ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್: ಟೋಕಿಯೋ ನಗರದಲ್ಲಿ ದಾಖಲೆಯ 2848 ಕೋವಿಡ್ ಪ್ರಕರಣ ಒಂದೇ ದಿನ ಪತ್ತೆ!

Olympics: Tokyo records highest single-day spike since pandemic began

ಟೋಕಿಯೋ, ಜುಲೈ 27: ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿರುವ ಮಧ್ಯೆಯೇ ಟೋಕಿಯೋ ನಗರದಲ್ಲಿ ಕೊರೊನಾ ಆತಂಕ ಮತ್ತಷ್ಟು ಹೆಚ್ಚಾಗುತ್ತಿದೆ. ಕೊರೊನಾವೈರಸ್ ಆರಂಭವಾದ ಬಳಿಕ ಟೋಕಿಯೋದಲ್ಲಿ ವೈರಸ್ ದಾಖಲೆ ಬರೆದಿದೆ. ಕಳೆದ 24 ಗಂಟೆಗಳಲ್ಲಿ ಈವರೆಗಿನ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದೆ.ಜುಲೈ 27ರಂದು ಟೋಕಿಯೋ ನಗರದಲ್ಲಿ ಒಂದೇ ದಿನ 2848 ಹೊಸ ಕೋವಿಡ್ ಪ್ರಕರಣಗಳು ಟೋಕಿಯೋ ನಗರದಲ್ಲಿ ದಾಖಲಾಗಿದೆ.

ಟೋಕಿಯೋ ನಗರದಲ್ಲಿ ಈಗಾಗಲೇ ಕೊರೊನಾವೈರಸ್‌ನ ಹಾವಳಿಯಿಂದಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಇದೇ ಸಂದರ್ಭದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಕೂಡ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ನಡೆಸಲಾಗುತ್ತಿದೆ. ಹಾಗಿದ್ದರೂ ಕ್ರೀಡಾ ಗ್ರಾಮದಲ್ಲಿಯೂ ನಿತ್ಯವೂ ಹೊಸ ಪ್ರಕರಣಗಳು ಪತ್ತೆಯಾಗುತ್ತಿದೆ.

ಡೆಲ್ಟಾ ರೂಪಾಂತರಿ ವೈರಸ್‌ನ ಪ್ರಕರಣಗಳು ಹೆಚ್ಚಾಗುತ್ತಿದ್ದು ಜಪಾನ್‌ನಲ್ಲಿ ಕೋರೊನಾವೈರಸ್‌ನ ಐದನೇ ಅಲೆ ಕಾಣಿಸಿಕೊಳ್ಳುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಪರಿಣಾಮವಾಗಿ ಟೋಕಿಯೋದಲ್ಲಿರುವ ಆಸ್ಪತ್ರೆಗಳು ಸೋಕಿತರಿಂದ ತುಂಬಿಕೊಳ್ಳಯತ್ತಿವೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಭಾನುವಾರದ ವೇಳೆಗೆ ಜಪಾನ್‌ ರಾಜಧಾನಿಯಲ್ಲಿನ ಕೊರೊನಾ ಸೋಂಕಿತರ ಪೈಕಿ 20.8 ಶೇಕಡಾ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಅಲ್ಲಿನ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಸುಮಾರು 12,635 ಕೊರೊನಾ ರೋಗುಗಳು ಟೋಕಿಯೋದಲ್ಲಿರುವ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಮಂಗಳವಾರ 7 ಹೊಸ ಕೊರೊನಾವೈರಸ್ ಪ್ರಕರಣಗಳು ಒಲಿಂಪಿಕ್ಸ್‌ಗೆ ಸಂಬಂಧಪಟ್ಟವರಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ ನಾಲ್ವರು ಕ್ರೀಡಾಪಟುಗಳಾಗಿದ್ದಾರೆ. ಅದರಲ್ಲೂ ಇಬ್ಬರು ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿಯೇ ವಾಸವಿದ್ದರು ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಈವರೆಗೆ ಟೋಕಿಯೋ ಒಲಿಂಪಿಕ್ಸ್‌ಗೆ ಸಂಬಂಧಪಟ್ಟಂತೆ ಒಟ್ಟು 155 ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದೆ.

Story first published: Tuesday, July 27, 2021, 16:28 [IST]
Other articles published on Jul 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X