ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಕಪ್ ಸೆಮಿಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದ ಭಾರತದ ಮಣಿಕಾ ಬಾತ್ರಾ

Manika Batra becomes the first Indian woman to enter the Asian Cup semifinals

ಭಾರತದ ಅನುಭವಿ ಟಿಟಿ ಆಟಗಾರ್ತಿ ಮಣಿಕಾ ಬಾತ್ರಾ ITTF-ATTU ಏಷ್ಯನ್ ಕಪ್‌ನ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ರೋಚಕ ಹೋರಾಟ ನಡೆಸಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗದ್ದಾರೆ. ಚೈನೀಸ್ ತೈಪೆಯ ಚೆನ್ ಸ್ಜು ಯು ಅವರನ್ನು ಕ್ವಾರ್ಟರ್‌‌ಫೈನಲ್‌ನಲ್ಲಿ 6-11, 11-6, 11-5, 11-7, 8-11, 9-11, 11-9 ಅಂತರದಲ್ಲಿ ಮಣಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಪ್ರಸ್ತುತ ವಿಶ್ವದ ನಂ.44 ಶ್ರೇಯಾಂಕಿತೆಯಾಗಿರುವ ಬಾತ್ರಾ ಟೂರ್ನಿಯ ಸೆಮಿಸ್‌ಗೆ ಅರ್ಹತೆ ಪಡೆದ ಏಕೈಕ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೇತನ್ ಬಾಬೂರ್ ನಂತರ ಚಾಂಪಿಯನ್‌ಶಿಪ್‌ನಲ್ಲಿ ಅಂತಿಮ ನಾಲ್ಕುರ ಘಟ್ಟವನ್ನು ತಲುಪಿದ ಎರಡನೇ ಭಾರತೀಯ ಪ್ಯಾಡ್ಲರ್ ಎನಿಸಿಕೊಂಡಿದ್ದಾರೆ ಮಣಿಕಾ ಬಾತ್ರಾ.

ಐಪಿಎಲ್ ಹರಾಜಿನ ಬಗ್ಗೆ ಪ್ರಸ್ತಾಪಿಸಿ ಆಸ್ಟ್ರೇಲಿಯಾ ಸ್ಟಾರ್ ಆಟಗಾರನಿಗೆ ಸ್ಲೆಡ್ಜ್ ಮಾಡಿದ ಜೋಸ್ ಬಟ್ಲರ್ಐಪಿಎಲ್ ಹರಾಜಿನ ಬಗ್ಗೆ ಪ್ರಸ್ತಾಪಿಸಿ ಆಸ್ಟ್ರೇಲಿಯಾ ಸ್ಟಾರ್ ಆಟಗಾರನಿಗೆ ಸ್ಲೆಡ್ಜ್ ಮಾಡಿದ ಜೋಸ್ ಬಟ್ಲರ್

ಕಳೆದ ಗುರುವಾರ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ 7ನೇ ಶ್ರೇಯಾಂಕಿತೆ ಚೆನ್ ಕ್ಸಿಂಗ್‌ಟಾಂಗ್‌ರನ್ನು ಸೋಲಿಸಿದ್ದ ಬಾತ್ರಾ ತಮ್ಮ ಗೆಲುವಿನ ಓಟವನ್ನು ಮುಂದುವರಿಸಿದ್ದಾರೆ. ಚೆನ್ ಕ್ಸಿಂಗ್‌ಟಾಂಗ್‌ರನ್ನು ಮಣಿಕಾ 8-11, 11-9, 11-6, 11-6, 9-11, 8-11, 11-9 ಅಂತರದಿಂದ ಸೋಲಿಸಿದ್ದಾರೆ. ಇದು ಮಣಿಕಾ ತಮ್ಮ ವೃತ್ತಿ ಜೀವನದಲ್ಲಿ ಚೀನೀ ಎದುರಾಳಿಯ ವಿರುದ್ಧದ ಮುರನೇ ಗೆಲುವಾಗಿದೆ. ಭಾರೀ ಗೆಲುವಿನ ಬಳಿಕ 27 ವರ್ಷದ ಮಣಿಕಾ ಮತ್ತಷ್ಟು ಛಲದ ಪ್ರದರ್ಶನದ ನೀಡುತ್ತಿದ್ದು ಗೆಲುವಿನ ಲಯವನ್ನು ಮುಂದುವರಿಸಲು ಯಶಸ್ವಿಯಾಗಿದ್ದಾರೆ.

ಇನ್ನು ಈ ಗೆಲುವಿನ ಬಳಿಕ ಮಣಿಕಾ ಬಾತ್ರಾ ಟ್ವಿಟ್ಟರ್‌ನಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದರು. "ವಿಶ್ವದ ನಂ. 7 ಆಟಗಾರ್ತಿಯ ವಿರುದ್ಧ ಟಿಟಿ ಏಷ್ಯಾ ಕಪ್‌ನಲ್ಲಿ ಗೆಲುವು ಸಾಧಿಸಿದ್ದು ಬಹಳ ಖುಷಿ ನೀಡಿದೆ. ನನ್ನ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸುತ್ತೇನೆ ಮತ್ತು ಮುಂದಿನ ಸುತ್ತುಗಳತ್ತ ನನ್ನ ಚಿತ್ತ ಹರಿಸುತ್ತೇನೆ. ಚೀನಾ ಎದುರಾಳಿಗಳ ವಿರುದ್ಧ ಇದು ನನ್ನ 3ನೇ ಗೆಲುವಾಗಿದೆ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಪ್ರೋತ್ಸಾಹಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು" ಎಂದು ಟ್ವಿಟ್ಟರ್‌ನಲ್ಲಿ ಹರ್ಷವನ್ನು ವ್ಯಕ್ತಪಡಿಸಿದ್ದರು ಮಣಿಕಾ ಬಾತ್ರಾ.

Story first published: Friday, November 18, 2022, 23:26 [IST]
Other articles published on Nov 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X