ವಿಶ್ವಕಪ್ : ನ್ಯೂಜಿಲೆಂಡ್ ಗೆ ಸುಲಭ ತುತ್ತಾದ ಸ್ಕಾಟ್ಲೆಂಡ್

Posted By:

ಡುನೇಡಿನ್, ಫೆ.17: ಅತಿಥೇಯ ನ್ಯೂಜಿಲೆಂಡ್ ತಂಡ ಮತ್ತೊಮ್ಮೆ ಆಲ್ ರೌಂಡ್ ಪ್ರದರ್ಶನದ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿದೆ. ಮಂಗಳವಾರ ನಡೆದ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೀವಿಸ್ 7 ವಿಕೆಟ್ 142 ರನ್ ಟಾರ್ಗೆಟ್ ತಲುಪಿ ವಿಜಯ ಪತಾಕೆ ಹಾರಿಸಿತು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡದ ಬ್ಯಾಟಿಂಗ್ ಶಕ್ತಿಗೆ ನ್ಯೂಜಿಲೆಂಡ್ ಎಡಗೈ ವೇಗದ ಬೌಲರ್ ಕೋರಿ ಆಂಡರ್ಸನ್ ಬಲವಾದ ಪೆಟ್ಟು ನೀಡಿದರು. ತಂಡದ ಮೊತ್ತ 12 ರನ್ ಆಗಿದ್ದಾಗಲೇ 4 ಪ್ರಮುಖ ವಿಕೆಟ್ ಗಳು ಉದುರಿತ್ತು.

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

ಮಧ್ಯಮ ಕ್ರಮಾಂಕದಲ್ಲಿ ಬಂದ ಮಕಾನ್ 56, ಬೆರಿಂಗ್ಟನ್ 50 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಆದರೆ, ಸ್ಕಾಟ್ಲೆಂಡ್ ತಂಡ 36.2 ಓವರ್ಸ್ ಗಳಲ್ಲಿ 142 ಸ್ಕೋರಿಗೆ ಆಲೌಟ್ ಆಯಿತು.

World Cup: New Zealand make it two in a row

3/18 ಪಡೆದ ಆಂಡರ್ಸನ್ ಗೆ ಡೇನಿಯಲ್ ವೆಟ್ಟೋರಿ 3/24 ಹಾಗೂ ಆರಂಭಿಕ ವೇಗಿಗಳಾದ ಟಿಮ್ ಸೌಥಿ 2/35, ಟ್ರೆಂಟ್ ಬೌಲ್ಟ್ 2/21 ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ನಾಯಕ ಬ್ರೆಂಡನ್ ಮೆಕಲಮ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಫಲಕೊಟ್ಟಿತು.

143ರನ್ ಚೇಸ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭವೇನೂ ಉತ್ತಮವಾಗಿರಲಿಲ್ಲ. ಗಪ್ಟಿಲ್ 17, ಮೆಕಲಮ್ 15 ರನ್ ಗಳಿಸಿ ಔಟ್ ಆದರು. ಕೇನ್ ವಿಲಿಯಮ್ಸನ್ 38 ರನ್ ಗಳಿಸಿದರು. ಎಲಿಯಟ್ 29 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.

ಅದರೆ, ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಕಿವೀಸ್ ಅಂತಿಮವಾಗಿ 3 ವಿಕೆಟ್ ಉಳಿಸಿಕೊಂಡು 24.5 ಓವರ್ ಗಳಲ್ಲಿ ಗುರಿ ತಲುಪಿತು. ಸ್ಕಾಟ್ಲೆಂಡ್ ಪರ ವಾರ್ಡ್ಲ ಹಾಗೂ ಡೇವಿ ತಲಾ 3 ವಿಕೆಟ್ ಪಡೆದರು.

Story first published: Tuesday, February 17, 2015, 9:31 [IST]
Other articles published on Feb 17, 2015

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ