ಮೊದಲ ಗ್ರಾಂಡ್‌ಸ್ಲಾಮ್‌ಗೆ ಮುತ್ತಿಟ್ಟು ಸಂಭ್ರಮಿಸಿದ ಕೆರೊಲಿನಾ

Posted By:
Wozniacki won her first ever grand slam

ಮೆಲ್ಬೋರ್ನ್‌, ಜನವರಿ 28: ಡೆನ್ಮಾರ್ಕ್‌ನ ಆಟಗಾರ್ತಿ ಕರೊಲಿನಾ ವೋಜ್ನಿಯಾಕಿ ಅವರು ಆಸ್ಟ್ರೇಲಿಯಾ ಓಪನ್ ಟೂರ್ನಿ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟು ಸಂಭ್ರಮಿಸಿದ್ದಾರೆ.

ಫೈನಲ್‌ ಪಂದ್ಯದಲ್ಲಿ ರೊಮೇನಿಯಾದ ಸಿಮೋನಾ ಹಲೆಪ್‌ ಅವರನ್ನು ಎದುರಿಸಿದ ಅವರು 7-6, 3-6, 6-4 ರಲ್ಲಿ ಸಿಮೋನಾ ಅವರನ್ನು ಸೋಲಿಲಿ ತಮ್ಮ ಜೀವಮಾನದ ಮೊದಲ ಗ್ರಾಂಡ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ಮೊದಲ ಸೆಟ್‌ನಲ್ಲಿ ತಮ್ಮ ನಿಖರ ಸರ್ವ್‌ ಮತ್ತು ಬ್ಯಾಕ್‌ಹ್ಯಾಂಡ್‌ ಶಾಟ್‌ಗಳಿಂದ ಎದುರಾಳಿಯನ್ನು ಪೇಚಿಗೆ ಸಿಲುಕಿಸಿದ ಕರೊಲಿನಾ ಎರಡನೇ ಸೆಟ್‌ನಲ್ಲಿ ನೀರಸ ಆಟವಾಡಿ ಸೋತರು. ಆದರೆ ಮೂರನೇ ಸೆಟ್‌ನಲ್ಲಿ ಪುಟಿದೆದ್ದ ಕರೊಲಿನಾ ಎದುರಾಳಿಗೆ ಚೇತರಿಸಿಕೊಳ್ಳಲು ಅವಕಾಶವೇ ನೀಡದೆ ಸೋಲಿಸಿದರು.

ಮೊದಲ ಗ್ರಾಂಡ್‌ ಸ್ಲಾಮ್‌ ಪ್ರಶಸ್ತಿ ಕೈಗೆ ಬರುತ್ತಿದ್ದಂತೆ ಭಾವುಕರಾದ ಕರೊಲಿನಾ ಅವರು ಅಂಗಳದಲ್ಲೆ ಕಣ್ಣ ನೀರು ಸುರಿಸಿ ಸಂತೋಶ ವ್ಯಕ್ತಪಡಿಸಿದರು.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿಯೂ ಭಾವುಕರಾದ ಅವರು 'ಇಷ್ಟೊಂದು ಭಾವುಕಳಾಗಿದ್ದು ಇದೇ ಮೊದಲು' ಎಂದರು. ತಮ್ಮ ಎದುರಾಳಿ ಸಿಮೋನಾ ಅವರನ್ನು ಹೊಗಳಿದ ಕರೊಲಿನಾ 'ಆಕೆ ಅತ್ಯುತ್ತಮ ಆಟಗಾರ್ತಿ, ಟೂರ್ನಿಯ ಪ್ರಾರಂಭದಲ್ಲಿ ಅತ್ಯುತ್ತಮವಾಗಿ ಆಡಿಕೊಂಡು ಬಂದು ಕೊನೆಯ ಪಂದ್ಯದಲ್ಲಿ ಸೋತಿದ್ದು, ಆಕೆಗೆ ಬೇಸರ ತಂದಿರಬಹುದು' ಎಂದರು.

Story first published: Sunday, January 28, 2018, 14:54 [IST]
Other articles published on Jan 28, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ