ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಡಬ್ಲ್ಯೂಎಫ್ಐ ಕೆಂಗಣ್ಣಿಗೆ ಗುರಿಯಾದ ಫೋಗಾಟ್ ಸಹೋದರಿಯರು

Phogat Sisters Axed From National Camp for Serious Indiscipline

ನವದೆಹಲಿ, ಮೇ 17: ರಸ್ಲಿಂಗ್ ರಾಷ್ಟ್ರೀಯ ಶಿಬಿರದಿಂದ ಗೈರಾಗಿದ್ದಕ್ಕೆ ಫೋಗಾಟ್ ಸಹೋದರಿಯರು ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಫೋಗಾಟ್ ಸಹೋದರಿಯರು ಗಂಭೀರ ಅಶಿಸ್ತು ತೋರ್ಪಡಿಸಿದ್ದಾರೆ. ಅದಕ್ಕೇ ಅವರನ್ನು ಕ್ಯಾಂಪ್ ನಿಂದ ವಜಾ ಗೊಳಿಸಲಾಗಿದೆ ಎಂದು ಡಬ್ಲ್ಯೂಎಫ್ಐ ಹೇಳಿದೆ.

'ಮತ್ತೆ ರಾಷ್ಟ್ರೀಯ ಕೋಚಿಂಗ್ ಕ್ಯಾಂಪ್ ನಲ್ಲಿ ಪಾಲ್ಗೊಳ್ಳಬೇಕಾದರೆ ಗೈರಾಗಿರುವುದಕ್ಕೆ ಸರಿಯಾದ ಕಾರಣಗಳನ್ನು ನೀಡಬೇಕು' ಎಂದು ಡಬ್ಲ್ಯೂಎಫ್ಐ ಫೋಗಾಟ್ ಸಹೋದರಿಯರಿಗೆ ಎಚ್ಚರಿಸಿದೆ. ಈ ನಡುವೆ ಫೋಗಾಟ್ ಸಹೋದರಿಯರಲ್ಲಿ ಒಬ್ಬರಾದ ಬಬಿತಾ ಫೋಗಾಟ್ ತಾನು ಗಾಯಕ್ಕೊಳಗಾಗಿರುವುದರಿಂದ ಗೈರಾಗಿರುವುದಾಗಿ ತಿಳಿಸಿದ್ದಾರೆ.

ಗೀತಾ ಮತ್ತು ಬಬಿತಾ ಫೋಗಾಟ್ ಇಬ್ಬರೂ ಕಾಮನ್ ವೆಲ್ತ್ ಗೇಮ್ಸ್ ಪದಕ ವಿಜೇತ ರಸ್ಲರ್ ಗಳು. ಅದೂ ಬಾಲಿವುಡ್ ನ 'ದಂಗಲ್' ಸಿನೆಮಾದ ಬಳಿಕ ಇಬ್ಬರೂ ಹೆಚ್ಚು ಖ್ಯಾತರಾಗಿದ್ದರು. ಇವರಿಬ್ಬರಲ್ಲದೆ ಇವರ ಕಿರಿಯ ಸಹೋದರಿಯರಾದ ರೀತೂ ಮತ್ತು ಸಂಗೀತಾ ಕೂಡ ಲಕ್ನೋದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ರಸ್ಲಿಂಗ್ ಕ್ಯಾಂಪ್ ನಿಂದ ವಜಾ ಶಿಕ್ಷೆಗೆ ಒಳಗಾಗಿದ್ದಾರೆ.

'ರಾಷ್ಟ್ರೀಯ ಕ್ಯಾಂಪ್ ಗೆ ಆಯ್ಕೆಯಾಗಿರುವ ರಸ್ಲರ್ ಗಳು 3 ದಿನದೊಳಗೆ ಕ್ಯಾಂಪ್ ಗೆ ಮುಖತಃ ಭೇಟಿ ನೀಡಿ ವರದಿ ಮಾಡಬೇಕು. ಒಂದುವೇಳೆ ಅವರಿಗೇನಾದರೂ ಸಮಸ್ಯೆಯಿದ್ದರೆ ಅವರ ತರಬೇತುದಾರರಿಗೆ ವರದಿ ಮಾಡಿ ಪರಿಹಾರ ಕಂಡುಕೊಳ್ಳಬೇಕು' ಎಂದು ಡಬ್ಲ್ಯೂಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ತಿಳಿಸಿದ್ದಾರೆ.

'ಗೀತಾ ಬಬಿತಾ ಅವರು ಉಳಿದ ರಸ್ಲರ್ ಗಳಂತೆ ಆಡಬಾರದು. ಅವರಿಗೆ ಹೆಚ್ಚು ಜವಾಬ್ದಾರಿಯಿದೆ. ಇಂಥ ಗಂಭೀರ ಅಶಿಸ್ತನ್ನು ಅವರು ಮತ್ತೊಮ್ಮೆ ತೋರಿಕೊಳ್ಳಬಾರದು. ಹಾಗೊಂದುವೇಳೆ ಮಾಡಿದರೆ ನಾವು ಅವರಿಗೆ 'ನೀವು ಮನೆಯಲ್ಲೇ ಕೂತು ಗಮ್ಮತ್ತು ಮಾಡಿ' ಎನ್ನಬೇಕಾಗುತ್ತದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಬ್ರಿಜ್ ಭೂಷಣ್ ಹೇಳಿದರು.

ಈ ತಿಂಗಳಾಂತ್ಯದಲ್ಲಿ ಏಷ್ಯಾನ್ ಗೇಮ್ಸ್ ಗಾಗಿ ಟ್ರಯಲ್ಸ ನಡೆಯಲಿರುವುದರಿಂದ ರಸ್ಲಿಂಗ್ ಫೆಡರೇಶನ್ ವನಿತಾ ರಸ್ಲರ್ ಗಳ ಮೇಲೆ ಗಂಭೀರ ಕ್ರಮ ಕೈಗೊಂಡಿದೆ. ಏಷ್ಯಾನ್ ಗೇಮ್ಸ್ ಆಗಸ್ಟ್-ಸೆಪ್ಟೆಂಬರ್ ನಲ್ಲಿ ನಡೆಯಲಿದೆ.

Story first published: Thursday, May 17, 2018, 16:20 [IST]
Other articles published on May 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X