ಮಗುವಿನ ಚಿಕಿತ್ಸೆಗೆ ಒಲಿಂಪಿಕ್ಸ್ ಬೆಳ್ಳಿ ಪದಕ ಹರಾಜಿಗಿಟ್ಟ ಮಾರಿಯಾ ಆ್ಯಂಡ್ರೆಜಿಕ್!

ವಾರ್ಸಾ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಕೇವಲ ಎರಡು ವಾರ ಕಳೆಯುತ್ತಲೇ ಪೋಲ್ಯಾಂಡ್‌ನ ಅಥ್ಲೀಟ್ ಮಾರಿಯಾ ಆ್ಯಂಡ್ರೆಜಿಕ್ ಆ ಪದಕವನ್ನು ಹರಾಜಿಗಿಟ್ಟಿದ್ದಾರೆ. ಜಾವೆಲಿನ್ ಥ್ರೋವರ್‌ ಆಗಿದ್ದ ಆ್ಯಂಡ್ರೆಜಿಕ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಬಾರಿಗೆ ಒಲಿಂಪಿಕ್ಸ್ ಪದಕ ಗೆದ್ದಿದ್ದರು. ಪದಕ ಗೆದ್ದ ಈಕೆ ಕಣ್ಣಿಗೆ ಅನಾರೋಗ್ಯದಲ್ಲಿರುವ ಎಂಟು ತಿಂಗಳ ಮಗು ಮಿಲೋಝೆಕ್ ಮಲಿಸಾ ಬಿದ್ದಿದ್ದೇ ತಡ, ತನ್ನ ಪದಕ ಹರಾಜಿಗಿಟ್ಟು ಮಗುವಿಗೆ ನೆರವಾಗಿದ್ದಾರೆ.

ಅನಿಲ್ ಕುಂಬ್ಳೆಯಲ್ಲ, ರಾಹುಲ್ ದ್ರಾವಿಡ್ ಅಲ್ಲ, ಭಾರತೀಯ ಕ್ರಿಕೆಟ್‌ನಲ್ಲಿ ಅತೀ ವಿದ್ಯಾವಂತ ಕ್ರಿಕೆಟರ್ ಯಾರು ಗೊತ್ತಾ?!ಅನಿಲ್ ಕುಂಬ್ಳೆಯಲ್ಲ, ರಾಹುಲ್ ದ್ರಾವಿಡ್ ಅಲ್ಲ, ಭಾರತೀಯ ಕ್ರಿಕೆಟ್‌ನಲ್ಲಿ ಅತೀ ವಿದ್ಯಾವಂತ ಕ್ರಿಕೆಟರ್ ಯಾರು ಗೊತ್ತಾ?!

ಪುಟಾಣಿ ಮಗು ಮಿಲೋಝೆಕ್ ಮಲಿಸಾಗೆ ಹೃದಯ ಸಂಬಂಧಿ ಗಂಭೀರ ರೋಗವಿದೆ. ಆ ಮಗುವಿಗೆ ಶೀಘ್ರ ಶಸ್ತ್ರ ಚಿಕಿತ್ಸೆ ಮಾಡಿಸಬೇಕಿದೆ. ಯುರೋಪಿನ ಅನೇಕ ಆಸ್ಪತ್ರೆಗಳಲ್ಲಿ ಮಗುವಿಗೆ ಆಪರೇಶನ್ ನಡೆಸಲು ವೈದ್ಯರು ನಿರಾಕರಿಸಿದ್ದಾರೆ. ಪೋಲ್ಯಾಂಡ್‌ ಮೂಲದ ಡಾಕ್ಟರ್ ಒಬ್ಬರು ಮಗುವಿನ ಸಂಪೂರ್ಣ ಆಪರೇಶನ್‌ನ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಗುವಿಗಿರುವ ಕೊನೇ ಆಸರೆ ಯುಎಸ್‌ಎಯ ಆಸ್ಪತ್ರೆ

ಮಗುವಿಗಿರುವ ಕೊನೇ ಆಸರೆ ಯುಎಸ್‌ಎಯ ಆಸ್ಪತ್ರೆ

ಜಗತ್ತಿನ ಬಹುತೇಕ ಆಸ್ಪತ್ರೆಗಳು ಕೈ ಚೆಲ್ಲಿದಾಗ ಮಗುವಿನ ಜೀವ ಉಳಿಸಲು ಇರುವ ಕೊನೇ ಆಶಾಭಾವನೆಯೆಂದರೆ ಅದು ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಸ್ಟ್ಯಾನ್‌ಪೋರ್ಡ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್. ಈ ಆಸ್ಪತ್ರೆ ತಾನು ಮಗುವಿಗೆ ಆಪರೇಶನ್ ನಡೆಸುವುದಾಗಿ ತಿಳಿಸಿದೆ. ಆದರೆ ಶಸ್ತ್ರ ಚಿಕಿತ್ಸೆಯ ಖರ್ಚು ಬಹಳ ದೊಡ್ಡದಾಗಿದೆ. ಮಗುವಿನ ಚಿಕಿತ್ಸೆಗೆ $385,000 (ಸುಮಾರು 2,86,42,594 ರೂ.) ಬೇಕಿರುವುದರಿಂದ ಮಲಿಸಾ ಹೆತ್ತವರು ಆನ್‌ಲೈನ್ ಮೂಲಕ ಸಹಾಯ ಬೇಡಿದ್ದಾರೆ. ಸಮಯ ಕಳೆಯುತ್ತಿರುವುದರಿಂದ ಬರೀ ಅರ್ಧದಷ್ಟೇ ಹಣ ಸಂಗ್ರಹವಾಗಿದೆ. ಹೀಗಾಗಿ ಶೀಘ್ರವಾಗಿ ಮಗುವಿಗೆ ನೆರವು ನೀಡುವಂತೆ ಮಗುವಿನ ಹೆತ್ತವರು ಪೋಸ್ಟ್ ಮೂಲಕ ಕೋರಿಕೊಂಡಿದ್ದಾರೆ. "ಮಿಲೋಝಕ್ ಸ್ಥಿತಿ ಹದಗೆಡುತ್ತಿರುವುದರಿಂದ ಅವನಿಗೆ ಶೀಘ್ರ ಶಸ್ತ್ರ ಚಿಕಿತ್ಸೆ ನಡೆಸಬೇಕಿದೆ," ಎಂದು ಮಿಲೋಝಕ್ ಹೆತ್ತವರು ಕೋರಿಕೊಂಡಿದ್ದರು.

ಫೇಸ್ಬುಕ್ ಪೋಸ್ಟ್‌ ಹಾಕಿಕೊಂಡ ಮಾರಿಯಾ ಆ್ಯಂಡ್ರೆಜಿಕ್

ಫೇಸ್ಬುಕ್ ಪೋಸ್ಟ್‌ ಹಾಕಿಕೊಂಡ ಮಾರಿಯಾ ಆ್ಯಂಡ್ರೆಜಿಕ್

"ಮಿಲೋಝಕ್‌ಗೆ ಗಂಭೀರ ಹೃದಯದ ತೊಂದರೆಯಿದೆ. ಆತನಿಗೆ ಶೀಘ್ರ ಆಪರೇಶನ್ ನಡೆಸಬೇಕಿದೆ. ಆತನ ಹೆತ್ತವರು ಈವರೆಗೆ ಸಂಗ್ರಹವಾದ ಹಣವನ್ನು ಚಿಕಿತ್ಸೆಗಾಗಿ ಕಳುಹಿಸಿದ್ದಾರೆ. ಸಣ್ಣ ವಯಸ್ಸಿನ ಹುಡುಗನಾದ್ದರಿಂದ ಆಗನಿಗೆ ನೆರವು ನೀಡಲು ನಾನೂ ನಿರ್ಧರಿಸಿದ್ದೇನೆ. ಇದಕ್ಕಾಗಿ ನಾನು ನನಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸಿಕ್ಕ ಬೆಳ್ಳಿ ಪದಕವನ್ನು ಹರಾಜಿಗಿಡುತ್ತಿದ್ದೇನೆ. ಮಗುವಿಗೆ ಸಹಾಯ ಮಾಡಲು ನಾನು ಹಿಂದೆ ಮುಂದೆ ನೋಡುತ್ತಿಲ್ಲ. ಇದು ನನ್ನ ಮೊದಲನೇ ದೇಣಿಗೆ ಸಂಗ್ರಹ. ನಾನೂ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದೇನೆ. ಇದೊಂದು ಒಳ್ಳೆಯ ಉದ್ದೇಶಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದೇನೆ ಅನ್ನೋದು ನನಗೆ ಗೊತ್ತಿದೆ," ಎಂದು ಫೇಸ್ಬುಕ್ ಪೋಸ್ಟ್‌ನಲ್ಲಿ 25ರ ಹರೆಯದ ಮಾರಿಯಾ ಆ್ಯಂಡ್ರೆಜಿಕ್ ಬರೆದುಕೊಂಡಿದ್ದರು.

ಮಾನವೀಯತೆ ಮೆರೆದ ಝಬ್ಕಪೊಲ್ಸ್ಕ

ಮಾನವೀಯತೆ ಮೆರೆದ ಝಬ್ಕಪೊಲ್ಸ್ಕ

ಪೋಲಿಶ್ ಸೂಪರ್ ಮಾರ್ಕೆಟ್ ಚೈನ್ ಝಬ್ಕಪೊಲ್ಸ್ಕ ಮಾರಿಯಾ ಆ್ಯಂಡ್ರೆಜಿಕ್ ಅವರು ಬೆಳ್ಳಿ ಪದಕ ಇಟ್ಟಿದ್ದ ಹರಾಜನ್ನು ಗೆದ್ದಿದೆ. $125,000 (92,96,281 ರೂ.) ಮೌಲ್ಯದ ಬಿಡ್ಡನ್ನು ಝಬ್ಕಪೊಲ್ಸ್ಕ ಗೆದ್ದಿದೆ. ಆದರೆ ಮಾನವೀಯತೆ ಮೆರೆದಿರುವ ಮಾರ್ಕೆಟಿಂಗ್ ಸಂಸ್ಥೆ, ಬಿಡ್ ಮೂಲಕ ಗೆದ್ದಿರುವ ಆ್ಯಂಡ್ರೆಜಿಕ್ ಬೆಳ್ಳಿ ಪದಕವನ್ನು ಮತ್ತೆ ಅವರಿಗೆ ವಾಪಸ್ ಮಾಡಲು ಬಯಸಿದೆ. ಬಿಡ್‌ನ ಹಣವನ್ನು ಮಿಲೋಝಕ್‌ ಚಿಕಿತ್ಸೆಗೆ ಬಳಸಲು ಝಬ್ಕಪೊಲ್ಸ್ಕ ನಿರ್ಧರಿಸಿದೆ. "ಮಿಸ್ ಮರಿಯಾ ಅವರ ಅದ್ಭುತ ನಡೆ ನಮ್ಮ ಮನ ತಾಗಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗೆದ್ದ ಅವರ ಪದಕ ಅವರಲ್ಲೇ ಉಳಿಯುವಂತೆ ನಾವು ನೋಡಿಕೊಳ್ಳಲಿದ್ದೇವೆ. ಮಗುವಿಗೆ ನೆರವಾಗಲು ಸಾಧ್ಯವಾಯ್ತು ಅಂತ ನಮಗೆ ತುಂಬಾ ಖುಷಿಯಿದೆ," ಎಂದು ಝಬ್ಕಪೊಲ್ಸ್ಕ ಪೋಸ್ಟ್ ಮಾಡಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, August 19, 2021, 20:13 [IST]
Other articles published on Aug 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X