ಟೋಕಿಯೋ ಒಲಿಂಪಿಕ್ಸ್: ಬಜರಂಗ್ ಪುನಿಯಾ ಅಬ್ಬರ; ಭಾರತಕ್ಕೆ ಮತ್ತೊಂದು ಪದಕ

ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ಹೌದು ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 2020ರಲ್ಲಿ ಆರನೇ ಪದಕ ಲಭಿಸಿದ್ದು ಕುಸ್ತಿಪಟು ಬಜರಂಗ್ ಪೂನಿಯಾ ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಕಂಚಿನ ಪದಕದ ಸುತ್ತಿನಲ್ಲಿ ಕಜಕಿಸ್ತಾನದ ದೌಲತ್ ನಿಯಾಜ್ ಬೆಕಾವೋವನ್ನು 8-0 ಅಂತರದಲ್ಲಿ ಸದೆಬಡಿದು ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.

'ನನಗೆ ಅವಕಾಶ ತಪ್ಪಿಸಿ ತಂಡದಿಂದ ಹೊರಗಿಟ್ಟ'; ಎಬಿ ಡಿವಿಲಿಯರ್ಸ್ ಮತ್ತೊಂದು ಮುಖ ಬಿಚ್ಚಿಟ್ಟ ಆಟಗಾರ!'ನನಗೆ ಅವಕಾಶ ತಪ್ಪಿಸಿ ತಂಡದಿಂದ ಹೊರಗಿಟ್ಟ'; ಎಬಿ ಡಿವಿಲಿಯರ್ಸ್ ಮತ್ತೊಂದು ಮುಖ ಬಿಚ್ಚಿಟ್ಟ ಆಟಗಾರ!

ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ ಹಂತದವರೆಗೂ ಬಂದಿದ್ದ ಬಜರಂಗ್ ಪೂನಿಯಾ ಸೆಮಿಫೈನಲ್ ಹಂತದ ಪಂದ್ಯದಲ್ಲಿ ಅಜರ್‌ಬೈಜನಿಯದ ಕುಸ್ತಿಪಟು ಹಾಜಿ ಅಲಿಯವ್ ವಿರುದ್ಧ 5-12 ಅಂತರದಲ್ಲಿ ಸೋಲುವುದರ ಮೂಲಕ ಫೈನಲ್ ಹಂತಕ್ಕೆ ತಲುಪುವುದರಲ್ಲಿ ವಿಫಲರಾಗಿದ್ದರು. ಸೆಮಿಫೈನಲ್ ಹಂತದಲ್ಲಿ ಸೋಲುಂಡಿದ್ದ ಬಜರಂಗ್ ಪೂನಿಯಾ ಕಂಚಿನ ಸುತ್ತಿನಲ್ಲಿ ಸೆಣಸಾಡುವ ಅವಕಾಶವನ್ನು ಹೊಂದಿದ್ದರು.

'ನನಗೆ ಅವಕಾಶ ತಪ್ಪಿಸಿ ತಂಡದಿಂದ ಹೊರಗಿಟ್ಟ'; ಎಬಿ ಡಿವಿಲಿಯರ್ಸ್ ಮತ್ತೊಂದು ಮುಖ ಬಿಚ್ಚಿಟ್ಟ ಆಟಗಾರ!'ನನಗೆ ಅವಕಾಶ ತಪ್ಪಿಸಿ ತಂಡದಿಂದ ಹೊರಗಿಟ್ಟ'; ಎಬಿ ಡಿವಿಲಿಯರ್ಸ್ ಮತ್ತೊಂದು ಮುಖ ಬಿಚ್ಚಿಟ್ಟ ಆಟಗಾರ!

ಕಂಚಿನ ಪದಕದ ಸುತ್ತಿನಲ್ಲಿ ಕಜಕಿಸ್ತಾನದ ದೌಲತ್ ನಿಯಾಜ್ ಬೆಕಾವೋ ವಿರುದ್ಧ ಸೆಣಸಾಟ ನಡೆಸಿದ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಪಂದ್ಯದ ಆರಂಭದಿಂದಲೂ ಎದುರಾಳಿಯ ಮೇಲೆ ಸತತವಾಗಿ ಹಿಡಿತವನ್ನು ಸಾಧಿಸುತ್ತಾ ಬಂದರು. ಪಂದ್ಯದ ಯಾವುದೇ ಹಂತದಲ್ಲಿಯೂ ಎದುರಾಳಿಗೆ ಅಂಕವನ್ನೇ ಬಿಟ್ಟುಕೊಡದ ರೀತಿ ಹೋರಾಟ ನಡೆಸಿದ ಬಜರಂಗ್ ಪೂನಿಯಾ 8-0 ಅಂತರದಿಂದ ಕಜಕಿಸ್ತಾನದ ದೌಲತ್ ನಿಯಾಜ್ ಬೆಕಾವೋವನ್ನು ಮಣಿಸಿ ಭಾರತಕ್ಕೆ ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆರನೇ ಪದಕ ಲಭಿಸುವಂತೆ ಮಾಡಿದ್ದಾರೆ.

ಕಂಚಿನ ಸುತ್ತಿನಲ್ಲಿ ಒಂದೇ ಒಂದು ಅಂಕವನ್ನೂ ಬಿಟ್ಟುಕೊಡದ ಪೂನಿಯಾ!

ಕಂಚಿನ ಸುತ್ತಿನಲ್ಲಿ ಒಂದೇ ಒಂದು ಅಂಕವನ್ನೂ ಬಿಟ್ಟುಕೊಡದ ಪೂನಿಯಾ!

ಸೆಮಿಫೈನಲ್ ಹಂತದಲ್ಲಿ ಅಜರ್‌ಬೈಜನಿಯದ ಕುಸ್ತಿಪಟು ಹಾಜಿ ಅಲಿಯವ್ ವಿರುದ್ಧ 5-12 ಅಂತರದಿಂದ ಸೋತು ಫೈನಲ್ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದ್ದ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಕಂಚಿನ ಸುತ್ತಿನಲ್ಲಿ ಎದುರಾಳಿಯ ಮೇಲೆ ಸಂಪೂರ್ಣ ಸವಾರಿ ಮಾಡಿದ್ದಾರೆ. ಪಂದ್ಯ ಆರಂಭವಾದಾಗಿನಿಂದ ಕೊನೆಯವರೆಗೂ ಅಬ್ಬರಿಸಿದ ಬಜರಂಗ್ ಪೂನಿಯಾ ಎದುರಾಳಿಗೆ ಎಲ್ಲಿಯೂ ಸಹ ಅಂಕವನ್ನು ಬಿಟ್ಟುಕೊಡಲೇ ಇಲ್ಲ. ಬಜರಂಗ್ ಪೂನಿಯಾ ಕಂಚಿನ ಸುತ್ತಿನಲ್ಲಿ ತಮ್ಮ ಎದುರಾಳಿ ಕಜಕಿಸ್ತಾನದ ದೌಲತ್ ನಿಯಾಜ್ ಬೆಕಾವೋ ವಿರುದ್ಧ 8-0 ಅಂತರದಿಂದ ಜಯ ಗಳಿಸುವುದರ ಮೂಲಕ ಕಂಚಿನ ಪದಕವನ್ನು ಗೆದ್ದುಕೊಂಡರು.

ಭಾರತಕ್ಕಿದು ಆರನೇ ಪದಕ

ಭಾರತಕ್ಕಿದು ಆರನೇ ಪದಕ

ಕಂಚಿನ ಸುತ್ತಿನಲ್ಲಿ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಕಂಚಿನ ಪದಕವನ್ನು ಗೆಲ್ಲುವುದರ ಮೂಲಕ ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ ಆರಕ್ಕೇರಿದೆ. ಮಹಿಳಾ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಕ್ರೀಡಾಪಟು ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದರು, ರಸ್ಲಿಂಗ್ ವಿಭಾಗದಲ್ಲಿ ಭಾರತದ ರವಿಕುಮಾರ್ ದಾಹಿಯಾ ರಜತ ಪದಕವನ್ನು ತಮ್ಮದಾಗಿಸಿಕೊಂಡರು, ಮಹಿಳಾ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪಿವಿ ಸಿಂಧು ಕಂಚಿನ ಪದಕ, ಹಾಕಿ ವಿಭಾಗದಲ್ಲಿ ಪುರುಷರ ತಂಡ ಕಂಚಿನ ಪದಕ ಹಾಗೂ ಮಹಿಳಾ ಬಾಕ್ಸಿಂಗ್ ವಿಭಾಗದಲ್ಲಿ ಲವ್ಲಿನಾ ಬೊರ್ಗೆಹೈನ್ ಕಂಚಿನ ಪದಕಗಳನ್ನು ಗೆದ್ದಿದ್ದರು. ಇದೀಗ ಬಜರಂಗ್ ಪೂನಿಯಾ ಕಂಚಿನ ಪದಕವನ್ನು ಗೆದ್ದಿದ್ದು ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪಾಲಿಗಿದು ಆರನೇ ಪದಕವಾಗಿದೆ.

ಬಜರಂಗ್ ಪೂನಿಯಾ ಗೆದ್ದು ಬಂದ ಹಾದಿ

ಬಜರಂಗ್ ಪೂನಿಯಾ ಗೆದ್ದು ಬಂದ ಹಾದಿ

ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾ ಪಟು ಬಜರಂಗ್ ಪೂನಿಯಾ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಿರ್ಗಿಸ್ತಾನದ ಕುಸ್ತಿಪಟು ಎರ್ನಾಸರ್ ವಿರುದ್ಧ ಜಯಗಳಿಸಿದರು, ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಇರಾನ್ ದೇಶದ ಖ್ಯಾತ ಕುಸ್ತಿಪಟು ಮೊರ್ಟೆಜಾ ಗಿಯಾಸಿ ವಿರುದ್ಧ ಬಜರಂಗ್ ಪೂನಿಯಾ 2-1 ಅಂತರದಿಂದ ಜಯಗಳಿಸಿದರು. ಹೀಗೆ ಸೆಮಿಫೈನಲ್ ಪ್ರವೇಶವನ್ನು ಪಡೆದುಕೊಂಡ ಬಜರಂಗ್ ಪೂನಿಯಾ ಅಜರ್‌ಬೈಜನಿಯದ ಕುಸ್ತಿಪಟು ಹಾಜಿ ಅಲಿಯವ್ ವಿರುದ್ಧ 5-12 ಅಂತರದಿಂದ ಸೋಲುಂಡು ಕಂಚಿನ ಪದಕದ ಸುತ್ತಿನಲ್ಲಿ ಕಜಕಿಸ್ತಾನದ ದೌಲತ್ ನಿಯಾಜ್ ಬೆಕಾವೋ ವಿರುದ್ಧ 8-0 ಅಂತರದಿಂದ ಗೆಲ್ಲುವುದರ ಮೂಲಕ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, August 7, 2021, 16:51 [IST]
Other articles published on Aug 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X