ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Flashback 2022: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡ

Flashback 2022: Indian Womens Cricket Team Wins Silver Medal At Commonwealth Games

ಆಗಸ್ಟ್ 7ರ ಭಾನುವಾರದಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 2022ರ ಕಾಮನ್‌ವೆಲ್ತ್ ಗೇಮ್ಸ್ ಫೈನಲ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಐದು ಬಾರಿಯ ಟಿ20 ಚಾಂಪಿಯನ್ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ 9 ರನ್‌ಗಳ ರೋಚಕ ಸೋಲು ಕಂಡು ಚೊಚ್ಚಲ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.

ಎಡ್ಜ್‌ಬಾಸ್ಟನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ 162 ರನ್‌ಗಳ ಬೆನ್ನಟ್ಟಿದ ಭಾರತ ತಂಡಕ್ಕೆ ನಾಯಕಿ ಹರ್ಮನ್‌ಪ್ರೀತ್ ಕೌರ್ 43 ಎಸೆತಗಳಲ್ಲಿ 65 ರನ್ ಬಾರಿಸಿ ತೀವ್ರ ಸವಾಲು ಒಡ್ಡಿದ್ದರು. ಕೌರ್‌ಗೆ ಜೆಮಿಮಾ ರೋಡ್ರಿಗಸ್ 33 ರನ್ ಗಳಿಸಿ ಸಾಥ್ ನೀಡಿದ್ದರು. ಇವರಿಬ್ಬರು 71 ಎಸೆತಗಳಲ್ಲಿ 96 ರನ್ ಗಳಿಸಿ ಭಾರತ ತಂಡವನ್ನು ಗೆಲುವಿನ ಗಡಿಗೆ ಮುನ್ನಡೆಸಿದ್ದರು.

Flashback 2022: ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಟಾಪ್ 10 ಆಟಗಾರರು

ಆದರೆ ಮಧ್ಯಮ ಓವರ್‌ಗಳಲ್ಲಿ ಭಾರತ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಂಡಿದ್ದರಿಂದ ಪಂದ್ಯ ವಿಶ್ವದ ನಂ.1 ಆಸ್ಟ್ರೇಲಿಯಾ ಕಡೆ ತಿರುಗಿತು. ಭಾರತ 34 ರನ್‌ಗಳ ಅಂತರದಲ್ಲಿ ತನ್ನ ಕೊನೆಯ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು. ಆಸೀಸ್‌ನ ಆಫ್ ಸ್ಪಿನ್ನರ್ ಆಶ್ಲೀಗ್ ಗಾರ್ಡ್ನರ್ 16 ರನ್‌ಗೆ 3 ವಿಕೆಟ್ ಪಡೆದು ಮಿಂಚಿದರು. ನಾಲ್ಕನೇ ಶ್ರೇಯಾಂಕದ ಭಾರತ ತಂಡವು 152 ರನ್‌ಗಳಿಗೆ ಸರ್ವಪತನ ಕಂಡು ಭಾರತದ ಮಹಿಳೆಯರು ತಮ್ಮ ಚೊಚ್ಚಲ ಕಾಮನ್‌ವೆಲ್ತ್ ಗೇಮ್ಸ್ ಕ್ರಿಕೆಟ್ ಅಭಿಯಾನದಲ್ಲಿ ಬೆಳ್ಳಿಗೆ ತೃಪ್ತಿಪಡಬೇಕಾಯಿತು.

ಪಂದ್ಯದ ವಿವರ

ಪಂದ್ಯದ ವಿವರ

ಆಸ್ಟ್ರೇಲಿಯಾದ ಆಲ್‌ರೌಂಡರ್ ತಹ್ಲಿಯಾ ಮೆಕ್‌ಗ್ರಾತ್ ಅವರು ಕೋವಿಡ್-19 ಪಾಸಿಟಿವ್ ಪರೀಕ್ಷೆ ನಡೆಸಿದ್ದರೂ ಸಹ ಆಡುವ 11ರ ಬಳಗದಲ್ಲಿ ಸೇರ್ಪಡೆಗೊಳ್ಳುವ ಚರ್ಚೆಗಳ ಮೇಲೆ ಟಾಸ್ ವಿಳಂಬವಾಯಿತು, ಅನಂತರ ಟಾಸ್ ಗೆದ್ದ ಮೆಗ್ ಲ್ಯಾನಿಂಗ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ನಾಯಕಿ ಮೆಗ್ ಲ್ಯಾನಿಂಗ್ 26 ಎಸೆತಗಳಲ್ಲಿ 36 ರನ್ ಮತ್ತು ಬೆತ್ ಮೂನಿ 41 ಎಸೆತಗಳಲ್ಲಿ 61 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರಿಬ್ಬರು 47 ಎಸೆತಗಳಲ್ಲಿ 74 ರನ್ ಜೊತೆಯಾಟ ನೀಡಿದ್ದರಿಂದ ಆಸ್ಟ್ರೇಲಿಯ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 161 ರನ್ ಗಳಿಸಿತು.

ರೇಣುಕಾ ಸಿಂಗ್ ಮತ್ತು ಸ್ನೇಹ್ ರಾಣಾ ತಲಾ ಎರಡು ವಿಕೆಟ್

ರೇಣುಕಾ ಸಿಂಗ್ ಮತ್ತು ಸ್ನೇಹ್ ರಾಣಾ ತಲಾ ಎರಡು ವಿಕೆಟ್

ಭಾರತದ ಪರ ರೇಣುಕಾ ಸಿಂಗ್ ಮತ್ತು ಸ್ನೇಹ್ ರಾಣಾ ತಲಾ ಎರಡು ವಿಕೆಟ್ ಪಡೆದರೆ, ದೀಪ್ತಿ ಶರ್ಮಾ ಮತ್ತು ರಾಧಾ ಯಾದವ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

ಪ್ರತ್ಯುತ್ತರವಾಗಿ, ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರು ಮೇಗನ್ ಶುಟ್ ಬೌಲ್ ಮಾಡಿದ ಮೊದಲ ಓವರ್‌ನಲ್ಲಿ ಎರಡು ಬೌಂಡರಿ ಬಾರಿಸಿದಷ್ಟೇ ಬೇಗ ಔಟಾದರು. ಸ್ಮೃತಿ ಮಂಧಾನಾ ಕೇವಲ 6 ರನ್ ಗಳಿಸಿ ನಿರಾಸೆ ಮೂಡಿಸಿದರು.

ಜೆಮಿಮಾ, ಹರ್ಮನ್‌ಪ್ರೀತ್ ನಡುವೆ ಬಲವಾದ ಜೊತೆಯಾಟ

ಜೆಮಿಮಾ, ಹರ್ಮನ್‌ಪ್ರೀತ್ ನಡುವೆ ಬಲವಾದ ಜೊತೆಯಾಟ

22 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಜೆಮಿಮಾ ರೋಡ್ರಿಗಸ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಜೊತೆಗೂಡಿ ಮೊತ್ತವನ್ನು 118 ರನ್‌ಗಳಿಗೆ ಕೊಂಡೊಯ್ದರು. ಈ ವೇಳೆ ಎಡ್ಜ್‌ಬಾಸ್ಟನ್‌ನಲ್ಲಿ ಅಭಿಮಾನಿಗಳ ಹೆಚ್ಚಿನ ಬೆಂಬಲವು ಭಾರತಕ್ಕೆ ಇತ್ತು.

ಭಾರತವು ಆಸ್ಟ್ರೇಲಿಯಾ ತಂಡದ ಮೇಲೆ ಹಿಡಿತ ಸಾಧಿಸಿತು ಎಂದುಕೊಂಡಿರುವಾಗ ರೋಡ್ರಿಗಸ್ ಅವರು 15ನೇ ಓವರ್‌ನಲ್ಲಿ 33 ರನ್‌ಗಳಿಗೆ ಮೇಗನ್ ‍ಷುಟ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು, ಆಗ 96 ರನ್‌ಗಳ ಜೊತೆಯಾಟ ಕೊನೆಗೊಂಡಿತು. ನಂತರ ಒಂದರ ಹಿಂದೆ ಒಂದರಂತೆ ವಿಕೆಟ್ ಬಿದ್ದವು. ಅಂತಿಮವಾಗಿ ಭಾರತ ಮಹಿಳಾ ತಂಡ 152 ರನ್‌ಗಳಿಗೆ ಆಲೌಟ್ ಆಯಿತು.

ಇದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಕ್ರಿಕೆಟ್‌ನಲ್ಲಿ ಎರಡನೇ ಪದಕವಾಗಿದೆ. ಕೌಲಾಲಂಪುರ್‌ದಲ್ಲಿ 1998ರಲ್ಲಿ, ಪುರುಷರ 50-ಓವರ್ ಲಿಸ್ಟ್ ಎ ಪಂದ್ಯಾವಳಿಯಲ್ಲಿ ಆಸೀಸ್ ಬೆಳ್ಳಿ ಗೆದ್ದಿದ್ದರು. ಆಗ ನ್ಯೂಜಿಲೆಂಡ್ ಕೂಡ ಕಂಚು ಗೆದ್ದಿತ್ತು. ದಕ್ಷಿಣ ಆಫ್ರಿಕಾ ಚಿನ್ನದ ಪದಕ ಗೆದ್ದಿತ್ತು.

Story first published: Wednesday, December 21, 2022, 21:14 [IST]
Other articles published on Dec 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X