ಚಳಿಗಾಲದ ಒಲಿಂಪಿಕ್ಸ್‌ಗೆ ಇಂದು ಚಾಲನೆ, ಜಿಯೋ ಟಿವಿಯಲ್ಲಿ ಲೈವ್‌

Posted By:
Winter Olympics 2018 starts from today

ಪ್ಯೊಂಗ್‌ಚಾಂಗ್, ಫೆಬ್ರವರಿ 09: ಇಂದಿನಿಂದ ವಿಶ್ವ ಚಳಿಗಾಲದ ಒಲಿಂಪಿಕ್ಸ್‌ ಕ್ರೀಡಾಕೂಟ ಪ್ರಾರಂಭಗೊಂಡಿದೆ. ಕೂಟದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ರಾತ್ರಿ ನಡೆಯುತ್ತದಾದರೂ ಶುಕ್ರವಾರ ಬೆಳಿಗ್ಗೆ ಕೆಲವು ಆಟಗಳನ್ನು ಪ್ರಾರಂಭಿಸಲಾಗಿದೆ. ರಿಲಯನ್ಸ್‌ ಜಿಯೋ ಟಿವಿಯಲ್ಲಿ ಕೂಟದ ನೇರ ಪ್ರಸಾರ ನೋಡಲು ಸಿಗಲಿದೆ.

2018ರ ಚಳಿಗಾಲದ ಒಲಿಂಪಿಕ್ಸ್‌ ದಕ್ಷಿಣ ಕೊರಿಯಾದ ಪ್ಒಂಗ್‌ಚಾಂಗ್ ನಲ್ಲಿ ನಡೆಯುತ್ತಿದ್ದು ವಿಶ್ವದ 92 ರಾಷ್ಟ್ರಗಳು ಚಳಿಗಾಲದಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾಗವಹಿಸಿವೆ. 2952 ಕ್ರೀಡಾಪಟುಗಳು ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ಕ್ರೀಡಾಕೂಟಕ್ಕೆ ದಕ್ಷಿಣ ಕೊರಿಯಾದ ದಕ್ಷಿಣ ಕೊರಿಯಾದ ಗಾಯಕಿ ಜಾಂಗ್‌ ಹೈ ಜಿ ಚಾಲನೆ ನೀಡಲಿದ್ದು, ದ.ಕೊರಿಯಾದ ಅಧ್ಯಕ್ಷ ಕಿಮ್‌ ಜಾಂಗ್ ಉನ್ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಚಳಿಗಾಲದ ಕ್ರೀಡಾಕೂಟದಲ್ಲಿ ಭಾರತವೂ ಪಾಲ್ಗೊಂಡಿದ್ದು ಇಲ್ಲಿನ ಕ್ರೀಡಾಗ್ರಾಮದಲ್ಲಿ ನಡೆದ ಅಧಿಕೃತ ಸ್ವಾಗತ ಕಾರ್ಯಕ್ರಮದಲ್ಲಿ ಭಾರತದ ತ್ರಿವರ್ಣಧ್ವಜವನ್ನು ಹಾರಿಸಲಾಯಿತು. ಲೂಜ್‌ (ಜಾರುಬಂಡಿ) ಸ್ಪರ್ಧಿ ಶಿವ ಕೇಶವನ್‌, ಚೆಫ್‌ ಡೆ ಮಿಷನ್‌ ಹರ್ಜಿಂದರ್‌ ಸಿಂಗ್‌ ಜೊತೆಗೆ ಕ್ರೀಡಾಗ್ರಾಮದ ಮೇಯರ್‌ ಈ ವೇಳೆ ಹಾಜರಿದ್ದರು. ಕ್ರಾಸ್‌ಕಂಟ್ರಿ ಸ್ಕೈಯರ್‌ ಜಗದೀಶ್‌ ಸಿಂಗ್‌ ಅವರು ಇನ್ನಷ್ಟೇ ಆಗಮಿಸಬೇಕಿದ್ದು, ಶುಕ್ರವಾರ ತಂಡವನ್ನು ಸೇರಿಕೊಳ್ಳಲಿದ್ದಾರೆ.

ರಿಲಯನ್ಸ್‌ ಜಿಯೋನಲ್ಲಿ ನೇರ ಪ್ರಸಾರ
ರಿಲಯನ್ಸ್‌ ಜಿಯೋದ ಟಿವಿ ಆಪ್ಲಿಕೇಷನ್‌ನಲ್ಲಿ ಚಳಿಗಾಲದ ನೇರ ಪ್ರಸಾರ ವೀಕ್ಷಣೆಗೆ ಲಭ್ಯವಿದೆ. ಚಳಿಗಾಲದ ಒಲಿಂಪಿಕ್‌ ಕೂಟದ ಸ್ಪರ್ಧೆಗಳ ಡಿಜಿಟಲ್‌ ಪ್ರಸಾರದ ಹಕ್ಕನ್ನು ಅಂತರರಾಷ್ಟ್ರೀಯ ಒಲಿಪಿಂಕ್‌ ಸಮಿತಿ (ಐಒಸಿ) ಜಿಯೊ ಟಿವಿಗೆ ನೀಡಿದೆ.

ಭಾರತದ ಕ್ರೀಡಾಪ್ರೇಮಿಗಳು ಮೊಬೈಲ್‌ನಲ್ಲೇ ಕೂಟವನ್ನು ವೀಕ್ಷಿಸಬಹುದಾಗಿದ್ದು ಈ ಬಗ್ಗೆ ಐಒಸಿ ಜೊತೆ ಜಿಯೊ ಟಿವಿ ಒಪ್ಪಂದ ಮಾಡಿಕೊಂಡಿದೆ ಎಂದು ರಿಲಯನ್ಸ್‌ ಹೇಳಿದೆ.

ಸ್ಕೀಯಿಂಗ್‌, ಸ್ಕೇಟಿಂಗ್‌, ಲೂಜ್‌, ಸ್ಕೈ ಜಂಪಿಂಗ್‌, ಐಸ್‌ ಹಾಕಿ, ಸ್ನೋ ಬೋರ್ಡಿಂಗ್ ಸೇರಿದಂತೆ 15 ವಿಭಾಗಗಳಲ್ಲಿ 102 ಸ್ಪರ್ಧೆಗಳು ಕೂಟದಲ್ಲಿ ನಡೆಯಲಿವೆ. ಭಾರತ ಸೇರಿದಂತೆ 92 ರಾಷ್ಟ್ರಗಳು ಭಾಗವಹಿಸುತ್ತಿವೆ.

'ಲೂಜ್‌ (ಜಾರುಬಂಡಿ)ಕ್ರೀಡೆಯಲ್ಲಿ ಶಿವ ಕೇಶವನ್‌ ಹಾಗೂ ಕ್ರಾಸ್‌ ಕಂಟ್ರಿ ಸ್ಕೈಯರ್‌ ಜಗದೀಶ್‌ ಸಿಂಗ್‌ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಜಿಯೊ ಟಿವಿ ಮಾತ್ರವಲ್ಲದೇ, ಐಒಸಿಯ ಒಲಿಪಿಂಕ್‌ ಚಾನಲ್‌ನಲ್ಲೂ ನೇರ ಪ್ರಸಾರ ಇದೆ' ಎಂದು ತಿಳಿಸಲಾಗಿದೆ.

Story first published: Friday, February 9, 2018, 16:36 [IST]
Other articles published on Feb 9, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ