ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮಲೇಷ್ಯಾ ಓಪನ್: ಸಿಂಗಲ್ಸ್‌ನಲ್ಲಿ ಹೆಚ್‌ಎಸ್ ಪ್ರಣಯ್ ಭರವಸೆ, ಕ್ವಾ. ಫೈನಲ್ ತಲುಪಿದ ಭಾರತೀಯ

Malaysia Open 2023: HS Prannoy won 2nd round, reaches quarter-finals

ಭಾರತದ ಬ್ಯಾಡ್ಮಿಂಟನ್ ಆಟಗಾರ ಹೆಚ್‌ಎಸ್ ಪ್ರಣಯ್ 2022ರ ಅದ್ಭುತ ಫಾರ್ಮ್‌ಅನ್ನು ಈ ಬಾರಿಯೂ ಮುಂದುವರಿಸಿದ್ದಾರೆ. ಕೌಲಲಾಂಪುರದಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್ ಟೂರ್ನಿಯಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಪ್ರಣಯ್ ಸದ್ಯ ಏಕಾಂಗಿ ಭರವಸೆಯಾಗಿ ಉಳಿದುಕೊಂಡಿದ್ದು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಪ್ರತಿಷ್ಠಿತ ಟೂರ್ನಿಯ ಎರಡನೇ ಸುತ್ತಿನಲ್ಲಿ ಪ್ರಣಯ್ ಅವರು ಇಂಡೋನೇಷ್ಯಾದ ಚಿಕೊ ಔರಾ ದ್ವಿ ವಾಡೊಯೊ ಅವರನ್ನು ಮೂರು ಗೇಮ್‌ಗಳಲ್ಲಿ ಸೋಲಿಸಿದ್ದಾರೆ. ಈ ಮೂಲಕ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವ 19ನೇ ಶ್ರೇಯಾಂಕದ ಆಟಗಾರ ಚಿಕೊ ಔರಾ ದ್ವಿ ವಾಡೊಯೊ ವಿರುದ್ಧ ಪ್ರಣಯ್ 21-9, 15-21, 21-16 ಅಂತರದಿಂದ ಮಣಿಸಿದ್ದಾರೆ. ಒಂದು ಗಂಟೆ 4 ನಿಮಿಷಗಳ ಕಾಲ ನಡೆದ ಈ ಕದನ ನಡೆದಿತ್ತು. ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಣಯ್ ಮಲೇಷ್ಯಾದ ಎನ್‌ಜಿ ತ್ಸೆ ಯೋಂಗ್ ಮತ್ತು ಜಪಾನ್‌ನ ಕೊಡೈ ನರೋಕಾ ನಡುವಿನ ಎರಡನೇ ಸುತ್ತಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

IND vs SL: ವಿರಾಟ್ ಕೊಹ್ಲಿ ಟೀಕಾಕಾರರಿಗೆ ಬಿಸಿ ಮುಟ್ಟಿಸಿದ ಪಾಕ್ ಮಾಜಿ ಕ್ರಿಕೆಟಿಗIND vs SL: ವಿರಾಟ್ ಕೊಹ್ಲಿ ಟೀಕಾಕಾರರಿಗೆ ಬಿಸಿ ಮುಟ್ಟಿಸಿದ ಪಾಕ್ ಮಾಜಿ ಕ್ರಿಕೆಟಿಗ

ಪ್ರಣಯ್ 2022 ರಲ್ಲಿ ಉತ್ತಮ ಫಾರ್ಮ್‌ ಪ್ರದರ್ಶಿಸಿ ಮಿಂಚಿದ್ದರು. BWF ವರ್ಲ್ಡ್ ಟೂರ್ ಫೈನಲ್‌ಗೆ ತಲುಪಿದ ಏಕೈಕ ಭಾರತೀ ಕೂಡ ಎನಿಸಿಕೊಂಡಿದ್ದರು. ವಿಶ್ವ 8ನೇ ಶ್ರೇಯಾಂಕದ ಆಟಗಾರ 2023ರ ಅಭಿಯಾನವನ್ನು ಕೂಡ ಅದ್ಭುತವಾಗಿ ಆರಂಭಿಸಿದ್ದಾರೆ. ಮೊದಲ ಸುತ್ತಿನಲ್ಲಿ ಭಾರತದವರೇ ಆದ 7 ನೇ ಶ್ರೇಯಾಂಕದ ಲಕ್ಷ್ಯ ಸೇನ್ ವಿರುದ್ಧ ಸೆಣೆಸಾಟ ನಡೆಸಬೇಕಾಯಿತು.

ಈ ಕಠಿಣ ಹೋರಾಟದಲ್ಲಿ ಪ್ರಣಯ್ ಗೆಲುವು ಸಾಧಿಸಿ ಮೇಲುಗೈಸ ಸಾಧಿಸಿದ್ದರು. 30ರ ಹರೆಯದ ಪ್ರಣಯ್ 24-22, 12-21, 21-18ರ ಅಂತರದಿಂದ ಪಂದ್ಯವನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದರು. ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಈ ಪಂದ್ಯ ಒಂದು ಗಂಟೆಗೂ ಹೆಚ್ಚು ಕಾಲ ಜಿದ್ದಾಜಿದ್ದಿನಿಂದ ಕೂಡಿತ್ತು.

ಏಕದಿನ ಕ್ರಿಕೆಟ್‌ನಲ್ಲಿ ಸಚಿನ್‌ಗಿಂತ ಬಹಳ ಹೆಚ್ಚು ಶತಕ ಬಾರಿಸಲಿದ್ದಾರೆ ಕೊಹ್ಲಿ ಎಂದ ಗೌತಮ್ ಗಂಭೀರ್ಏಕದಿನ ಕ್ರಿಕೆಟ್‌ನಲ್ಲಿ ಸಚಿನ್‌ಗಿಂತ ಬಹಳ ಹೆಚ್ಚು ಶತಕ ಬಾರಿಸಲಿದ್ದಾರೆ ಕೊಹ್ಲಿ ಎಂದ ಗೌತಮ್ ಗಂಭೀರ್

ಭಾರತದ ಸ್ಟಾರ್ ಶಟ್ಲರ್‌ಗಳಾದ ಕಿಡಂಬಿ ಶ್ರೀಕಾಂತ್ ಮತ್ತು ಪಿವಿ ಸಿಂಧು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರಿಂದ ಪ್ರಣಯ್ ಪುರುಷರ ಸಿಂಗಲ್ಸ್‌ನಲ್ಲಿ ರೇಸ್‌ನಲ್ಲಿ ಉಳಿದುಕೊಂಡಿರು ಏಕೈಕ ಭಾರತೀಯ ಶಟ್ಲರ್ ಎನಿಸಿಕೊಂಡಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದ ನಂತರ ಗಾಯಗೊಂಡು ವಿಶ್ರಾಂತಿ ಪಡೆದ ಬಳಿಕ ಮೊದಲ ಬಾರಿಗೆ ಆಟಕ್ಕೆ ಮರಳಿರುವ ಸಿಂಧು, ಕೆರೊಲಿನಾ ಮರಿನ್ ವಿರುದ್ಧ ಮೂರು ಗೇಮ್‌ಗಳ ಕಠಿಣ ಹೋರಾಟದಲ್ಲಿ ಸೋಲು ಕಂಡಿದ್ದಾರೆ.

Story first published: Thursday, January 12, 2023, 16:11 [IST]
Other articles published on Jan 12, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X