ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

CWG 2022: ಪುರುಷರ ಹಾಕಿ ಫೈನಲ್‌ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡ ಭಾರತ

CWG 2022: India lost against Australia in Mens hockey final match by 0-7 and settle for silver

ಸದ್ಯ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಇಂದು ( ಆಗಸ್ಟ್ 8 ) ಭಾರತ ಪುರುಷರ ಹಾಕಿ ತಂಡ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಸೆಣಸಾಟವನ್ನು ನಡೆಸಿತ್ತು. ಆದರೆ ಈ ಪಂದ್ಯದಲ್ಲಿ ಭಾರತ ಒಂದೇ ಒಂದು ಗೋಲನ್ನು ಕೂಡ ಬಾರಿಸದೇ 0-7 ಅಂತರದಲ್ಲಿ ಹೀನಾಯ ಸೋಲನ್ನು ಕಂಡು ತನ್ನ ಪಯಣವನ್ನು ಅಂತ್ಯಗೊಳಿಸಿದೆ. ಆಸ್ಟ್ರೇಲಿಯಾದ ನಾಥನ್ ಎಫ್ರಾಮಸ್ 2 ಬಾರಿ ಗೋಲು ಬಾರಿಸುವುದರ ಮೂಲಕ ತಮ್ಮ ತಂಡಕ್ಕೆ ಆಸರೆಯಾಗಿ ಮಿಂಚಿದರು.

ಏಷ್ಯಾಕಪ್ ಆಟಗಾರರ ಆಯ್ಕೆ ಸಭೆ: ಭಾರತ ತಂಡದಲ್ಲಿ ಈ 13 ಆಟಗಾರರಿಗೆ ಸ್ಥಾನ; ಈ ಐವರಲ್ಲಿ ಯಾರಿಗೆ ಅವಕಾಶ?ಏಷ್ಯಾಕಪ್ ಆಟಗಾರರ ಆಯ್ಕೆ ಸಭೆ: ಭಾರತ ತಂಡದಲ್ಲಿ ಈ 13 ಆಟಗಾರರಿಗೆ ಸ್ಥಾನ; ಈ ಐವರಲ್ಲಿ ಯಾರಿಗೆ ಅವಕಾಶ?

ಪಂದ್ಯದ ಮೊದಲನೇ ಕ್ವಾರ್ಟರ್‌ನಲ್ಲಿ 2-0 ಅಂತರದ ಗೋಲುಗಳಿಂದ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ ಎರಡನೇ ಕ್ವಾರ್ಟರ್‌ನಲ್ಲಿ 3-0 ಗೋಲುಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿತು. ಈ ಮೂಲಕ ಪಂದ್ಯದ ಮಧ್ಯಂತರದ ವೇಳೆಗೆ 5-0 ಮುನ್ನಡೆಯನ್ನು ಸಾಧಿಸಿದ ಆಸ್ಟ್ರೇಲಿಯಾ ಮೂರನೇ ಕ್ವಾರ್ಟರ್‌ನಲ್ಲಿ 1-0 ಮತ್ತು ನಾಲ್ಕನೇ ಕ್ವಾರ್ಟರ್‌ನಲ್ಲಿ 1-0 ಗೋಲುಗಳ ಅಂತರದಲ್ಲಿ ಮುನ್ನಡೆ ಸಾಧಿಸಿತು. ಈ ಮೂಲಕ ಆಸ್ಟ್ರೇಲಿಯಾ ಎಲ್ಲಾ ವಿಭಾಗಗಳಲ್ಲಿಯೂ ಸಹ ಭಾರತ ಹಾಕಿ ಆಟಗಾರರನ್ನು ಕಟ್ಟಿಹಾಕಿ ಒಂದೇ ಒಂದು ಗೋಲನ್ನು ಕೂಡ ಬಾರಿಸಲು ಬಿಡದೇ ಸಂಪೂರ್ಣ ಮೇಲುಗೈ ಸಾಧಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.

CWG 2022: ಬೆಳ್ಳಿ ಪದಕ ಗೆದ್ದ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್‌ಗೆ ಕರ್ನಾಟಕ ಸರ್ಕಾರದಿಂದ ನಗದು ಬಹುಮಾನCWG 2022: ಬೆಳ್ಳಿ ಪದಕ ಗೆದ್ದ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್‌ಗೆ ಕರ್ನಾಟಕ ಸರ್ಕಾರದಿಂದ ನಗದು ಬಹುಮಾನ

ಇತ್ತ ಫೈನಲ್ ಪಂದ್ಯದವರೆಗೂ ತಲುಪಿ ಅಂತಿಮ ಹಂತದಲ್ಲಿ ಎಡವಿರುವ ಭಾರತ ಪುರುಷರ ಹಾಕಿ ತಂಡ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.

3 ಬಾರಿ ಫೈನಲ್ ಪ್ರವೇಶ, 3 ಬಾರಿಯೂ ಆಸ್ಟ್ರೇಲಿಯಾ ವಿರುದ್ಧ ಸೋಲು

3 ಬಾರಿ ಫೈನಲ್ ಪ್ರವೇಶ, 3 ಬಾರಿಯೂ ಆಸ್ಟ್ರೇಲಿಯಾ ವಿರುದ್ಧ ಸೋಲು

ಇನ್ನು ಭಾರತ ಪುರುಷರ ಹಾಕಿ ತಂಡ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದ ಇತಿಹಾಸದಲ್ಲಿ ಇಲ್ಲಿಯವರೆಗೂ 3 ಬಾರಿ ಫೈನಲ್ ಪ್ರವೇಶಿಸಿ 3 ಬಾರಿಯೂ ಸಹ ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಕಂಡಂತಾಗಿದೆ. ಮೊದಲಿಗೆ ದೆಹಲಿಯಲ್ಲಿ ನಡೆದಿದ್ದ 2010ರ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಫೈನಲ್ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡ ಆಸ್ಟ್ರೇಲಿಯ ವಿರುದ್ಧ 0-8 ಗೋಲುಗಳ ಅಂತರದಲ್ಲಿ ಸೋಲನ್ನು ಅನುಭವಿಸಿತ್ತು, 2014ರಲ್ಲಿ ಗ್ಲಾಸ್ಗೊದಲ್ಲಿ ನಡೆದಿದ್ದ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾ ಕೂಟದಲ್ಲಿಯೂ ಫೈನಲ್ ಪ್ರವೇಶ ಮಾಡಿದ್ದ ಭಾರತ ಪುರುಷರ ಹಾಕಿ ತಂಡ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 0-4 ಅಂತರದಲ್ಲಿ ಸೋಲನ್ನು ಅನುಭವಿಸಿತ್ತು ಹಾಗೂ ಇದೀಗ ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿಯೂ ಸಹ ಭಾರತ ಪುರುಷರ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ 0-7 ಗೋಲುಗಳ ಅಂತರದಲ್ಲಿ ಸೋತಿದೆ. ಈ ಮೂಲಕ ಭಾರತ ಪುರುಷರ ಹಾಕಿ ತಂಡ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಫೈನಲ್ ಪ್ರವೇಶಿಸಿದಾಗಲೆಲ್ಲಾ ಆಸ್ಟ್ರೇಲಿಯಾ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಸತತ ಏಳನೇ ಚಿನ್ನ ಗೆದ್ದ ಆಸ್ಟ್ರೇಲಿಯಾ

ಸತತ ಏಳನೇ ಚಿನ್ನ ಗೆದ್ದ ಆಸ್ಟ್ರೇಲಿಯಾ

ಇನ್ನು ಆಸ್ಟ್ರೇಲಿಯಾ ಪುರುಷರ ಹಾಕಿ ತಂಡ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ತನ್ನ ಪಾರುಪತ್ಯವನ್ನು ಮುಂದುವರೆಸಿದೆ. ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿರುವ ಆಸ್ಟ್ರೇಲಿಯಾ ಪುರುಷರ ಹಾಕಿ ತಂಡ ಸತತ ಏಳನೇ ಬಾರಿಗೆ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನವನ್ನು ಗೆದ್ದು ಐತಿಹಾಸಿಕ ದಾಖಲೆ ಬರೆದಿದೆ.

ಸ್ಕ್ವಾಡ್

ಸ್ಕ್ವಾಡ್

ಭಾರತ ಹಾಕಿ ಸ್ಕ್ವಾಡ್:

ಗೋಲ್‌ಕೀಪರ್‌ಗಳು: ಪಿಆರ್ ಶ್ರೀಜೇಶ್, ಕ್ರಿಶನ್ ಬಹದ್ದೂರ್ ಪಾಠಕ್

ಡಿಫೆಂಡರ್‌ಗಳು: ವರುಣ್ ಕುಮಾರ್, ಸುರೇಂದರ್ ಕುಮಾರ್, ಹರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್

ಮಿಡ್‌ಫೀಲ್ಡರ್‌ಗಳು: ಮನ್‌ಪ್ರೀತ್ ಸಿಂಗ್ (ನಾಯಕ), ಹಾರ್ದಿಕ್ ಸಿಂಗ್, ಶಂಶೇರ್ ಸಿಂಗ್, ಆಕಾಶದೀಪ್ ಸಿಂಗ್, ನೀಲಕಂಠ ಶರ್ಮಾ

ಫಾರ್ವರ್ಡ್‌ಗಳು: ಮನ್‌ದೀಪ್ ಸಿಂಗ್, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್


ಮುಖ್ಯ ತರಬೇತುದಾರ: ಗ್ರಹಾಂ ರೀಡ್


ಆಸ್ಟ್ರೇಲಿಯಾ:

ಗೋಲ್‌ಕೀಪರ್‌ಗಳು: ಜೋಹಾನ್ ಡರ್ಸ್ಟ್, ಆಂಡ್ರ್ಯೂ ಚಾರ್ಟರ್

ಡಿಫೆಂಡರ್ಸ್: ಜೇಕ್ ಹಾರ್ವಿ, ಮ್ಯಾಟ್ ಡಾಸನ್, ಎಡ್ವರ್ಡ್ ಒಕೆಂಡೆನ್, ಜೋಶುವಾ ಸಿಮಂಡ್ಸ್, ಟಿಮ್ ಹೊವಾರ್ಡ್, ಜೆರೆಮಿ ಹೇವರ್ಡ್

ಮಿಡ್‌ಫೀಲ್ಡರ್‌ಗಳು: ಜೋಶುವಾ ಬೆಲ್ಟ್ಜ್, ಜೇಕ್ ವೆಟ್ಟನ್, ಅರಾನ್ ಜಲೆವ್ಸ್ಕಿ, ಫ್ಲಿನ್ ಒಗಿಲ್ವಿ, ಡೇನಿಯಲ್ ಬೀಲ್


ಫಾರ್ವರ್ಡ್‌ಗಳು: ಟಾಮ್ ವಿಕ್‌ಹ್ಯಾಮ್, ನಾಥಮ್ ಎಫ್ರಾಮ್ಸ್, ಜಾಕೋಬ್ ಆಂಡರ್ಸನ್, ಬ್ಲೇಕ್ ಗೋವರ್ಸ್, ತಿಮೋತಿ ಬ್ರಾಂಡ್


ಮುಖ್ಯ ತರಬೇತುದಾರ: ಕಾಲಿನ್ ಬ್ಯಾಚ್

Story first published: Monday, August 8, 2022, 19:28 [IST]
Other articles published on Aug 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X