ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಡೈಮಂಡ್ ಲೀಗ್ ಟ್ರೋಫಿ ಗೆದ್ದ ಮೊದಲ ಭಾರತೀಯ ಎನ್ನುವ ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ ಮತ್ತೊಂದು ಇತಿಹಾಸ ಸೃಷ್ಟಿಸಿದ್ದಾರೆ. ಡೈಮಂಡ್ ಲೀಗ್ 2022 ರಲ್ಲಿ ಮೊದಲ ಸ್ಥಾನ ಪಡೆದಿರುವ ನೀರಜ್ ಚೋಪ್ರಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಜ್ಯೂರಿಚ್‌ನಲ್ಲಿ ನಡೆದ ಫೈನಲ್‌ನಲ್ಲಿ 88.44 ಮೀಟರ್‌ ಎಸೆಯುವ ಮೂಲಕ ಮೊದಲನೇ ಸ್ಥಾನ ಪಡೆದುಕೊಂಡರು.

ಜಾವೆಲಿನ್ ಸ್ಪರ್ಧೆಯಲ್ಲಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡುವ ಮೂಲಕ ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ 24 ವರ್ಷದ ನೀರಜ್ ಚೋಪ್ರಾ ಭಾಜನರಾಗಿದ್ದಾರೆ.

ಪಿವಿ ಸಿಂಧು, ಲಕ್ಷ್ಯ ಸೇನ್ ಸೇರಿ ಪದಕ ವಿಜೇತರಿಗೆ 1.5 ಕೋಟಿ ರುಪಾಯಿ ನಗದು ಬಹುಮಾನ ಘೋಷಣೆಪಿವಿ ಸಿಂಧು, ಲಕ್ಷ್ಯ ಸೇನ್ ಸೇರಿ ಪದಕ ವಿಜೇತರಿಗೆ 1.5 ಕೋಟಿ ರುಪಾಯಿ ನಗದು ಬಹುಮಾನ ಘೋಷಣೆ

ಡೈಮಂಡ್ ಲೀಗ್ ಫೈನಲ್‌ನಲ್ಲಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಜಾಕುಬ್ ವಡ್ಲೆಕ್ ಮತ್ತು ಜರ್ಮನಿಯ ಜೂಲಿಯನ್ ವೆಬರ್ ಅವರನ್ನು ಸೋಲಿಸುವ ಮೂಲಕ ಟ್ರೋಫಿಯನ್ನು ಗೆದ್ದುಕೊಂಡರು. ಜಾಕುಬ್ ವಡ್ಲೆಕ್ 86.94 ಮೀಟರ್ ಎಸೆಯುವ ಮೂಲಕ ಎರಡನೇ ಸ್ಥಾನವನ್ನು ಪಡೆದರು. ಜರ್ಮನಿಯ ಜೂಲಿಯನ್ ವೆಬರ್ 83.73 ಮೀಟರ್ ಎಸೆದು ಮೂರನೇ ಸ್ಥಾನ ಪಡೆದರು.

ವಡ್ಲೆಕ್ ತಮ್ಮ ಮೊದಲ ಎಸೆತದಲ್ಲಿ ಮುನ್ನಡೆ ಸಾಧಿಸಿದರು. ನೀರಜ್ ಅವರ ಮೊದಲ ಪ್ರಯತ್ನದಲ್ಲಿ 84.15 ಮೀಟರ್ ಎಸೆದು ಹಿನ್ನಡೆ ಅನುಭವಿಸಿದರು. ಎರಡನೇ ಪ್ರಯತ್ನದಲ್ಲಿ ತಮ್ಮ ಪ್ರದರ್ಶನ ಉತ್ತಮಪಡಿಸಿಕೊಂಡ ನೀರಜ್ ಚೋಪ್ರಾ 86 ಮೀಟರ್ ದೂರ ಎಸೆದರು. ತಮ್ಮ ಮೂರನೇ ಪ್ರಯತ್ನದಲ್ಲಿ 88 ಮೀಟರ್ ದೂರ ಜಾವೆಲಿನ್ ಎಸೆದರು, ಆದರೆ ವಡ್ಲೆಜ್ಚ್ ಸುತ್ತಿನಲ್ಲಿ ಫೌಲ್ ಥ್ರೋ ಹೊಂದಿದ್ದರು.

ಡೈಮಂಡ್ ಲೀಗ್ ಗೆದ್ದ ಮೊದಲ ಭಾರತೀಯ ಅಥ್ಲಿಟ್

ಡೈಮಂಡ್ ಲೀಗ್ ಗೆದ್ದ ಮೊದಲ ಭಾರತೀಯ ಅಥ್ಲಿಟ್

ವಡ್ಲೆಕ್ಜ್ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 86.94 ಮೀ ಎಸೆಯುವುದರೊಂದಿಗೆ ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಂಡರು, ಆದರೆ ನೀರಜ್ ಚೋಪ್ರಾ 86.11 ಮೀಟರ್ ಎಸೆದರು. ನೀರಜ್ ಐದನೇ ಪ್ರಯತ್ನದಲ್ಲಿ 87 ಮೀಟರ್ ಎಸೆದರು, ಮೊದಲ ಮೂರು ಎಸೆತಗಳಲ್ಲೇ ನೀರಜ್ ಚೋಪ್ರಾ ತಮ್ಮ ಮೊದಲ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದರು.

ಅಂತಿಮವಾಗಿ 83.60 ಮೀಟರ್ ಎಸೆದ ನೀರಜ್ ಚೋಪ್ರಾ, ಉಳಿದ ಸ್ಫರ್ಧಿಗಳನ್ನು ಹಿಂದಿಕ್ಕಿದರು. ಡೈಮಂಡ್ ಲೀಗ್‌ ಟ್ರೋಫಿ ಗೆದ್ದ ಮೊದಲ ಭಾರತೀಯ ಎನಿಸಿಕೊಂಡರು.

'ಕಿಂಗ್ ಈಸ್ ಬ್ಯಾಕ್‌' : ಸಾವಿರ ದಿನಗಳ ಕಾಯವಿಕೆ ಅಂತ್ಯ, ಶತಕ ದಾಖಲಿಸಿದ ವಿರಾಟ್ ಕೊಹ್ಲಿ

ಎರಡು ಬಾರಿ ಪ್ರಶಸ್ತಿ ಗೆಲ್ಲಲು ವಿಫಲ

ಎರಡು ಬಾರಿ ಪ್ರಶಸ್ತಿ ಗೆಲ್ಲಲು ವಿಫಲ

ನೀರಜ್ ಚೋಪ್ರಾ ಈ ಮೊದಲು 2017ರಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲಿ 7ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ದರು. ನಂತರದ 2018ರಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ ತಲುಪಿದ್ದ ಚೋಪ್ರಾ ಕಡಿಮೆ ಅಂತರದಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶ ಕೈಚೆಲ್ಲಿದ್ದರು. 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಚೋಪ್ರಾ 2022ರಲ್ಲಿ ಕೊನೆಗೂ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಚಿನ್ನದ ಹುಡುಗ ಡೈಮಂಡ್ ಲೀಗ್‌ ಟ್ರೋಫಿಯನ್ನು ಎತ್ತಿ ಹಿಡಿದಿದ್ದಾರೆ.

ಚಿನ್ನದ ಹುಡುಗನ ದಾಖಲೆ

ಚಿನ್ನದ ಹುಡುಗನ ದಾಖಲೆ

ನೀರಜ್ ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು. 2022ರಲ್ಲಿ ನೀರಜ್ ಮೂರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಜುಲೈ 24 ರಂದು ಯುಎಸ್‌ಎಯ ಯುಜೀನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಮಧ್ಯೆ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲಿಲ್ಲ.

ವಿಶ್ವದ ಪ್ರತಿಷ್ಠಿತ ಟೂರ್ನಿ ಡೈಮಂಡ್ ಲೀಗ್

ವಿಶ್ವದ ಪ್ರತಿಷ್ಠಿತ ಟೂರ್ನಿ ಡೈಮಂಡ್ ಲೀಗ್

ಡೈಮಂಡ್ ಲೀಗ್ ಇದು ಪ್ರಪಂಚದ ಪ್ರತಿಷ್ಠಿತಿ ಜಾವೆಲಿನ್ ಎಸೆತದ ಟೂರ್ನಿಗಳಲ್ಲಿ ಒಂದಾಗಿದೆ. ಕಳೆದ ಜೂನ್‌ನಲ್ಲಿ ಟೂರ್ನಿ ಆರಂಭವಾಗಿತ್ತು. 2022ರಲ್ಲಿ ಒಟ್ಟು 13 ಡೈಮಂಡ್ ಲೀಗ್ ಟೂರ್ನಿ ನಡೆಯಲಿದ್ದು, ಇದರಲ್ಲಿ 5 ಟೂರ್ನಿಗಳು ಪುರುಷರ ಜಾವೆಲಿನ್ ಎಸೆತಕ್ಕೆ ಸಂಬಂಧಪಟ್ಟಿದ್ದವುಗಳಾಗಿವೆ.

ಮೇ ತಿಂಗಳಿನಲ್ಲಿ ದೋಹಾದಲ್ಲಿ ಮೊದಲ ಡೈಮಂಡ್ ಲೀಗ್ ನಡೆದಿತ್ತು, ನಂತರ ಸ್ಟಾಕೋಹೋಮ್, ಸಿಲಿಸಿಯಾ, ಮೊನ್ಯಾಕೊ ಹಾಗೂ ಲಾಸನ್ನೆಯಲ್ಲಿ ಉಳಿದ ನಾಲ್ಕು ಡೈಮಂಡ್ ಲೀಗ್ ನಡೆದಿದ್ದವು, ಅತ್ಯುತ್ತಮ ಪ್ರದರ್ಶನ ತೋರಿದ ವಿಶ್ವದ 6 ಅಗ್ರ ಜಾವೆಲಿನ್ ಥ್ರೋ ಅಥ್ಲಿಟ್‌ಗಳು ಫೈನಲ್‌ನಲ್ಲಿ ಟ್ರೋಫಿಗಾಗಿ ಸೆಣೆಸಾಡಿದರು. ಆದರೆ ಭಾರತದ ಅಗ್ರ ಜಾವೆಲಿನ್ ತಾರೆ ನೀರಜ್ ಚೋಪ್ರಾ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಚೊಚ್ಚಲ ಡೈಮಂಡ್ ಲೀಗ್ ಟ್ರೋಫಿ ಪಡೆದರು.

Story first published: Friday, September 9, 2022, 12:03 [IST]
Other articles published on Sep 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X