ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಭಾರತದ ಸ್ವಿಮ್ಮರ್ ಶ್ರೀಹರಿ ನಟರಾಜ್‌ಗೆ ಟೋಕಿಯೋ ಒಲಿಂಪಿಕ್ಸ್ ಟಿಕೆಟ್

Indian swimmer Srihari Nataraj qualifies for Tokyo Olympics

ನವದೆಹಲಿ: ಭಾರತದ ಸ್ವಿಮ್ಮರ್ ಶ್ರೀಹರಿ ನಟರಾಜ್‌ಗೆ 2021ರ ಟೋಕಿಯೋ ಒಲಿಂಪಿಕ್ಸ್‌ ಟಿಕೆಟ್ ಲಭಿಸಿದೆ. ವಿಶ್ವ ಈಜು ಕ್ರೀಡಾ ಆಡಳಿತ ಮಂಡಳಿ ಫಿನಾ ಶ್ರೀಹರಿಗೆ ಎ ಪ್ರಮಾಣಿತ ಪ್ರಮಾಣ ಪತ್ರ ನೀಡಿರುವುದರಿಂದ ಅವರಿನ್ನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ.

ಟಿ20 ವಿಶ್ವಕಪ್‌ ತಾಣ, ಆರಂಭ-ಅಂತ್ಯದ ದಿನಾಂಕ ಅಧಿಕೃತ ಘೋಷಣೆ!ಟಿ20 ವಿಶ್ವಕಪ್‌ ತಾಣ, ಆರಂಭ-ಅಂತ್ಯದ ದಿನಾಂಕ ಅಧಿಕೃತ ಘೋಷಣೆ!

ರೋಮ್‌ನಲ್ಲಿ ನಡೆದ ಸೆಟ್ ಕೊಲ್ಲಿ ಟ್ರೋಫಿ ಪುರುಷರ ಅರ್ಹತಾ ಸ್ಪರ್ಧೆಯಲ್ಲಿ 100 ಮೀ. ಬ್ಯಾಕ್‌ಸ್ಟ್ರೋಕ್ ನಲ್ಲಿ ಶ್ರೀಹರಿ ನಟರಾಜ್ ಉತ್ತಮ ಸಾಧನೆ ತೋರಿದ್ದರು. ಒಲಿಂಪಿಕ್ಸ್‌ಗೆ ಅರ್ಹವೆನಿಸುವ 53.77 ಸೆಕೆಂಡ್ ವೇಗದಲ್ಲಿ 100 ಮೀಟರ್ ದೂರ ಈಜಿದ್ದರು. ಹೀಗಾಗಿ ಶ್ರೀಹರಿ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿರುವ ಸಜನ್ ಪ್ರಕಾಶ್ ಜೊತೆಗೆ ಶ್ರೀಹರಿ ಸೇರಿಕೊಳ್ಳಲಿದ್ದಾರೆ. ನಟರಾಜ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿರುವುದನ್ನು ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಟ್ವೀಟ್ ಮೂಲಕ ತಿಳಿಸಿದೆ.

55 ವರ್ಷಗಳ ಬಳಿಕ ಜರ್ಮನಿ ವಿರುದ್ಧ ಮುಯ್ಯಿ ತೀರಿಸಿಕೊಂಡ ಇಂಗ್ಲೆಂಡ್55 ವರ್ಷಗಳ ಬಳಿಕ ಜರ್ಮನಿ ವಿರುದ್ಧ ಮುಯ್ಯಿ ತೀರಿಸಿಕೊಂಡ ಇಂಗ್ಲೆಂಡ್

ಜಪಾನ್‌ನ ಟೋಕಿಯೋದಲ್ಲಿ ಜುಲೈ 23ರಿಂದ ಆಗಸ್ಟ್ 8ರ ವರೆಗೆ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ. ಅಸಲಿಗೆ 2020ರಲ್ಲಿ ನಡೆಯಬೇಕಿದ್ದ ಈ ಕ್ರೀಡಾಕೂಟ ಕೋವಿಡ್-19 ಕಾರಣದಿಂದ ಒಂದು ವರ್ಷ ತಡವಾಗಿ ನಡೆಯಲಿದೆ.

Story first published: Wednesday, June 30, 2021, 11:46 [IST]
Other articles published on Jun 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X