ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಡಬ್ಲ್ಯೂಎಫ್‌ಐಗೆ ಕ್ಷಮೆ ಕೇಳಿದ ಭಾರತದ ಸ್ಟಾರ್ ರಸ್ಲರ್ ವಿನೇಶ್ ಫೋಗಟ್

Indian Wrestler Vinesh Phogat sends apology to WFI

ನವದೆಹಲಿ: ಭಾರತದ ಸ್ಟಾರ್ ರಸ್ಲರ್ ವಿನೇಶ್ ಫೋಗಟ್ ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯೂಎಫ್‌ಐ)ಗೆ ಕ್ಷಮೆ ಕೋರಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಿಯಮ ಮೀರಿ ವರ್ತಿಸಿದ್ದಕ್ಕಾಗಿ ವಿನೇಶ್‌ ಅವರು ಡಬ್ಲ್ಯೂಎಫ್‌ಐ ಕೆಂಗಣ್ಣಿಗೆ ಗುರಿಯಾಗಿದ್ದರು. ಪ್ರತಿಷ್ಠಿತ ಕ್ರೀಡಾಕೂಟದ ವೇಳೆ ದುರ್ನಡತೆ ತೋರಿದ್ದಕ್ಕಾಗಿ ವಿನೇಶ್ ಅವರು ದೇಶೀಯ ಮತ್ತು ವಿದೇಶಿಯ ಯಾವುದೇ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳದಂತೆ ಡಬ್ಲ್ಯೂಎಫ್‌ಐ ನಿರ್ಬಂಧ ಹೇರಿತ್ತು.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಾಲು ಮುರಿದುಕೊಳ್ಳುವುದರಲ್ಲಿದ್ದರು ಭಜರಂಗ್ ಪೂನಿಯಾ!ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಾಲು ಮುರಿದುಕೊಳ್ಳುವುದರಲ್ಲಿದ್ದರು ಭಜರಂಗ್ ಪೂನಿಯಾ!

ಟೋಕಿಯೋದಲ್ಲಿನ ತನ್ನ ತಪ್ಪಿಗೆ ಕ್ಷಮೆ ಯಾಚಿಸಿ ವಿನೇಶ್ ಫೋಗಟ್ ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾಕ್ಕೆ ಪತ್ರ ಬರೆದಿದ್ದಾರೆ. ಆದರೆ ವರ್ಲ್ಡ್ ರಸ್ಲಿಂಗ್‌ ಫೆಡರೇಶನ್‌ ಇನ್ನೂ ಕೂಡ ವಿನೇಶ್‌ಗೆ ಅನುಮತಿ ನೀಡುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾದರೆ ಮುಂಬರಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವಿನೇಶ್ ಪಾಲ್ಗೊಳ್ಳಲಾಗುವುದಿಲ್ಲ.

ಪ್ರತಿಷ್ಠಿತ ಕ್ರೀಡಾಕೂಟದ ವೇಳೆ ಅಶಿಸ್ತು ತೋರಿದ್ದ ವಿನೇಶ್
ಟೋಕಿಯೋ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ವಿನೇಶ್ ಆಘಾತ ರೀತಿಯಲ್ಲಿ ಸೋತು ಕ್ರೀಡಾಕೂಟದಿಂದ ಹೊರ ನಡೆದಿದ್ದರು. ಒಲಿಂಪಿಕ್ಸ್ ಸ್ಪರ್ಧೆಯ ವೇಳೆ ವಿನೇಶ್ ಭಾರತೀಯ ತಂಡದ ಜೊತೆಗೆ ತಂಗಿರಲಿಲ್ಲ, ಭಾರತ ತಂಡದ ಜೊತೆಗೂ ಅಭ್ಯಾಸ ನಡೆಸಿರಲಿಲ್ಲ. ಹೀಗಾಗಿ ವಿನೇಶ್ ಅವರನ್ನು ಡಬ್ಲ್ಯೂಎಫ್‌ಐ ಅಮಾನತುಗೊಳಿಸಿತ್ತು. ವಿನೇಶ್ ಅವರನ್ನು ಪ್ರಮುಖ ಎಲ್ಲಾ ಸ್ಪರ್ಧೆಗಳಿಂದ ನಿರ್ಬಂಧಗೊಳಿಸಿದ್ದ ಡಬ್ಲ್ಯೂಎಫ್‌ಐ, ಒಲಿಂಪಿಕ್ಸ್‌ ವೇಳೆ ಹಾಗೆ ವರ್ತಿಸಿದ್ದಕ್ಕೆ ವಿನೇಶ್ ಅವರಲ್ಲಿ ಉತ್ತರಿಸಲು ಕೇಳಿತ್ತು. ಅದರಂತೆ ವಿನೇಶ್ ತನ್ನ ನಡೆಗೆ ಉತ್ತರಿಸಿ ಪತ್ರ ಬರೆದಿದ್ದಾರೆ. 'ವಿನೇಶ್ ಅವರ ಪ್ರತಿಕ್ರಿಯೆಯನ್ನು ಡಬ್ಲ್ಯೂಎಫ್‌ಐ ಸ್ವೀಕರಿಸಿದೆ. ಫೋಗಟ್ ಕ್ಷಮೆ ಕೋರಿದ್ದಾರೆ," ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.

ಭಾರತ vs ಇಂಗ್ಲೆಂಡ್: ಜೋ ರೂಟ್ ಅಜೇಯ ಶತಕ, ಇಂಗ್ಲೆಂಡ್‌ಗೆ ಮುನ್ನಡೆಭಾರತ vs ಇಂಗ್ಲೆಂಡ್: ಜೋ ರೂಟ್ ಅಜೇಯ ಶತಕ, ಇಂಗ್ಲೆಂಡ್‌ಗೆ ಮುನ್ನಡೆ

ಫಾಲ್ ಔಟ್ ಮೂಲಕ ಪಂದ್ಯದಲ್ಲಿ ಸೋಲು
ಟೋಕಿಯೋ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದ ವಿನೇಶ್‌ಗೆ ಪ್ರತಿಷ್ಠಿತ ಕ್ರೀಡಾಕೂಟದ ವೇಳೆ ಅಶಿಸ್ತು ತೋರಿದ್ದಕ್ಕಾಗಿ ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದ ಡಬ್ಲ್ಯೂಎಫ್‌ಐ ಆಗಸ್ಟ್ 16ವರೆಗೆ ಉತ್ತರಿಸಲು ಕಾಲಾವಕಾಶ ನೀಡಿತ್ತು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ವಿನೇಶ್ ಅವರು ಫಾಲ್ ಔಟ್ ಮೂಲಕ ಕ್ವಾರ್ಟರ್ ಫೈನಲ್ ಪಂದ್ಯ ಸೋತಿದ್ದರು. ರಸ್ಲಿಂಗ್‌ನಲ್ಲಿ ಫಾಲ್ ಮೂಲಕ ಔಟಾಗುವುದೆಂದರೆ, ಸ್ಪರ್ಧಿಯೊಬ್ಬ ತನ್ನ ಎದುರಾಳಿಯ ಎರಡೂ ಭುಜಗಳನ್ನು ಮ್ಯಾಟ್‌ಗೆ ಒತ್ತಿ ಹಿಡಿದು ಮಿಸುಕಾಡದಂತೆ ತಡೆಯುತ್ತಾನೆ. ಆಗ ಮ್ಯಾಚ್ ರೆಫರೀ ಮ್ಯಾಟ್‌ಗೆ ಕೈ ಬಡಿಯುವ ಮೂಲಕ ಲಾಕ್ ಮಾಡಿದ ಆಟಗಾರನನ್ನು ವಿಜೇತರೆಂದು ಘೋಷಿಸುತ್ತಾರೆ. ಟೋಕಿಯೋ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ವಿನೇಶ್ ಕೂಡ ಫಾಲ್ ವಿಧಾನದ ಮೂಲಕ ಪಂದ್ಯ ಸೋತಿದ್ದರಿಂದ ವಿನೇಶ್ ಪದಕ ಗೆಲ್ಲಲಿದ್ದಾರೆ ಎನ್ನೋ ಭರವಸೆ ಮುರಿದು ಬಿದ್ದಿತ್ತು.

ಐಪಿಎಲ್ 2021 ದ್ವಿತೀಯ ಹಂತದ ಪಂದ್ಯಗಳಿಗೆ ಅಭಿಮಾನಿಗಳಿಗೆ ಸ್ಟೇಡಿಯಂಗೆ ಪ್ರವೇಶ?!ಐಪಿಎಲ್ 2021 ದ್ವಿತೀಯ ಹಂತದ ಪಂದ್ಯಗಳಿಗೆ ಅಭಿಮಾನಿಗಳಿಗೆ ಸ್ಟೇಡಿಯಂಗೆ ಪ್ರವೇಶ?!

ಎಲ್ಲೆ ಮೀರಿದ ವರ್ತನೆ ತೋರಿದ್ದ ಫೋಗಟ್
ಹಂಗೆರಿಯಲ್ಲಿದ್ದ ಕೋಚ್ ವೋಲರ್ ಅಕೋಸ್ ಜೊತೆಗಿದ್ದು ಟೋಕಿಯೋ ಒಲಿಂಪಿಕ್ಸ್‌ಗೆ ಅಭ್ಯಾಸ ನಡೆಸಿದ್ದ ವಿನೇಶ್ ಫೋಗಟ್, ಟೋಕಿಯೋ ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ನಿಲ್ಲಲು ನಿರಾಕರಿಸಿದ್ದರು. ಜೊತೆಗೆ ಬೇರೆ ಭಾರತೀಯ ತಂಡದ ಜೊತೆಗೆ ಅಭ್ಯಾಸ ನಡೆಸಿದ್ದರು. ಅಷ್ಟೇ ಅಲ್ಲ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಾಗ ಭಾರತೀಯ ತಂಡಕ್ಕೆ ಅಧಿಕೃತ ಪ್ರಾಯೋಜಕತ್ವ ನೀಡಿದ್ದ ಶಿವ್‌ ನರೇಶ್ ದಿರಿಸು ಧರಿಸಿರಲಿಲ್ಲ, ಬದಲಿಗೆ ನೈಕ್ ಕಂಪನಿಯ ದಿರಿಸು ಧರಿಸಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ವಿನೇಶ್‌ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಕೂಡ ಫೋಗಟ್ ಅವರನ್ನು ವಿಚಾರಿಸಲು ಡಬ್ಲ್ಯೂಎಫ್‌ಐ ಜೊತೆ ಹೇಳಿತ್ತು. ಹೀಗಾಗಿ ವಿನೇಶ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ವಿನೇಶ್ ಈಗ ಕ್ಷಮೆ ಕೇಳಿದ್ದರೂ ಅವರಿಗೆ ಮುಂದೆ ಸ್ಪರ್ಧೆಗೆ ಅವಕಾಶ ಮಾಡಿಕೊಡುವುದು ಅನುಮಾನವಾಗಿದೆ. ಅಂದ್ಹಾಗೆ ಒಲಿಂಪಿಕ್ಸ್ ವೇಳೆ ತಾನು ಹಾಗೆ ವರ್ತಿಸಲು ಕಾರಣ ತನ್ನ ವೈಯಕ್ತಿಕ ಫಿಸಿಯೋಗೆ ಜೊತೆಗಿರಲು ಅವಕಾಶ ಕೊಡದಿದ್ದಕ್ಕೆ ತಾನು ಮಾನಸಿಕವಾಗಿ ನೊಂದಿದ್ದೆ ಎಂದು ವಿನೇಶ್ ಹೇಳಿಕೊಂಡಿದ್ದರು.

Story first published: Sunday, August 15, 2021, 0:57 [IST]
Other articles published on Aug 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X