ಮೌರ್ಯ ಸರ್ಕಲ್‌ನಲ್ಲಿ ಬೀದಿಗಿಳಿದ ತರಬೇತುದಾರರು: ಭಿಕ್ಷೆ ಬೇಡಿ ಸರ್ಕಾರದ ವಿರುದ್ಧ ಪ್ರತಿಭಟನೆ

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಕ್ರೀಡಾ ತರಬೇತುದಾರರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ಈ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ವಿವಿಧ ಬೇಡಿಕೆ ಹಾಗೂ ಗುತ್ತಿಗೆ ತಬೇತುದಾರರನ್ನು ಕರ್ತವ್ಯದಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ.

2019ರಲ್ಲಿ ಕರ್ನಾಟಕ ಕ್ರೀಡಾಪ್ರಾಧಿಕಾರ 73 ಕೋಚ್‌ಗಳನ್ನು ನೇಮಕಮಾಡಿಕೊಂಡಿತ್ತು. ಆದರೆ ಈಗ ಅವರಿಗೆ ವೇತನ ನೀಡಲು ಅವಶ್ಯಕವಾದ ಹಣವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವುದಾಗಿ ಪ್ರತಿಭಟನಾ ನಿರತರು ಹೇಳುತ್ತಿದ್ದು ಅದಕ್ಕಾಗಿ ನಾವು ಬಿಕ್ಷಾಟನೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಐಪಿಎಲ್ ಆಂತರಿಕ ಮಾಹಿತಿ ಪಡೆಯಲು ಭಾರತೀಯ ಆಟಗಾರನನ್ನು ಸಂಪರ್ಕಿಸಿದ್ದ ನರ್ಸ್

ಕ್ರೀಡಾ ಇಲಾಖೆಯ ಬಳಿ 73 ಮಂದಿ ಕೋಚ್‌ಗಳಿಗೆ ಸಂಬಳ ನೀಡಲು ಹಣವಿಲ್ಲ. ಹೀಗಾಗಿ ಇಲಾಖೆಗೆ ಸಂಪಾದನೆ ಮಾಡಿಕೊಡಲು ಬಿಕ್ಷೆ ಬೇಡುವುದಾಗಿ ಕೋಚ್ ಲಕ್ಷ್ಮೀಶ ಪ್ರತಿಭಟನೆಯ ಬಗ್ಗೆ ವಿವರಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಮತ್ತಷ್ಟು ವಿನೂತನವಾಗಿ ಪ್ರತಿಭಟನೆ ನಡೆಸುವುದಾಗಿಯೂ ಅವರು ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗಷ್ಟೇ ಇಲಾಖೆಯ ಆಯುಕ್ತರು 10 ದಿನಗಳ ಕಾಲಾವಕಾಶವನ್ನು ನೀಡಿ ಕೋಚ್‌ಗಳ ಸಮಸ್ಯೆಯನ್ನು ಭಗೆಹರಿಸುವುದಾಗಿ ಭರವಸೆಯನ್ನು ನೀಡಿದ್ದರು. ಈಗ 15 ದಿನಗಳಾದರೂ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಈ ಕೂಡಲೇ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ನಡೆಸುವುದಾಗಿ ಪ್ರತಿಭಟನಾ ನಿರತ ತರಬೇತುದಾರರು ಆಗ್ರಹಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, January 5, 2021, 13:14 [IST]
Other articles published on Jan 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X