ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

13 ಕ್ರೀಡಾಳುಗಳಿಗೆ 2016 ನೇ ಸಾಲಿನ ಏಕಲವ್ಯ ಪ್ರಶಸ್ತಿ ಘೋಷಣೆ

By ಕಿರಣ್ ಸಿರ್ಸಿಕರ್
Pramodh Madwaraj announced state Ekalavya award .

ಉಡುಪಿ, ಮಾರ್ಚ್‌ 06: ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ 2016 ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ. ಉಡುಪಿಯಲ್ಲಿ ಅವರು ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಪಟುಗಳ ಹೆಸರನ್ನು ಘೋಷಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಮಾರ್ಚ್ 7 ರಂದು ಸಂಜೆ 5.00 ಗಂಟೆಗೆ ಬೆಂಗಳೂರಿನ ಗುರುನಾನಕ್ ಭವನದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಕರ್ನಾಟಕ ರಾಜ್ಯದ ಅಪ್ರತಿಮರಿಗೆ 2016ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ ಮತ್ತು ಕ್ರೀಡಾ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಸನ್ಮಾನಿಸಲಾಗುವುದೆಂದು ಅವರು ತಿಳಿಸಿದರು. 2017-18ನೇ ಸಾಲಿನಿಂದ ಕರ್ನಾಟಕ ಸರ್ಕಾರವು ಕ್ರೀಡಾಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಕ್ರೀಡಾ ಪ್ರವರ್ತಕರನ್ನು ಗುರುತಿಸಿ ನೀಡಲು ಉದ್ದೇಶಿಸಿರುವ ಕ್ರೀಡಾ ಪೋಷಕ ಪ್ರಶಸ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

13 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ಪ್ರಕಟಿಸಿದ ಕ್ರೀಡಾ ಇಲಾಖೆ13 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ಪ್ರಕಟಿಸಿದ ಕ್ರೀಡಾ ಇಲಾಖೆ

2016ರ ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳ ಪಟ್ಟಿ ಇಂತಿದೆ.

1 ಹರ್ಷಿತ್ ಎಸ್ - ಅಥ್ಲೆಟಿಕ್ಸ್
2 ರಾಜೇಶ್ ಪ್ರಕಾಶ್ ಉಪ್ಪಾರ್ - ಬ್ಯಾಸ್ಕೆಟ್‍ಬಾಲ್
3 ಪೂರ್ವಿಷಾ ಎಸ್. ರಾಮ್- ಬ್ಯಾಡ್ಮಿಂಟನ್
4 ರೇಣುಕಾ ದಂಡಿನ್ - ಸೈಕ್ಲಿಂಗ್
5 ಮಯೂರ್ ಡಿ ಭಾನು - ಶೂಟಿಂಗ್
6 ಕಾರ್ತಿಕ್ ಎ - ವಾಲಿಬಾಲ್
7 ಮಾಳವಿಕ ವಿಶ್ವನಾಥ್ - ಈಜು
8 ಕೀರ್ತನಾ ಟಿ.ಕೆ - ರೋಯಿಂಗ್
9 ಅಯ್ಯಪ್ಪ ಎಂ.ಬಿ. - ಹಾಕಿ
10 ಸುಕೇಶ್ ಹೆಗ್ಡೆ - ಕಬಡ್ಡಿ
11 ಗುರುರಾಜ - ಭಾರ ಎತ್ತುವುದು
12 ಸಂದೀಪ ಬಿ. ಕಾಟೆ - ಕುಸ್ತಿ
13 ರೇವತಿ ನಾಯಕ ಎಂ - ವಿಕಲಚೇತನ ಮಹಿಳಾ ಈಜುಪಟು

ಏಕಲವ್ಯ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ಕ್ರೀಡಾ ಸಾಧಕರಿಗೆ ತಲಾ ರೂ.2.00 ಲಕ್ಷಗಳ ನಗದು ಬಹುಮಾನ, ಸ್ಕ್ರೋಲ್, ಏಕಲವ್ಯನ ಕಂಚಿನ ಪ್ರತಿಮೆಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು.

ಜೀವಮಾನ ಸಾಧನೆ ಪ್ರಶಸ್ತಿ- 2016
ಕ್ರೀಡಾ ಕ್ಷೇತ್ರಕ್ಕೆ ಅಪ್ರತಿಮ ಕ್ರೀಡಾಪಟುಗಳನ್ನು ನೀಡಿದ ಕರ್ನಾಟಕದ ತರಬೇತುದಾರರಿಗೆ ಅವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ಪ್ರತಿ ವರ್ಷ 2 ಕ್ರೀಡಾ ತರಬೇತುದಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಸಕ್ತ ವರ್ಷ ಇಬ್ಬರು ಸಾಧಕರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ.

ಜೀವಮಾನ ಸಾಧನೆ ಪ್ರಶಸ್ತಿ
1 ವಿ.ಆರ್. ಬೀಡು - ಅಥ್ಲೆಟಿಕ್ಸ್
2 ಎಂ.ಆರ್. ಮೊಹಿತೆ - ಈಜು

ಜೀವಮಾನ ಸಾಧನೆ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ತರಬೇತುದಾರರಿಗೆ ತಲಾ ರೂ.1.50 ಲಕ್ಷಗಳ ನಗದು ಬಹುಮಾನ, ಸ್ಕ್ರೋಲ್ ಮತ್ತು ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು.

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ- 2016
ಕರ್ನಾಟಕ ರಾಜ್ಯದ ಗ್ರಾಮೀಣ ಕ್ರೀಡೆಗಳಿಗೆ ಮತ್ತು ಗ್ರಾಮೀಣ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು 2014-15ನೇ ಸಾಲಿನಲ್ಲಿ ಹೊಸ ಯೋಜನೆಯಾಗಿ ಅನುಷ್ಟಾನಕ್ಕೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮೀಣ ದೇಸೀ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಕ್ರೀಡಾಪಟುಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

2016ರ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳ ಪಟ್ಟಿ
1 ಸೈಯದ್‍ಫತೇಶಾವಲಿ ಹೆಚ್. ಬೇಪಾರಿ - ಆಟ್ಯಾ-ಪಾಟ್ಯಾ
2 ಯಶಸ್ವಿನಿ ಕೆ.ಜಿ - ಬಾಲ್ ಬ್ಯಾಡ್ಮಿಂಟನ್
3 ಶೇಖರ್ ವಾಲಿ - ಗುಂಡು ಎತ್ತುವುದು
4 ಯುವರಾಜ್ ಜೈನ್ - ಕಂಬಳ
5 ಮುನ್ನೀರ್ ಭಾಷಾ - ಖೋ-ಖೋ
6 ಸುಗುಣಸಾಗರ್ ಹೆಚ್ ವಡ್ರಾಳೆ - ಮಲ್ಲಕಂಬ
7 ಸಬಿಯ ಎಸ್ - ಥ್ರೋಬಾಲ್
8 ಆತ್ಮಶ್ರೀ ಹೆಚ್.ಎಸ್ - ಕುಸ್ತಿ
9 ಧನುಶ್ ಬಾಬು - ರೋಲರ್ ಸ್ಕೇಟಿಂಗ್

ಗ್ರಾಮೀಣ ಕ್ರೀಡಾ ರತ್ನ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ಕ್ರೀಡಾ ಸಾಧಕರಿಗೆ ತಲಾ ರೂ.1.00 ಲಕ್ಷಗಳ ನಗದು ಬಹುಮಾನ, ಸ್ಕ್ರೋಲ್ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.

ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ -2017-18
ಕ್ರೀಡೆಗಳ ಅಭಿವೃದ್ದಿ ಮತ್ತು ಕ್ರೀಡಾಪಟುಗಳ ಉನ್ನತ ಸಾಧನೆಯಲ್ಲಿ ಕ್ರೀಡಾ ಪ್ರವರ್ತಕರ ಪಾತ್ರ ಮಹತ್ವದ್ದಾಗಿದೆ. ಅಂತಹ ಕ್ರೀಡಾ ಪ್ರವರ್ತಕರನ್ನು ಗುರುತಿಸಿ ಪ್ರೋತ್ಸಾಹಿಸಲು 2017-18ಕರ್ನಾಟಕ ಕ್ರೀಡಾ ಪ್ರವರ್ತಕ ಪ್ರಶಸ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.

2017-18 ನೇ ಸಾಲಿಗೆ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಕ್ರೀಡಾ ಪ್ರವರ್ತಕರ ಪಟ್ಟಿ
1 ಬ್ರಹ್ಮಾವರ ಸ್ಪೋಟ್ರ್ಸ ಕ್ಲಬ್, ಬ್ರಹ್ಮಾವರ- ಉಡುಪಿ
2 ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ (ರಿ) ಮಿಯ್ಯಾರ್- ಉಡುಪಿ
3 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ - ದಕ್ಷಿಣ ಕನ್ನಡ
4 ಜೈನ್ ವಿಶ್ವವಿದ್ಯಾಲಯ, ಬೆಂಗಳೂರು- ಬೆಂಗಳೂರು
5 ಜೆ.ಎಸ್.ಡಬ್ಲ್ಯೂ, ಬಳ್ಳಾರಿ - ಬಳ್ಳಾರಿ
6 ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟ(ರಿ) ಕ್ಯಾತನಹಳ್ಳಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ.- ಮಂಡ್ಯ
7 ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರ ನಿ. ಚಂದರಗಿ- ಬೆಳಗಾವಿ
8 ಕಂಠೀರವ ಕೇಸರಿ ರತನ್ ಮಠಪತಿ ಸ್ಪೋಟ್ರ್ಸ ಅಂಡ್ ಎಜ್ಯುಕೇಷನ್ ಸೊಸೈಟಿ, ಹುನ್ನೂರ, ತಾಲ್ಲೂಕು ಜಮಖಂಡಿ, ಜಿಲ್ಲಾ ಬಾಗಲಕೋಟ -ಬಾಗಲಕೋಟ
9 ಕೃಷ್ಣಾ ತೀರಾ ರೈತ ಸಂಘ (ರಿ), ಜಮಖಂಡಿ, ಜಿಲ್ಲಾ ಬಾಗಲಕೋಟ - ಬಾಗಲಕೋಟ
10 ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ), ಶ್ರೀ ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲ ತಾಲ್ಲೂಕು ಮಂಡ್ಯ- ಮಂಡ್ಯ

ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ಕ್ರೀಡಾ ಪ್ರವರ್ತಕರಿಗೆ ತಲಾ ರೂ.5.00 ಲಕ್ಷಗಳ ನಗದು ಬಹುಮಾನ, ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ.

Story first published: Tuesday, March 6, 2018, 12:47 [IST]
Other articles published on Mar 6, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X