ಫ್ರೆಂಚ್ ಓಪನ್: ಸೆಮೀಸ್ ಲಗ್ಗೆ ಇಟ್ಟ ಭಾರತದ ಸಿಂಧು, ಪ್ರಣಯ್, ಶ್ರೀಕಾಂತ್

Posted By:

ಪ್ಯಾರಿಸ್, ಅಕ್ಟೋಬರ್ 28 : ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರೆಸಿರುವ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆಗಳಾದ ಪಿವಿ ಸಿಂಧು, ಎಚ್.ಎಸ್.ಪ್ರಣಯ್ ಹಾಗೂ ಕಿದಾಂಬಿ ಶ್ರೀಕಾಂತ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು 21-14, 21-14 ಅಂತರದಿಂದ ಚೀನಾದ ಚೆನ್ ಯುಫಿ ಅವರನ್ನು ಮಣಿಸಿ ಸೆಮೀಸ್ ಗೆ ಲಗ್ಗೆ ಇಟ್ಟರು.

French Open: India's PV Sindhu, Prannoy and Srikanth entered the semi-finals

ಇನ್ನು ಪುರುಷರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್‌ ನಲ್ಲಿ ದಕ್ಷಿಣ ಕೊರಿಯಾದ ಹೈಯೊಕ್ ಜಿನ್ ಜೀನ್ ವಿರುದ್ಧ ಭಾರತದ ಪ್ರಣಯ್ 21-16, 21-16 ಅಂತರದ ಗೆಲುವು ಸಾಧಿಸಿದರು.

ಇತ್ತೀಚೆಗಷ್ಟೇ ಮುಕ್ತಾಯವಾದ ಡೆನ್ಮಾರ್ಕ್ ಓಪನ್ ನಲ್ಲಿ ಚಾಂಪಿಯನ್ ಆಗಿದ್ದ ಭಾರತದ ಕಿದಾಂಬಿ ಶ್ರೀಕಾಂತ್ ಕೂಡಾ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಚೀನಾದ ಎದುರಾಳಿ ಶೀ ಯುಕೀ ವಿರುದ್ಧ 8-21, 21-19, 21-09 ಸೆಟ್ ಗಳಿಂದ ಗೆಲುವು ಸಾಧಿಸಿ ಸೆಮೀಸ್ ಲಗ್ಗೆ ಇಟ್ಟರು.

Story first published: Saturday, October 28, 2017, 12:26 [IST]
Other articles published on Oct 28, 2017
Please Wait while comments are loading...