ಪಟು ಭಜರಂಗ್ ಅವರು ಚಿನ್ನ ಗೆದ್ದರು. ನೋಡಲು ಅಷ್ಟೇನು ದಪ್ಪ ಅಲ್ಲದಿದ್ದರೂ ತಮ್ಮ ಬುದ್ಧಿ ಬಲದಿಂದ ಎದುರಾಳಿಗೆ ಪಟ್ಟುಗಳನ್ನು ಹಾಕಿ ನೆಲಕ್ಕೆ ಕೆಡವಿ ಚಿನ್ನ ಗೆದ್ದರು. ಕುಸ್ತಿಯಲ್ಲಿ ಪುರುಷ, ಮಹಿಳಾ ವಿಭಾಗ ಸೇರಿದರೆ ಇಂದು ಗೆದ್ದಿದ್ದು 3 ಚಿನ್ನ ಒಂದು ಕಂಚು. ಭಾರತದ ಕುಸ್ತಿಪಟುಗಳು ಅಖಾಡಕ್ಕಿಳಿದರೆ ಚಿನ್ನ.

ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಸಾಧನೆ

ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಸಾಧನೆ

58 ವರ್ಷಗಳಿಂದ ಕಾಮನ್‌ವೆಲ್ತ್‌ನ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಭಾರತ ಚಿನ್ನವೇ ಗೆದ್ದಿರಲಿಲ್ಲ. ಇಂದು ಆ ಕೊರಗನ್ನು ನೀರಜ್ ಚೋಪ್ರಾ ನೀಗಿಸಿದರು. ಜಾವೆಲಿನ್ ಎಸೆತದಲ್ಲಿ ಭಾಗವಹಿಸಿದ್ದ ಅವರು 86.70 ಮೀಟರ್ ದೂರ ಎಸೆಯುವ ಮೂಲಕ ಚಿನ್ನವನ್ನು ಕೊರಳಿಗೇರಿಸಿಕೊಂಡರು. ಈ ಸ್ಪುರದ್ರೂಪಿ ಯುವಕ ನೀರಜ್‌ಗೆ ಇದು ಮೊದಲ ಕಾಮನ್‌ವೆಲ್ತ್‌, ಮೊದಲ ಕ್ರೀಡಾಕೂಟದಲ್ಲೇ ಚಿನ್ನದ ಸಾಧನೆ ಮಾಡಿದ್ದಾನೆ ಈ ಚಿನ್ನದ ಹುಡುಗ.

ಶೂಟಿಂಗ್‌ನಲ್ಲಿ ಉತ್ತಮ ಸಾಧನೆ

ಶೂಟಿಂಗ್‌ನಲ್ಲಿ ಉತ್ತಮ ಸಾಧನೆ

ಈ ಬಾರಿಯ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ವ್ಹೇಟ್‌ಲಿಫ್ಟಿಂಗ್ ಆದ ಬಳಿಕ ಅತಿ ಹೆಚ್ಚು ಪದಕ ಗಳಿಸಿದ್ದ ಶೂಟಿಂಗ್. ಇಂದು ಕೂಡಾ ಸಂಜೀವ್ ರಜಪೂತ್ ಅವರು 50 ಮೀಟರ್‌ 3ಪಿ ರೈಫಲ್‌ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನಕ್ಕೆ ಗುರಿ ಇಟ್ಟರು.

ಬಾಕ್ಸಿಂಗ್‌ನಲ್ಲಿ ಮತ್ತೊಂದು ಚಿನ್ನ

ಬಾಕ್ಸಿಂಗ್‌ನಲ್ಲಿ ಮತ್ತೊಂದು ಚಿನ್ನ

ಗೌರವ್ ಸೋಲಂಕಿ ಅವರು ಪುರುಷರ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟರು. ಪುರುಷರ 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಗೌರವ್ ಸೋಲಂಕಿ ಅವರು ತಮ್ಮ ಚಾಕಚಕ್ಯತೆ ಆಟದಿಂದ ಎದುರಾಳಿಯನ್ನು ಗುದ್ದಿ ಕೆಡವಿದರು.

Story first published: Saturday, April 14, 2018, 17:50 [IST]
Other articles published on Apr 14, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ