CWG 2022: ಬ್ಯಾಡ್ಮಿಂಟನ್‌ಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆದ ಲಕ್ಷ್ಯಸೇನ್‌

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ 2022ರ 11ನೇ ದಿನದ ಸ್ಪರ್ಧೆಯಲ್ಲಿ ಭಾರತ ಸತತ ಎರಡೇ ಚಿನ್ನದ ಪದಕವನ್ನ ಗೆದ್ದು ಬೀಗಿದೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಭಾರತದ ಯುವ ಬ್ಯಾಡ್ಮಿಂಟನ್ ತಾರೆ ಲಕ್ಷ್ಯಸೇನ್‌, ಮಲೇಷಿಯಾದ 22 ವರ್ಷದ ಯುವ ಆಟಗಾರ ಎನ್‌ಜಿ ಟಾಜಿ ಯಾಂಗ್ ಅವರೊಂದಿಗೆ ಕಾದಾಟ ನಡೆಸಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದ್ದಾರೆ.

ಮೊದಲ ಗೇಮ್‌ನ್ಲಿ 19-21 ಅಂತರದಲ್ಲಿ ಸೋಲನ್ನ ಅನುಭವಿಸಿದ್ದ ಲಕ್ಷ್ಯಸೇನ್ ಎರಡು ಮತ್ತು ಮೂರನೇ ಗೇಮ್‌ನಲ್ಲಿ ಅದ್ಭುತ ಆಟವಾಡುವ ಮೂಲಕ ಮಲೇಷಿಯಾದ ಆಟಗಾರನಿಗೆ ಬೆವರಿಳಿಸಿದರು. ಜೊತೆಗೆ 19-21, 21-9, 21-16 ಗೇಮ್‌ಗಳಿಂದ ಜಯಿಸುವ ಮೂಲಕ ದಿನದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಗೆದ್ದಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್ 2022: ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಪಿ.ವಿ ಸಿಂಧುಕಾಮನ್‌ವೆಲ್ತ್‌ ಗೇಮ್ಸ್ 2022: ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಪಿ.ವಿ ಸಿಂಧು

ಎರಡನೇ ಗೇಮ್‌ನಲ್ಲಿ ಏಕಸ್ವಾಮ್ಯ ಪ್ರದರ್ಶನ ನೀಡಿದ ಲಕ್ಷ್ಯಸೇನ್‌ ಮಿಡ್ ಗೇಮ್‌ನಲ್ಲಿ ಮುನ್ನಡೆ ಸಾಧಿಸಿದ್ದಲ್ಲದೆ, ಎರಡನೇ ಗೇಮ್‌ನಲ್ಲಿ 21-9ರ ಭಾರೀ ಅಂತರದಲ್ಲಿ ಪ್ರಬಲವಾಗಿ ಗೇಮ್ ಗೆದ್ದರು. ಇದಲ್ಲದೆ ಮೂರನೇ ಗೇಮ್‌ನಲ್ಲಿಯೂ ಸಖತ್ ಆಟ ಪ್ರದರ್ಶನದ ಮೂಲಕ ಪಂದ್ಯವನ್ನ ತನ್ನದಾಗಿಸಿಕೊಂಡರು.

ಮೂರನೇ ಗೇಮ್‌ನಲ್ಲಿ ಮಲೇಷಿಯಾದ ಟಾಜಿ ಯಾಂಗ್ ಪ್ರತಿಸ್ಪರ್ಧೆ ಒಡ್ಡಿದಾದ್ರೂ, ಲಕ್ಷ್ಯಸೇನ್ ಆಕ್ರಮಣಾಕಾರಿ ಆಟದ ಎದುರು ಮಂಕಾದರು. ಈ ಗೆಲುವಿನ ಮೂಲಕ ಭಾರತವು 20ನೇ ಪದಕ ಜಯಿಸಿದ್ದು ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ.

ಇದಕ್ಕೂ ಮೊದಲು ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಪಿ.ವಿ ಸಿಂಧು ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಗೇಮ್‌ಗಳಿಂದ ಗೆಲ್ಲುವ ಮೂಲಕ ಸ್ವರ್ಣ ಪದಕ ಜಯಿಸಿದ್ದಾರೆ.

ಒಟ್ಟಾರೆ ಕ್ರೀಡಾಕೂಟದಲ್ಲಿ ಭಾರತ 20 ಚಿನ್ನದ ಪದಕ 15 ಬೆಳ್ಳಿ, 22 ಕಂಚಿನ ಪದಕಗಳೊಂದಿಗೆ ಒಟ್ಟಾರೆ 57 ಪದಕಗಳನ್ನ ಗೆದ್ದುಕೊಂಡಿದೆ. ಈ ಮೂಲಕ ನ್ಯೂಜಿಲೆಂಡ್‌ ಅನ್ನು ಹಿಂದಿಕ್ಕಿ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ.

For Quick Alerts
ALLOW NOTIFICATIONS
For Daily Alerts
Story first published: Monday, August 8, 2022, 16:55 [IST]
Other articles published on Aug 8, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X