ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮ್ಯಾಚ್ ಫಿಕ್ಸಿಂಗ್: ಮಲೇಷ್ಯಾ ಬ್ಯಾಡ್ಮಿಂಟನ್ ಆಟಗಾರರಿಗೆ 15-20 ವರ್ಷ ನಿಷೇಧ

Malaysian badminton players banned 20, 15 years for match-fixing

ಕೌಲಾಲಂಪುರ್, ಮೇ 2: ಇಬ್ಬರು ಮಲೇಷ್ಯನ್ ಬ್ಯಾಡ್ಮಿಂಟನ್ ಆಟಗಾರರು ವೃತ್ತಿ ಜೀವನಕ್ಕೇ ಕಂಟಕವನ್ನು ತಂದುಕೊಂಡಿದ್ದಾರೆ. ಭ್ರಷ್ಟಾಚಾರ ಮತ್ತು ಮ್ಯಾಚ್ ಫಿಕ್ಸಿಂಗ್ ನಲ್ಲಿ ಕೈ ಜೋಡಿಸಿದ್ದು ಇದಕ್ಕೆಕಾರಣ.

ಅಕ್ರಮದಲ್ಲಿ ತೊಡಗಿದ್ದ ಇಬ್ಬರು ಆಟಗಾರರಿಗೆ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಕ್ರಮವಾಗಿ 20 ಮತ್ತು 15 ವರ್ಷಗಳ ನಿಷೇಧ ಹೇರಿದೆ. ಸ್ವತಃ ಮಲೇಷ್ಯಾ ಕ್ರೀಡಾ ಆಡಳಿತ ಮಂಡಳಿಯೇ ಈ ವಿಚಾರವನ್ನು ಬುಧವಾರ ತಿಳಿಸಿದೆ.

ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್) ಹೇಳಿರುವಂತೆ, ಮಾಚ್ ಫಿಕ್ಸಿಂಗ್ ನಲ್ಲಿ ತೊಡಗಿದ್ದಕ್ಕಾಗಿ ವಿಶ್ವ ಜೂನಿಯರ್ ಮಾಜಿ ಚಾಂಪಿಯನ್ 25ರ ಹರೆಯದ ಜುಲ್ಪಾಡ್ಲಿಜುಲ್ಕಿಫ್ಲಿ ಅವರನ್ನು 20 ವರ್ಷ ನಿಷೇಧಿಸಿ 25,000 ಡಾಲರ್ ಶುಲ್ಕ ವಿಧಿಸಲಾಗಿದ್ದರೆ, 31ರ ಹರೆಯದ ಟಾನ್ ಚುನ್ ಸೀಂಗ್ ಅವರಿಗೆ 15,000 ಡಾಲರ್ ಶುಲ್ಕ ವಿಧಿಸಿ 15 ವರ್ಷಗಳ ನಿಷೇಧ ಹೇರಲಾಗಿದೆ.

ಇಬ್ಬರೂ ಆರೋಪಿಗಳು ಬಿಡಬ್ಲ್ಯೂಎಫ್ ನಿಯಮ ಉಲ್ಲಂಘಿಸಿ ಅವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಮಲೇಷ್ಯಾ ಕ್ರೀಡಾಡಳಿತ ಮಂಡಳಿ ತಿಳಿಸಿದೆ. ಇಬ್ಬರೂ ಆಟಗಾರರು 2013ರಿಂದಲೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಲ್ಲದೆ, ಅಸಮರ್ಪಕ ಅವಧಿಯ, ಅಸಮರ್ಪಕ ಸಂಖ್ಯೆಯ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಡಾ ನೀತಿ ಮುರಿದಿದ್ದಾರೆ ಎಂದು ಅದು ಹೇಳಿದೆ.

ಅದರಲ್ಲೂ ಜುಲ್ಪಾಡ್ಲಿ ಅವರು ದೀರ್ಘ ಕಾಲಾವಧಿವರೆಗೆ ನಿಯಮ ಮೀರಿ ನಡೆದಿದ್ದು ಅಕ್ರಮದಲ್ಲಿ ಪಾಲ್ಗೊಂಡಿದ್ದು ಬಿಡಬ್ಲ್ಯೂಎಫ್ ವಿಚಾರಣೆ ವೇಳೆ ತಿಳಿದುಬಂದಿತ್ತು. ಇಬ್ಬರೂ ಆಟಗಾರೂ ಜನವರಿ 12ರಿಂದ ಬಿಡಬ್ಲ್ಯೂಎಫ್ ನಿಷೇಧಕ್ಕೆ ಒಳಗಾಗಲಿದ್ದಾರೆ. ಅಂದರೆ ಇಲ್ಲಿಗೆ ಇಬ್ಬರೂ ಆಟಗಾರರ ವೃತ್ತಿ ಬದುಕು ಕೊನೆಗೊಂಡಂತೆಯೇ!

Story first published: Wednesday, May 2, 2018, 20:15 [IST]
Other articles published on May 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X