ಬಾಕ್ಸರ್ ವಿಜೇಂದರ್ 8ನೇ ಬಾರಿ ಸೂಪರ್ ಪೆಸಿಫಿಕ್ ಚಾಂಪಿಯನ್!

Written By: Ramesh

ನವದೆಹಲಿ, ಡಿಸೆಂಬರ್. 18 : ಭಾರತದ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಸತತ 8ನೇ ಬಾರಿಗೆ ಏಷ್ಯಾ ಪೆಸಿಫಿಕ್ ಚಾಂಪಿಯನ್ ಪಟ್ಟಕ್ಕೇರಿದರು.

ಶನಿವಾರ ತ್ಯಾಗರಾಜ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜೇಂದರ್ ಅವರು 3 ಸುತ್ತಿನಲ್ಲಿ 39-37, 37-38, 39-37 ಅಂತರದಿಂದ ತಾಂಜಾನಿಯಾದ ಫ್ರಾನ್ಸಿಸ್ ಚೆಕಾ ಅವರನ್ನು ಸೋಲಿಸಿ ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಚಾಂಪಿಯನ್ ನಲ್ಲಿ 8ನೇ ಬಾರಿ ಪ್ರಶಸ್ತಿ ಗೆದ್ದ ಸರದಾರ ಎನಿಸಿದರು.

Vijender Singh takes less than 10 minutes to retain WBO Asia Pacific title

10 ಸುತ್ತುಗಳು ನಡೆಯ ಬೇಕಿದ್ದ ಈ ಪಂದ್ಯ ಕೇವಲ 3 ಸುತ್ತಿನಲ್ಲಿ ಅಂತ್ಯ ಕಂಡಿತು. ಕೇವಲ ಹತ್ತು ನಿಮಿಷಗಳ ಅವಧಿಯಲ್ಲಿಯೇ ವಿಜೇಂದರ್ ಅವರು 34 ವರ್ಷದ ಫ್ರಾನ್ಸಿಸ್ ಅವರನ್ನು ಸೋಲಿಸಿದರು.

ಈ ಮೂಲಕ ಸತತ 8ನೇ ಬಾರಿಗೆ ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಚಾಂಪಿಯನ್ ಪ್ರಶಸ್ತಿಯನ್ನು ತಮ್ಮ ಹತ್ತಿರ ಉಳಿಸಿಕೊಂಡರು.

ಬಾಬಾ ರಾಮ್ ದೇವ್, ಒಲಿಂಪಿಯನ್ ಬಾಕ್ಸರ್ ಮೇರಿ ಕೋಮ್, ಕುಸ್ತಿಪಟು ಯೋಗೇಶ್ವರ್ ದತ್ ಈ ಪಂದ್ಯವನ್ನು ವೀಕ್ಷಿಸಿದರು.

Story first published: Sunday, December 18, 2016, 14:31 [IST]
Other articles published on Dec 18, 2016

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ