For Quick Alerts
ALLOW NOTIFICATIONS  
For Daily Alerts

ಬಿಡಬ್ಲ್ಯೂಎಫ್ ಪ್ರಚಾರಕ್ಕೆ ಭಾರತದ ತಾರೆ ಪಿವಿ ಸಿಂಧು ರಾಯಭಾರಿ

BWF names PV Sindhu as an ambassador for its campaign

ನವದೆಹಲಿ, ಏಪ್ರಿಲ್ 22: ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್‌)ನ ಪ್ರಚಾರ ರಾಯಭಾರಿಯಾಗಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹೆಸರಿಸಲ್ಪಟ್ಟಿದ್ದಾರೆ. ಬಿಡಬ್ಲ್ಯೂಎಫ್‌ 'ಐ ಆ್ಯಮ್ ಬ್ಯಾಡ್ಮಿಂಟನ್' ಎಂಬ ಜಾಗೃತಿ ಕಾರ್ಯ ನಡೆಸುತ್ತಿದೆ. ಇದರ ಪ್ರಚಾರ ರಾಯಭಾರಿಯಾಗಿ ಭಾರತೀಯೆ ಆಯ್ಕೆಯಾಗಿದ್ದಾರೆ.

ಬಿಡಬ್ಲ್ಯೂಎಫ್‌ ಜಾಗೃತಿ ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ ಆಟಗಾರರಿಗೆ ಬ್ಯಾಡ್ಮಿಂಟನ್ ಬಗೆಗಿನ ತಮ್ಮ ಪ್ರೀತಿ ಮತ್ತು ಗೌರವ ಹೇಳಿಕೊಳ್ಳಲು ವೇದಿಕೆ ಒದಗಿಸುವುದು ಮತ್ತು ಪ್ರಾಮಾಣಿಕ, ಸ್ವಚ್ಛ ಆಟ ಆಡುವ ಬಗ್ಗೆ ಪ್ರಮಾಣ ತೆಗೆದುಕೊಳ್ಳುವಂತೆ ಮಾಡುವುದಾಗಿದೆ.

'ಈ ಪ್ರಚಾರ ಒಂದೇ ಸಂದೇಶದ ಮೂಲಕ ಆರಂಭಗೊಳ್ಳುತ್ತದೆ. ನಾವು ರಾಯಭಾರಿಗಳಾಗಿ ಇದನ್ನು ಹೈಲೈಟ್ ಮಾಡಲು ಸಾಧ್ಯವಾದರೆ, ಇದು ಹೆಚ್ಚಿನ ಆಟಗಾರರಿಗೆ ಹರಡುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು 24ರ ಹರೆಯದ ಸಿಂಧು ಹೇಳಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಪಿವಿ ಸಿಂಧು, ಶುದ್ಧ ಮತ್ತು ಪ್ರಾಮಾಣಿಕ ಆಟ ಆಡೋದು ತುಂಬಾ ಮುಖ್ಯ ಎಂದಿದ್ದಾರೆ. ಅಂದ್ಹಾಗೆ, ಐ ಆ್ಯಮ್ ಕ್ಲೀನ್, ಐ ಆ್ಯಮ್ ಹಾನೆಸ್ಟ್, ಐ ಆ್ಯಮ್ ಬ್ಯಾಡ್ಮಿಂಟನ್ (ನಾನು ಪರಿಶುದ್ಧ, ನಾನು ಪ್ರಮಾಣಿಕ, ನಾನು ಬ್ಯಾಡ್ಮಿಂಟನ್) ಇವು ಮೂರು ಈ ಜಾಗೃತಿ ಕಾರ್ಯಕ್ರಮದ ಪ್ರಮುಖ ಸಾಲುಗಳು.

Story first published: Wednesday, April 22, 2020, 17:07 [IST]
Other articles published on Apr 22, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+