ಭಾರತಕ್ಕೆ ಮತ್ತೊಂದು ಚಿನ್ನ ಗೆದ್ದುಕೊಟ್ಟ ವ್ಹೇಟ್‌ಲಿಫ್ಟರ್‌ ಸತೀಶ್‌ ಕುಮಾರ್‌

Posted By:
India won an another gold in weight lifting in commonwealth games 2018

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ 2018ರಲ್ಲಿ ಭಾರತೀಯ ವ್ಹೇಟ್‌ಲಿಫ್ಟರ್‌ಗಳ ಪದಕ ಬೇಟೆ ಮುಂದುವರೆದಿದೆ.

ಕಾಮನ್ ವೆಲ್ತ್ ಪಂದ್ಯ: ಚಿನ್ನ ಗೆದ್ದ ವ್ಹೇಟ್ ಲಿಫ್ಟರ್ ಸಂಜಿತಾ ಚಾನು

ಪುರುಷರ 77 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸತೀಶ್‌ಕುಮಾರ್ ಶಿವಲಿಂಗಮ್ ಅವರು 317 ಕೆಜಿ ಭಾರ ಎತ್ತುವ ಮೂಲಕ ಭಾರತಕ್ಕೆ ಮೂರನೇ ಪದಕ ತಂದಿತ್ತರು. ಅವರು 144 ಕೆಜಿ ಸ್ನಾಚ್‌ನಲ್ಲಿ ಮತ್ತು 173 ಕೆಜಿ ಕ್ಲೀನ್ ಮತ್ತು ಜರ್ಕ್‌ ವಿಭಾಗದಲ್ಲಿ ಎತ್ತಿ ಚಿನ್ನಕ್ಕೆ ಮುತ್ತಿಟ್ಟರು. 2014ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿಯೂ ಸತೀಶ್ ಅವರು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.

ಭಾರತಕ್ಕೆ ಮೊದಲ ಚಿನ್ನ ತಂದಿತ್ತ ಮೀರಾಬಾಯಿ ಚಾನು

ಕ್ರೀಡಾಕೂಟದಲ್ಲಿ ಭಾರತ ಈವರೆಗೆ 5 ಪದಕ ಗಳಿಸಿದ್ದು, ಐದೂ ಪದಕಗಳು ವ್ಹೇಟ್‌ಲಿಫ್ಟಿಂಗ್‌ನಲ್ಲೇ ಬಂದಿರುವುದು ವಿಶೇಷ. ಸತೀಶ್‌ ಕುಮಾರ್ ಅವರ ಪದಕದಿಂದ ಭಾರತದ ಮೂರು ಚಿನ್ನದ ಪದಕದ ಗೆದ್ದಂತಾಗಿದ್ದು, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ತನ್ನದಾಗಿಸಿಕೊಂಡಿದೆ.

ಕಾಮನ್‌ವೆಲ್ತ್‌: ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಕುಂದಾಪುರದ ಗುರುರಾಜ್

25 ವರ್ಷದ ಸತೀಶ್‌ ಕುಮಾರ್ ಶಿವಲಿಂಗಮ್ ತಮಿಳುನಾಡಿಮನ, ವೆಲ್ಲೂರು ಸಮೀಪದ ಸತ್ತುವಚಾರಿ ಗ್ರಾಮದವರು. ಅವರ ತಂದೆ ವಿಐಟಿ ವಿವಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರೂ ಕೂಡ ರಾಷ್ಟ್ರ ಮಟ್ಟದ ಕ್ರೀಡಾಳುವಾಗಿದ್ದರು.

Story first published: Saturday, April 7, 2018, 9:48 [IST]
Other articles published on Apr 7, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ